/newsfirstlive-kannada/media/post_attachments/wp-content/uploads/2024/05/PUNE_CAR_1.jpg)
ಮುಂಬೈ: ಪುಣೆಯಲ್ಲಿ ಆಪ್ರಾಪ್ತನೊಬ್ಬ ಪೋರ್ಶ್​ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣನಾಗಿದ್ದನು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನ ರಕ್ತವನ್ನು ಪರೀಕ್ಷೆ ಮಾಡಿದ್ದ ಇಬ್ಬರು ವೈದ್ಯರನ್ನು ಪುಣೆಯ ಕ್ರೈಂ ಬ್ರ್ಯಾಂಚ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪುಣೆಯ ಸರ್ಕಾರಿ ಆಸ್ಪತ್ರೆಯ ಫೊರೆನ್ಸಿಕ್ ಲ್ಯಾಬ್‌ನ ಮುಖ್ಯಸ್ಥ ಡಾ.ಅಜಯ್ ಮತ್ತು ಡಾ.ಹರಿ ಹಾರ್ನರ್​ರನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಈ ಇಬ್ಬರ ಫೋನ್​ಗಳನ್ನು ಸೀಜ್ ಮಾಡಿದ್ದಾರೆ. ಪುಣೆಯ ಪೋರ್ಶ್ ಕಾರು ಆಕ್ಸಿಡೆಂಟ್​ ಕೇಸ್​ನಲ್ಲಿ ಅಪ್ರಾಪ್ತ ಬಾಲಕನ ರಕ್ತದ ಮಾದರಿ ಪರೀಕ್ಷೆ ಮಾಡಿದ್ದ ಡಾಕ್ಟರ್ಸ್​ ತಪ್ಪು ಮಾಹಿತಿ ನೀಡಿದ್ದರು. ಮದ್ಯಪಾನ ಮಾಡಿಲ್ಲ, ನೆಗಟೀವ್ ಇದೆ ಎಂದು ಹೇಳಿದ್ದರು ಎಂಬುದು ಗೊತ್ತಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಡಾ ತಾವಡೆ ಮತ್ತು ಆರೋಪಿಯ ತಂದೆ ಅಪಘಾತದ ದಿನ ಫೋನ್‌ನಲ್ಲಿ ಮಾತನಾಡಿದ್ದರು. ಹೀಗಾಗಿ ಇಬ್ಬರನ್ನು ಅರೆಸ್ಟ್ ಮಾಡಿ, ಪೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/05/PUNE_Porsche_Car-1.jpg)
ಪೋರ್ಶ್​ ಕಾರಿನಲ್ಲಿ ವೇಗವಾಗಿ ಬಂದು ಇಬ್ಬರ ಸಾವಿಗೆ ಕಾರಣನಾಗಿದ್ದ ಅಪ್ರಾಪ್ತ ಬಾಲಕ ವೇದಾಂದ್ ಅಗರ್ವಾಲ್ ಮದ್ಯಪಾನ ಮಾಡಿಲ್ಲ ಎಂದು ಡಾಕ್ಟರ್ಸ್​ ರಿಪೋರ್ಟ್ ನೀಡಿದ್ದರು. ಆದ್ರೆ ಎರಡು ಪಬ್​ಗಳಲ್ಲಿ ಬಾಲಕ ಮದ್ಯಪಾನ ಮಾಡಿದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮದ್ಯಪಾನ ಮಾಡಿದ ಬಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಇಬ್ಬರು ಟೆಕ್ಕಿಗಳಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದನು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಡೀ ದೇಶದ್ಯಾಂತ ಭಾರೀ ಸಂಚಲ ಮೂಡಿಸಿತ್ತು.
ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ
ಇನ್ನು ಈ ಸಂಬಂಧ ಮಾತನಾಡಿದ ಪುಣೆಯ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್, ಈ ಪ್ರಕರಣವು ಕುಡಿದ ಅಮಲಿನಲ್ಲಿ ಅಪ್ರಾಪ್ತ ವೇಗವಾಗಿ ಕಾರಿನಲ್ಲಿ ಬಂದು ಇಬ್ಬರ ಸಾವಿಗೆ ಕಾರಣವಾದ ಬಗ್ಗೆ ಅಲ್ಲ. ಅವನ ನಡತೆ, 2 ಬಾರ್‌ಗಳಲ್ಲಿ ಪಾರ್ಟಿ ಮಾಡಿ, ಕಿರಿದಾದ, ಜನದಟ್ಟಣೆಯ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ವೇಗವಾಗಿ ಬಂದಿದ್ದ. ಈ ಬಗ್ಗೆ ಅವನಿಗೆ ಎಲ್ಲದರ ಅರಿವು ಇತ್ತು. ತಾನು ಓಡಿಸುವಾಗ ಅಪಘಾತ ಸಂಭವಿಸಿದ್ರೆ ಜನ ಸಾಯಬಹುದು ಎಂದು ತಿಳಿದಿತ್ತು. ಆದರೂ ವೈದ್ಯರು ಮದ್ಯಪಾನ ಮಾಡಿಯೇ ಇಲ್ಲ ಎಂದು ವರದಿ ನೀಡಿದ್ದರು. ಆರೋಪಿಯ ರಕ್ತದ 2 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us