newsfirstkannada.com

ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ

Share :

Published May 27, 2024 at 6:51am

    ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಎಲ್ಲ ನಾಶ

    ಸಿಡಿಲು ಬಡಿಯುತ್ತಿದ್ದಂತೆ ಆತಂಕಕ್ಕೆ ಒಳಗಾದ ನಗರದ ನಿವಾಸಿಗಳು

    ರೆಮಲ್ ಸೈಕ್ಲೋನ್ ಎಫೆಕ್ಟ್​, ಸಂಪೂರ್ಣ ಮೋಡ ಕವಿದ ವಾತಾವರಣ

ಸೂರ್ಯನ ಬಿಸಿ ಏಟಿಗೆ ಕಂಗೆಟ್ಟು ಬಿಸಿಲೋ ಬಿಸಿಲು ಅಂತಿದ್ದ ಜನರಿಗೆ.. ಮೇಘರಾಜನ ಎಂಟ್ರಿಯಿಂದ ಜನ ನಿಟ್ಟುಸಿರು ಬಿಡ್ತಿದ್ದಾರೆ. ಹೀಗೆ ಬೀಳ್ತಿರೋ ಮಳೆಯಿಂದ ಆಗ್ತಿರೋ ಅವಾಂತರಗಳು ಅಷ್ಟಿಷ್ಟಲ್ಲ.. ವರುಣನ ಅಬ್ಬರಕ್ಕೆ ಕಷ್ಟಪಟ್ಟು ಬೆಳೆದ ರೈತರ ಬೆಳೆಗಳು ನಾಶವಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಈ ನಡುವೆ ಸಾವಿಗೂ ವರುಣ ಕಾರಣವಾಗ್ತಿದ್ದಾನೆ.

ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ರೈತರಲ್ಲಿ ಹೊಸ ಹುರುಪು ಸೃಷ್ಟಿಸಿದೆ. ಒಂದು ಕಡೆ ಬೇಸಿಗೆಯ ಸೆಕೆಗೆ ಬೆಂದು ಹೋಗಿದ್ದ ಜನರು ಮಳೆಯ ಹನಿಗಳ ಸ್ಪರ್ಶಗಳಿಂದ ಫುಲ್​ ಖುಷ್ ಆಗಿದ್ದಾರೆ. ಹೀಗೆ ಒಂದ್ಕಡೆ ಮಳೆರಾಯನ ಆಗಮನ ಆನಂದಕ್ಕೆ ಕಾರಣವಾದ್ರೆ ಮತ್ತೊಂದು ಕಡೆ ಅವಾಂತರಕ್ಕೂ ದಾರಿ ಮಾಡಿಕೊಟ್ಟಿದೆ.. ಸಾವಿಗೂ ವರುಣ ಕಾರಣವಾಗ್ತಿದ್ದಾನೆ.

ವರುಣನ ಸೈಡ್ ಎಫೆಕ್ಟ್​.. 4 ವರ್ಷದ ಬಾಲಕಿ ಸಾವು

ಯಾದಗಿರಿ
ಮಳೆ ಅವಾಂತರಕ್ಕೆ 4 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಚಪೆಟ್ಲಾ ರಸ್ತೆ ಬದಿ ನಡೆದಿದೆ. ಮನೆ ಶೀಟ್‌ ಮೇಲೆ ಇಟ್ಟಿದ್ದ ಕಲ್ಲು ತಲೆ ಮೇಲೆ ಬಿದ್ದಿದ್ದರಿಂದ ಮನಸ್ವಿ ತಿಪ್ಪಣ್ಣ ಯಾದವ್ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಶೀಟ್‌ ಮನೆಯಲ್ಲಿ ಪೋಷಕರ ಜತೆ ಬಾಲಕಿ ವಾಸವಾಗಿದ್ದಳು. ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಮನೆ ಶೀಟ್‌ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಸ್ಥಳದಲ್ಲಿ ಪೋಷಕರ ಅಕ್ರಂದನ ಮುಗಿಲು ಮುಟ್ಟಿತು.

ಬೆಳೆ ನೀರು ಪಾಲು.. ಅನ್ನದಾತರು ಕಂಗಾಲು

ಕಲಬುರಗಿ
ಕಲಬುರಗಿಯಲ್ಲಿ ಸುರಿಯುತ್ತಿರುವ ಅಕಾಲಿಕ ಗಾಳಿ ಮಳೆಗೆ ಈರುಳ್ಳಿ ಫಸಲು ಮಣ್ಣು ಪಾಲಾಗಿದೆ. ಕಲಬುರಗಿ ತಾಲೂಕಿನ ಸೀತನೂರ್ ಗ್ರಾಮದ ರೈತ ಸಂಗನಗೌಡ ಪಾಟೀಲ್​ ಎಂಬುವವರಿಗೆ ಸೇರಿದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಭೀಕರ ಬರಗಾಲದ ನಡುವೆಯೂ ಒಂದು ಎಕರೆಯಲ್ಲಿ ಭರಪೂರ ಫಸಲು ಬೆಳೆದಿದ್ರು. 15 ಕ್ವಿಂಟಲ್ ಈರುಳ್ಳಿ ಬೆಳೆಯನ್ನು ಮರದ ಕೆಳಗಡೆ ರಾಶಿ ಹಾಕಲಾಗಿತ್ತು. ಭಾರೀ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಫಸಲು ಹಾಳಾಗಿ ರೈತ ಕಂಗಾಲಾಗಿದ್ದಾನೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ರಾಯಚೂರು
ರಾಯಚೂರು ಜಿಲ್ಲೆಯಾದ್ಯಂತ ಭರ್ಜರಿ ಮಳೆ ಹಿನ್ನೆಲೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಧಗಧಗನೇ ಹೊತ್ತಿರಿದಿದೆ. ಶಕ್ತಿನಗರದ ದತ್ತಾತ್ರೇಯ ದೇವಸ್ಥಾನದ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಪರಿಣಾಮ ತೆಂಗಿನ ಮರ ಮಳೆಯ ನಡುವೆ ಅರ್ಧ ಗಂಟೆಗೂ ಹೆಚ್ಚುಕಾಲ ಹೊತ್ತಿ ಉರಿದಿದೆ. ಸಿಡಿಲು ಬಡಿಯುತ್ತಿದ್ದಂತೆ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು..

ಇದನ್ನೂ ಓದಿ: ನಮ್ಮಮ್ಮ ಸೂಪರ್​ ಸ್ಟಾರ್​​ 3 ಶೋ ಗೆದ್ದ ತಾಯಿ ಮಗಳು ಯಾರು? ಎಷ್ಟು ಹಣ ಸಿಕ್ತು?

ಮೋಡ ಕವಿದ ವಾತಾವರಣದೊಂದಿಗೆ ಜಿಟಿ ಜಿಟಿ ಮಳೆ

ಕೊಪ್ಪಳ

ರೆಮಲ್ ಸೈಕ್ಲೋನ್ ಎಫೆಕ್ಟ್​ನಿಂದಾಗಿ ಕೊಪ್ಪಳದಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು, ತಂಗಾಳಿಯೊಂದಿಗೆ ಜಿಟಿ ಜಿಟಿ ಮಳೆಯಾಗ್ತಿದೆ. ಸದ್ಯ ಬರದ ಮಧ್ಯೆ ಪ್ರಸ್ತುತ ಕೊಪ್ಪಳದ ವಾತಾವರಣ ಮಲೆನಾಡಿನಂತಾಗಿದೆ. ಬೀದಿ ವ್ಯಾಪಾರಸ್ಥರಿಗೆ ಮಳೆ ಅಡ್ಡಿಪಡಿಸಿದೆ. ಅಲ್ಲದೇ ತಂಪಾದ ವಾತಾವರಣ‌ಕ್ಕೆ ಜನರು ಮನೆಯಲ್ಲೇ ಬೀಡು ಬಿಟ್ಟಿದ್ದಾರೆ. ರಾಜ್ಯದಲ್ಲಿ ಕೆಲ ದಿನಗಳಿಂದ ಬಿಟ್ಟುಬಿಟ್ಟಡೆ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಇನ್ನೊಂದೆಡೆ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ

https://newsfirstlive.com/wp-content/uploads/2024/05/YDR_RAIN_2.jpg

Load More