newsfirstkannada.com

ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಕುರಿ ವ್ಯಾಪಾರಕ್ಕೆ ಹೊರಟಿದ್ದ ಇಬ್ಬರು ಸಾವು

Share :

Published June 1, 2024 at 10:16am

  ಚಳ್ಳಕೆರೆಯಿಂದ‌ ಹಿರಿಯೂರಿಗೆ ಕುರಿ ವ್ಯಾಪಾರಕ್ಕೆ‌ ಹೊರಟಿದ್ದ ಇಬ್ಬರು ಸಾವು

  ಚಳ್ಳಕೆರೆ-ಹಿರಿಯೂರ ಮಾರ್ಗ ಮಧ್ಯಯೇ ನಡೆದ ಭೀಕರ ಅಪಘಾತ

  ಘಟನಾ ಸ್ಥಳಕ್ಕೆ‌ ಭೇಟಿ ಕೊಟ್ಟ ಹಿರಿಯೂರು ಗ್ರಾಮಾಂತರ ಪೊಲೀಸರು‌

ಚಿತ್ರದುರ್ಗ: ಚಲಿಸುತ್ತಿದ್ದ ಲಾರಿಗೆ ಮಿನಿ ಟ್ರಕ್ ಡಿಕ್ಕಿ ಹೊಡೆದಿರೋ ಘಟನೆ ಚಳ್ಳಕೆರೆ-ಹಿರಿಯೂರ ಮಾರ್ಗ ಮಧ್ಯದ ಆರ್.ಕೆ.ಪವರ್ ಜಿನ್ ಬಳಿ ನಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಲಿಂಗ (65), ರಮೇಶ್ (55) ಮೃತ ದುರ್ದೈವಿಗಳು.

ಇದನ್ನೂ ಓದಿ: ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

ಮೃತ ಇಬ್ಬರು ಶಿವಲಿಂಗ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದವರು. ಚಳ್ಳಕೆರೆಯಿಂದ‌ ಹಿರಿಯೂರಿಗೆ ಕುರಿ ವ್ಯಾಪಾರಕ್ಕೆ‌ ಹೊರಟಿದ್ದ ವೇಳೆ  ದುರ್ಘಟನೆ ಸಂಭವಿಸಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ‌ ಹಿರಿಯೂರು ಗ್ರಾಮಾಂತರ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಇಬ್ಬರು ಇಬ್ಬರೂ ಕುರಿ ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಕುರಿ ವ್ಯಾಪಾರಕ್ಕೆ ಹೊರಟಿದ್ದ ಇಬ್ಬರು ಸಾವು

https://newsfirstlive.com/wp-content/uploads/2024/06/accident3.jpg

Load More