newsfirstkannada.com

ಇಬ್ಬರು ಹೆಂಡತಿಯರ ಕೊಚ್ಚಿ ಕೊಲೆ ಮಾಡಿದ ಹಂತಕರು; ಗಂಡಾಂತರದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Share :

Published May 28, 2024 at 9:55pm

  ಕೋಳಿಯಂತೆ ಪತ್ನಿಯ ಕತ್ತು ಕತ್ತರಿಸಿ ಚರ್ಮ ಸುಲಿದ ಕ್ರೂರಿ ಪಾಪಿ

  ಪತ್ನಿಯ ದೇಹದ ಇತರ ಅಂಗಾಂಗಗಳನ್ನು ಕತ್ತರಿಸಿ ಪತಿಯಿಂದ ವಿಕೃತಿ

  ಕೋಪದ ಉನ್ಮಾದದಲ್ಲಿ ಶಿವರಾಮ್ ಪತ್ನಿಯನ್ನು ಭೀಕರವಾಗಿ ಕೊಲೆ

ಕಲಿಗಾಲದಲ್ಲಿ ಮನುಷ್ಯ ಮನುಷ್ಯತ್ವವನ್ನ ಬಿಟ್ಟು ಸಂಬಂಧವನ್ನೇ ಮರೆಯುತ್ತಿದ್ದಾನೆ. ತುಮಕೂರಿನಲ್ಲಿ ಪತಿಯೊಬ್ಬ ಕೋಪದ ಕೈಗೆ ಬುದ್ಧಿ ಕೊಟ್ಟು ಮನುಷ್ಯತ್ವವನ್ನೇ ಮರೆತು ರಾಕ್ಷಸನಂತೆ ವರ್ತಿಸಿದ್ದಾನೆ. ಕೋಳಿಯಂತೆ ಪತ್ನಿಯ ಚರ್ಮ ಸುಲಿದು ತುಂಡು ತುಂಡಾಗಿ ಕತ್ತರಿಸಿ ಭೀಭತ್ಸವಾಗಿ ಕೊಲೆ ಮಾಡಿದ್ದಾನೆ. ಇತ್ತ ಕುಂದಾನಗರಿಯಲ್ಲೂ ಅದೇ ಮಾದರಿ ಪತಿ ತನ್ನ ಪತ್ನಿಯನ್ನ ಕೊಂದು ಹಾಕಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ 2ನೇ ಅದ್ಧೂರಿ ಪ್ರೀ-ವೆಡ್ಡಿಂಗ್; ಹೇಗಿದೆ ತಯಾರಿ ಗೊತ್ತಾ?

ಪತಿಯೊಬ್ಬ ಕಟ್ಟಿಕೊಂಡ ತನ್ನ ಅರ್ಧಾಂಗಿಯ ಮೇಲೆ ಅದ್ಯಾವ ಮಟ್ಟಿಗೆ ತನ್ನ ಕೋಪತಾಪ ಪ್ರದರ್ಶಿಸುತ್ತಾನೆ ಅನ್ನೋ ಹಂತವನ್ನೇ ಈ ಪಾಪಿ ದಾಟಿದ್ದಾನೆ. ಕೋಳಿಯಂತೆ ಪತ್ನಿಯ ಚರ್ಮ ಸುಲಿದು ರುಂಡವನ್ನು ಕತ್ತರಿಸಿ ಬೀಭತ್ಸವಾಗಿ ಹತ್ಯೆಗೈದಿದ್ದಾನೆ. ಪತ್ನಿಯ ದೇಹದ ಇತರ ಅಂಗಾಂಗಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಈ ಭೀಕರ ಹತ್ಯೆ ನಡೆದಿದ್ದು ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ. ಪುಷ್ಪಲತಾ ಸಾವನ್ನಪ್ಪಿದ ದುರ್ದೈವಿ. ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿ ಶಿವರಾಮ್ ಎಂಬಾತನೇ ಈ ಕ್ರೌರ್ಯವೆಸಗಿದ ಕ್ರೂರಿ.
ಆರೋಪಿ ಶಿವರಾಮ್ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ ಎಂಬವರನ್ನು ಮದುವೆಯಾಗಿದ್ದ.

ಇದನ್ನೂ ಓದಿ: ಬೆಂಗಳೂರು ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ದಿನೇಶ್​ ಕಾರ್ತಿಕ್​ಗೆ ಆರ್​​ಸಿಬಿ ತಂಡದಲ್ಲಿ ಹೊಸ ಜವಾಬ್ದಾರಿ!

ಹುಲಿಯೂರುದುರ್ಗ ಪಟ್ಟಣದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮರದ ಮಿಲ್ಲೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ. ಆದ್ರೆ ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಪತ್ನಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತಂತೆ. ನಿನ್ನೆ ರಾತ್ರಿ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದು ಅದು ವಿಕೋಪಕ್ಕೆ ತೆರಳಿದೆ. ಕೋಪದ ಉನ್ಮಾದದಲ್ಲಿ ಶಿವರಾಮ್ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ತಾವು ವಾಸವಿದ್ದ ಅಡುಗೆ ಮನೆಯಲ್ಲೇ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ಕೊಲೆ ಮಾಡಿದ್ದಾನೆ. ಸದ್ಯ ಈ ಪಾಪಿ ಶಿವರಾಮ್​ನನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಬೆನ್ನಲ್ಲೇ ಕುಂದಾನಗರಿಯಲ್ಲೂ ಪತಿಯೊಬ್ಬ ಭೀಕರವಾಗಿ ಪತ್ನಿಯನ್ನ ಹತ್ಯೆಗೈದಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿಯ ಮೂಡಲಗಿ ತಾಲೂಕಿನ ಪುಲಗಡ್ಡಿ‌‌ಯಲ್ಲಿ ಘಟನೆ ನಡೆದಿದೆ. ನಿನ್ನೆ ಸಂಜೆ ಎಮ್ಮೆ‌ ಮಾರಿದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ ಯಲ್ಲವ್ವನನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಟ್ಟಾರೆ ಪತಿ ಪತ್ನಿ ಸಂಬಂಧ ಅಂದ್ರೆ ಏಳೇಳು ಜನ್ಮದ ಬಂಧ ಅಂತಾರೆ. ಆದ್ರೆ ಅದು ಇತ್ತೀಚೆಗೆ ಏಳು ಜನ್ಮ ಬಿಡಿ ಏಳು ವರ್ಷ ಹೋಗ್ಲಿ 7 ತಿಂಗಳು ಕೂಡ ನೆಲೆಸ್ತಿಲ್ಲ. ಪತಿ-ಪತ್ನಿಯ ಜಗಳ ಉಂಡು ಮಲಗೋತನಕ ಅನ್ನೋ ಮಾತಿನಂತೆ ಇಬ್ಬರು ಕೂತು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಕೋಪದ ಕೈಗೆ ಬುದ್ಧಿ ಕೊಟ್ರೆ ನಿಮ್ಮ ಮಕ್ಕಳ ಜೀವನವೂ ಬಿರುಗಾಳಿಗೆ ಸಿಕ್ಕ ಗಾಳಿಪಟದಂತಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ಬರು ಹೆಂಡತಿಯರ ಕೊಚ್ಚಿ ಕೊಲೆ ಮಾಡಿದ ಹಂತಕರು; ಗಂಡಾಂತರದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/05/death73.jpg

Load More