newsfirstkannada.com

ಕೋಟ್ಯಂತರ ಜನರ ಪ್ರಾರ್ಥನೆ, ಸಿದ್ದಲಿಂಗ ದೇವರ ಪವಾಡದಿಂದ ಸಾವು ಗೆದ್ದ ಸಾತ್ವಿಕ್.. ತಾಯಿ ಹರಕೆ ಏನು?

Share :

Published April 5, 2024 at 8:08am

    ಸಿದ್ದಲಿಂಗ ಮಹಾರಾಜನಿಗೆ ಸಾತ್ವಿಕ್ ತಾಯಿಯ ಹರಕೆ ಹೊತ್ತಿದ್ದು ಏನು?

    ತಾಯಿಯ ಹರಕೆಯಿಂದಲೇ ಬದುಕಿ ಬಂದಿರುವ ಮುದ್ದು ಕಂದ ಸಾತ್ವಿಕ್​

    ಪುಟ್ಟ ಕಂದನ ಕಾಪಾಡಿ ಮಡಿಲಿಗೆ ಮರಳಿಸಿದ ಸಿದ್ದಲಿಂಗ ಮಹಾರಾಜರು

21 ಶತಮಾನದಲ್ಲಿ ಕೆಲವರ ನಂಬಿಕೆಗಳು ಮೂಢನಂಬಿಕೆಯಂತೆ ಕಾಣುತ್ತವೆ. ಆದ್ರೆ ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಹಾರೈಕೆಯಿಂದ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ ಬದುಕಿ ಬಂದ ಘಟನೆ ಇಡೀ ನಾಡಿನಲ್ಲೇ ಅಚ್ಚರಿಗೆ ಕಾರಣವಾಗಿದೆ. 21 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಸೆಣಸಾಡಿ ಸಾತ್ವಿಕ ಸಾವು ಗೆಲ್ಲಲು, ಸಿದ್ದಲಿಂಗರಿಗೆ ಹೊತ್ತಿದ್ದ ಹರಕೆ ಕಾರಣ ಅಂತ ಇಡೀ ಊರೇ ಸಂಭ್ರಮಿಸುತ್ತಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 21 ಗಂಟೆಗಳ ಅವಿರಥ ಸಾಧನೆ. ಕೋಟಿ ಕೋಟಿ ಕನ್ನಡಿಗರ ಪ್ರಾರ್ಥನೆ. ಸಾವು ಬದುಕಿನ ಮಧ್ಯೆ ಹೋರಾಡಿ ಸಾತ್ವಿಕ್​ ಮೃತ್ಯುಂಜಯನಾಗಿ ಬರಲು ಕಾರಣವಾಗಿತ್ತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಂದು ತಂದೊಡ್ಡಿದ ಕಂಟಕವನ್ನ ಗೆದ್ದು ಬಂದ ಸಾತ್ವಿಕ್ ದೇವರ ಪವಾಡಕ್ಕೆ ಸಾಕ್ಷಿಯಾಗಿತ್ತು.

ಲಚ್ಯಾಣ.. ಪವಾಡ ಪುರುಷ ಸಿದ್ದಲಿಂಗ ಮಹಾರಾಜರು ನಡೆದಾಡಿದ ಪುಣ್ಯ ಭೂಮಿ.. ಪವಾಡಗಳ ಮೂಲಕವೇ ಭಕ್ತರ ಸಂಕಷ್ಟಗಳಿಂದ ದೂರ ಮಾಡಿರೋ ಮಹಾ ಮಹಿಮ ಸಿದ್ಧಿ ಪುರುಷ.. ಕೊಳವೇ ಬಾವಿಗೆ ಬಿದ್ದು ಸಾವನ್ನೇ ಗೆದ್ದು ಬಂದಿರೋ ಸಾತ್ವಿಕ್ 21 ಗಂಟೆ ಬಳಿಕವೂ ಕೊಳವೆ ಬಾವಿಯಿಂದ ಸೇಫ್​ ಬಂದಿರೋದು ಪವಾಡಕ್ಕೆ ಸಾಕ್ಷಿಯಾಗಿದೆ.. 2 ವರ್ಷದ ಸಾತ್ವಿಕ್ ಕೊಳವೆ ಬಾವಿಯೊಳಗೆ ಬಿದ್ದ ಬಳಿಕ ನನ್ನ ಕಂದಮ್ಮನನ್ನ ಕಾಪಾಡು ದೇವರೇ ಅಂತ ಹೆತ್ತ ತಾಯಿ ಪೂಜಾ ತಮ್ಮೂರಿನ ಪವಾಡ ಪುರುಷ ಸಿದ್ದಲಿಂಗ ಮಹಾರಾಜರಿಗೆ ಹರಕೆ ಹೊತ್ತಿದ್ರು.. ಕೊನೆಗೂ ಹೆತ್ತ ತಾಯಿಯ ಕೂಗು ಕೇಳಿಸಿಕೊಂಡ ಸಿದ್ದಲಿಂಗ ಮಹಾರಾಜರು ಪುಟ್ಟ ಕಂದಮ್ಮನ ಕಾಪಾಡಿ ತಾಯಿ ಮಡಿಲಿಗೆ ಮರಳಿಸಿದ್ದಾರೆ.

ಸಿದ್ದಲಿಂಗರ ಹೆಸರನ್ನೇ ನಾಮಕರಣ ಮಾಡುವ ಹರಕೆ

ಸಾತ್ವಿಕ್ ಸುರಕ್ಷಿತವಾಗಿ ಮರಳಿ ಬಂದರೆ ನಿನ್ನ ಹೆಸರನ್ನೇ ಮಗನಿಗೆ ಮರುನಾಮಕರಣ ಮಾಡ್ತೀನಿ ಅಂತ ಸಾತ್ವಿಕ್ ತಾಯಿ ಪೂಜ, ಸಿದ್ದಲಿಂಗ ಮಹಾರಾಜರ ಬಳಿ ಹರಕೆ ಹೊತ್ತಿದ್ರು.. ಇನ್ನೊಂದೆಡೆ ಗ್ರಾಮಸ್ಥರು ನಿನ್ನೆ ಬೆಳಿಗ್ಗೆಯಿಂದಲೇ ಪವಾಡ ಪುರುಷನಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ರು.. ಹೆತ್ತ ಕರುಳುನಿ ಕೂಗು, ಗ್ರಾಮಸ್ಥರ ಪ್ರಾರ್ಥನೆಗೆ ಮತಸೋತ ಸಿದ್ದಲಿಂಗರು ಪುಟ್ಟ ಕಂದನಿಗೆ ಮರುಜನ್ಮ ನೀಡಿದ್ದಾರೆ. ಇನ್ನು 20 ದಿನದಲ್ಲಿ ನಡೆಯಲಿರೋ ಜಾತ್ರೆ ವೇಳೆ ಸಾತ್ವಿಕ ಸಿದ್ದಲಿಂಗ ಎಂದು ಮರುನಾಮಕರಣ ನಡೆಯಲಿದೆ. ಸಾತ್ವಿಕ್ ಅಜ್ಜ ಶಂಕ್ರಪ್ಪ ಮೊಮ್ಮಗ ಸುರಕ್ಷಿತವಾಗಿ ಹೊರಬರಲಿ ಅಂತ ಸಿದ್ದಲಿಂಗ ಮಹಾರಾಜರಿಗೆ 1 ಕ್ವಿಂಟಾಲ್ ಗೋಧಿ ಮಠಕ್ಕೆ ಕೊಡುವ ಹರಕೆ ಹೊತ್ತಿದ್ದಾರೆ.

ಇದನ್ನೂ ಓದಿ: ಪವಾಡದ ನೆಲದಲ್ಲಿ ಮತ್ತೊಂದು ಪವಾಡ.. ಕೊಳವೆ ಬಾವಿಯಿಂದ ಸಾತ್ವಿಕ್ ಹೊರ ಬಂದಿದ್ದು ಹೇಗೆ?

‘ಮರುನಾಮಕರಣ ಮಾಡ್ತೀನಿ

ನನ್ನ ಮಗ ಬದುಕಿ ಬಂದರೆ ನಮ್ಮ ಮನೆಯಿಂದ ಮಠದವರೆಗೆ ದೀಡ್ ನಮಸ್ಕಾರ ಹಾಕಿ, ಜಾತ್ರೆಯಲ್ಲಿ ಮಗನಿಗೆ ಮರುನಾಮಕರಣ ಮಾಡುತ್ತೇನೆ ಅಂತ ಬೇಡಿಕೊಂಡಿದ್ದೆ. 48 ಗಂಟೆಗಳ ಕಾಲ ಐಸಿಯುನಲ್ಲಿ ಇಡುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಎಲ್ಲವನ್ನು ಸರ್ಕಾರದವರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಪೂಜಾ, ಸಾತ್ವಿಕ್ ತಾಯಿ

ಸಾತ್ವಿಕ ಸೇಫ್ ಆಗಿ ಕೊಳವೆ ಬಾವಿಯಿಂದ ಹೊರಗೆ ಬರುತ್ತಿದ್ದಂತೆ ಗ್ರಾಮದ ಯುವಕರು ಸಿದ್ದಲಿಂಗ ಮಹಾರಾಜರ ಮಠದಲ್ಲಿ ಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿದ್ರು‌.. ಕಾಸುಗೌಡ ಬಿರಾದಾರ ಎಂಬುವರು ದೇವರಿಗೆ ದೀರ್ಘ ದಂಡ ನಮಸ್ಕಾರ ಹಾಕಿದ್ರು‌.. ಇನ್ನೂ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಾತ್ವಿಕ್​ ಜಿಲ್ಲಾಸ್ಪತ್ರೆಗೆ ಶಿಫ್ಟ್ ಆಗಿದ್ದಾನೆ.. ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯ ಆಗಿರೋದು ಕಂಡು ವೈದ್ಯರಿಗೂ ಅಚ್ಚರಿ ಆಗಿದೆ.. ಮುಂಜಾಗ್ರತಾ ಕ್ರಮವಾಗಿ 48 ಗಂಟೆಗಳ‌ ಕಾಲ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸಾತ್ವಿಕನನ್ನ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.. ವೈದ್ಯಕೀಯ ಲೋಕಕ್ಕೂ ಸಾತ್ವಿಕ್ ಕೊಳವೇ ಬಾವಿಯಿಂದ ಸಾವು ಗೆದ್ದು ಬಂದಿರೋದು ಅಚ್ಚರಿ ಮೂಡಿಸಿದೆ.

ತಾಯಿ ಹರಕೆ, ಕೋಟ್ಯಾಂತರ ಜನರ ಪ್ರಾರ್ಥನೆ, ಸಿದ್ದಲಿಂಗ ಮಹಾರಾಜರ ಪವಾಡದಿಂದ ಸಾತ್ವಿಕ್ ಬದುಕುಳಿದಿದ್ದಾನೆ.. ಇದೇ ಖುಷಿಯಲ್ಲಿ ತಾಯಿ ಹರಕೆ ತೀರಿಸಲು ನಿರ್ಧರಿಸಿದ್ದು, ಸಾತ್ವಿಕ್ ಸಿದ್ದಲಿಂಗನಾಗಿ ಮರುನಾಮಕರಣ ಮಾಡಿಕೊಳ್ಳಲಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟ್ಯಂತರ ಜನರ ಪ್ರಾರ್ಥನೆ, ಸಿದ್ದಲಿಂಗ ದೇವರ ಪವಾಡದಿಂದ ಸಾವು ಗೆದ್ದ ಸಾತ್ವಿಕ್.. ತಾಯಿ ಹರಕೆ ಏನು?

https://newsfirstlive.com/wp-content/uploads/2024/04/VIJ_BABY_BOY-1.jpg

Load More