newsfirstkannada.com

ಹೆತ್ತವರ ಮುದ್ದಿನ ಕೂಸು.. 20 ತಾಸು ಸಾವಿನ ಜೊತೆ ಹೋರಾಟ; ಬದುಕಿ ಬಂದಿದ್ದೇ ಬಲು ರೋಚಕ!

Share :

Published April 4, 2024 at 9:44pm

Update April 4, 2024 at 9:46pm

    ಸತೀಶ್‌ ಮತ್ತು ಪೂಜಾ ದಂಪತಿಗೆ ಒಬ್ಬನೇ ಒಬ್ಬ ಮಗ ಆಗಿದ್ದ ಸಾತ್ವಿಕ್‌

    ಒಂದಲ್ಲಾ ಎರಡಲ್ಲಾ ಬರೋಬ್ಬರಿ 265 ಅಡಿ ಬೋರ್​ವೆಲ್​ ತೆಗೆಸಿದ್ದ ಸತೀಶ್​

    ಆಟ ಆಡುವಾಗ ಆಯತಪ್ಪಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದ ಸಾತ್ವಿಕ

ವಿಜಯಪುರ: ತೀವ್ರ ಬರ. ನೀರಿನ ಅಭಾವ. ವಿಜಯಪುರದ ಲಚ್ಯಾಣ ಗ್ರಾಮದ ಸತೀಶ್​ ಎರಡು ದಿನದ ಹಿಂದಷ್ಟೇ ಕೊಳವೆ ಬಾವಿ ತೆಗೆಸಿದ್ರು. ಅಂದ್ಕೊಂಡಂತೆ ನೀರು ಬಂದಿದ್ದು, ಕುಟುಂಬಸ್ಥರು ಸಂತೋಷದಲ್ಲಿದ್ರು. ಆದ್ರೆ, ಅದೇ ಬೋರ್​, ಎರಡೇ ದಿನಕ್ಕೆ ಸತೀಶ್​ ದಂಪತಿ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿತ್ತು. ನೀರಿಗಾಗಿ ತೆಗೆಸಿದ್ದ ಬೋರ್​ವೆಲ್​ಗೆ ನಿನ್ನೆ ಸತೀಶ್​ರ 2 ವರ್ಷದ ಪುಟ್ಟ ಕಂದಮ್ಮ ಬಿದ್ದುಬಿಟ್ಟಿದ್ದ.

20 ತಾಸುಗಳ ಕಾಲ ಸಾವಿನ ಜೊತೆ ಹೋರಾಡಿ ಜಯಿಸಿದ ಪೋರ

ಆಟ ಆಡುವಾಗ ಕಂದಮ್ಮ ಆಯತಪ್ಪಿ ಕೊಳವೆ ಬಾವಿಯೊಳಗೆ ಬಿದ್ದು ಬಿಟ್ಟಿದ್ದ. ಸತೀಶ್‌ ಮತ್ತು ಪೂಜಾ ದಂಪತಿಗೆ ಸಾತ್ವಿಕ್‌ ಒಬ್ಬನೇ ಮಗ. ಮಗು ಕಾಣದೆ ಕಂಗಲಾದ ಹೆತ್ತವರು ಬೋರ್​ವೆಲ್​ ನೋಡಿದಾಗ ಕಂದ ಒಳಗೆ ಬಿದ್ದಿರೋದು ಕಾಣಿಸಿದೆ. ಇದನ್ನ ನೋಡಿದ ಹೆತ್ತವರಿಗೆ ನೆಲವೇ ಕುಸಿದಂತಾಗಿತ್ತು. ಆಕ್ರಂದನ ಮುಗಿಲುಮುಟ್ಟಿತ್ತು. ನೀರಿಗಾಗಿ ತೆಗೆಸಿದ ಬಾವಿ ಎರಡೇ ದಿನದಲ್ಲಿ ಸತೀಶ್​ ಕುಟುಂಬಕ್ಕೆ ಯಮಯಾತನೆ ನೀಡಿಬಿಟ್ಟಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚಾಣ್ಯ ಗ್ರಾಮದಲ್ಲಿ ತೀವ್ರ ಬರದ ಹಿನ್ನೆಲೆ, ಸತೀಶ್​ ಎಂಬಾತ ಮನೆ ಬಳಿ 265 ಅಡಿ ಬೋರ್​ವೆಲ್​ ತೆಗೆಸಿದ್ರು. ಮನೆಯಿಂದ 80 ಅಡಿ ದೂರದಲ್ಲಿ ಬೋರ್​ವೆಲ್​ ತೆಗೆಯಲಾಗಿತ್ತು. ಕೃಷಿ ಮತ್ತು ಕುಡಿಯೋದಕ್ಕಾಗಿ ತೆಗೆಸಿದ್ದ ಬಾವಿಯಲ್ಲಿ ನೀರು ಕೂಡ ಬಿದ್ದಿದ್ರಿಂದ ಕುಟುಂಬಸ್ಥರು ಖುಷಿಯಲ್ಲಿದ್ರು. ಮೋಟಾರ್​ ಹಾಕಿ ಕೇಸಿಂಗ್​ ಅಳವಡಿಕೆ ಕಾರ್ಯ ಬಾಕಿ ಇತ್ತು. ನಿನ್ನೆ ಸಂಜೆ ಆಟವಾಡುತ್ತಿದ್ದ ಮಗು ಬಂದು ಬೋರ್‌ವೆಲ್‌ನೊಳಗೆ ಬಿದ್ದೋಗಿದ್ದಾನೆ. ಈ ವೇಳೆ ತಾಯಿ ಪಾತ್ರೆ ತೊಳೆಯುತ್ತಿದ್ದಳು, ಮಗು ಕಾಣ್ತಿಲ್ಲ ಅಂತಾ ಹುಡುಕಿದ ಹೆತ್ತವರು ಬೋರ್‌ವೆಲ್‌ ಬಳಿ ಬಂದು ಟಾರ್ಚ್‌ ಲೈಟ್‌ ಬಿಟ್ಟು ನೋಡಿದಾಗ ಕಂದನ ಕಾಲು ಕಾಣಿಸಿದೆ.

ಇದನ್ನೂ ಓದಿ: ಪವಾಡದ ನೆಲದಲ್ಲಿ ಮತ್ತೊಂದು ಪವಾಡ.. ಕೊಳವೆ ಬಾವಿಯಿಂದ ಸಾತ್ವಿಕ್ ಹೊರ ಬಂದಿದ್ದು ಹೇಗೆ?

ಸಂಜೆ 5 ಗಂಟೆ ಸುಮಾರಿಗೆ ಕಂದಮ್ಮ ಕೊಳೆವ ಬಾವಿಯೊಳಗೆ ಬಿದ್ದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ರಕ್ಷಣಾ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ್ರು. ಬೋರ್‌ವೆಲ್‌ನ 16 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿತ್ತು. ಮೊದಲು ಮಗುವಿನ ಕಾಲಿಗೆ ಕ್ಲಾಂಪ್‌ ಅಳವಡಿಸಿ ಅದು ಮತ್ತಷ್ಟು ಕೆಳಗೆ ಹೋಗದಂತೆ ನೋಡಿಕೊಳ್ಳಲಾಯಿತು. ಮಗುವಿಗೆ ಉಸಿರಾಟಕ್ಕೆ ತೊಂದರೆಯಾಗದಂತೆ ನಿರಂತರ ಆಕ್ಸಿಜನ್‌ ಪೂರೈಕೆಗೆ ವ್ಯವಸ್ಥೆ ಮಾಡಲಾಯಿತು. ಅಷ್ಟರಲ್ಲಾಗಲೇ ದೌಡಾಯಿಸಿ ಬಂದಿದ್ದ ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯಚರಣೆ ಚುರುಕುಗೊಳಿಸಿತ್ತು.

ಮತ್ತೊಂದೆಡೆ ಮಗು ಬದುಕಿ ಬರಲೆಂದು ಈ ಭಾಗದ ಆರಾಧ್ಯ ಪವಾಡ ಪುರುಷ ಲಚ್ಯಾಣ ಸಿದ್ದಪ್ಪನಿಗೆ ಹರಕೆ ಹೊರಲಾಗಿದೆ. ಕುಟುಂಬಸ್ಥರು, ಗ್ರಾಮಸ್ಥರು ಅಷ್ಟೇ ಅಲ್ಲ ಇಡೀ ರಾಜ್ಯದ ಜನರು ಸಾತ್ವಿಕ್​ ಜೀವಂತವಾಗಿ ಬರಲೆಂದು ದೇವರಲ್ಲಿ ಬೇಡಿಕೊಳ್ತಿದ್ರು. ಬೋರ್‌ವೆಲ್‌ಗೆ ಬಿದ್ದ ಮಕ್ಕಳು ಬದುಕಿ ಬಂದಿದ್ದೇ ಅಪರೂಪ. ಸಿದ್ದಪ್ಪನಿಗೆ ಹೊತ್ತ ಹರಕೆ ಫಲಿಸಿತೋ ಏನೋ. ಬಾಲಕ ಸಾತ್ವಿಕ್‌ ವಿಷಯದಲ್ಲಿ ಪವಾಡವೇ ನಡೆದಿದೆ. 20 ತಾಸುಗಳ ರಕ್ಷಣಾ ಕಾರ್ಯಾಚರಣೆ ಕಡೆಗೂ ಯಶಸ್ವಿಯಾಗಿದೆ. ಪೋರ ಸಾತ್ವಿಕ್‌ ಕಡೆಗೂ ಬೋರ್‌ವೆಲ್‌ನೊಳಗಿನಿಂದ ಬದುಕಿ ಬಂದಿದ್ದಾನೆ. ಮತ್ತೆ ಹೆತ್ತಾಕೆಯ ಮಡಿಲು ಸೇರಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆತ್ತವರ ಮುದ್ದಿನ ಕೂಸು.. 20 ತಾಸು ಸಾವಿನ ಜೊತೆ ಹೋರಾಟ; ಬದುಕಿ ಬಂದಿದ್ದೇ ಬಲು ರೋಚಕ!

https://newsfirstlive.com/wp-content/uploads/2024/04/satvik3.jpg

Load More