ವಾಹನ ಸವಾರರಿಗೆ ಬಿಗ್ ರಿಲೀಫ್‌.. ಇನ್ಮುಂದೆ 20 ಕಿ.ಮೀ ಟೋಲ್‌ ದರ ಉಚಿತ; ಹೊಸ ರೂಲ್ಸ್‌ ಘೋಷಣೆ!

author-image
admin
Updated On
ವಾಹನ ಸವಾರರಿಗೆ ಬಿಗ್ ರಿಲೀಫ್‌.. ಇನ್ಮುಂದೆ 20 ಕಿ.ಮೀ ಟೋಲ್‌ ದರ ಉಚಿತ; ಹೊಸ ರೂಲ್ಸ್‌ ಘೋಷಣೆ!
Advertisment
  • 20 ಕಿ.ಮೀ ಒಳಗೆ ಸಂಚಾರ ಮಾಡಿದ್ರೆ ಟೋಲ್ ದರ ಕಟ್ಟುವಂತಿಲ್ಲ
  • 2008ರ ರಾಷ್ಟ್ರೀಯ ಹೆದ್ದಾರಿ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ
  • ಉಚಿತ ಪ್ರಯಾಣದಿಂದ ಖಾಸಗಿ ವಾಹನ ಸವಾರರಿಗೆ ಬಿಗ್‌ ರಿಲೀಫ್‌

ನವದೆಹಲಿ: ಟೋಲ್ ದರ ಕಟ್ಟಿ, ಕಟ್ಟಿ ಸುಸ್ತಾಗಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಕಲೆಕ್ಷನ್ ನಿಯಮ ಬದಲಾಗಿದೆ. ಇನ್ಮುಂದೆ 20 ಕಿ.ಮೀ ಒಳಗೆ ಸಂಚಾರ ಮಾಡಿದ್ರೆ ಟೋಲ್ ದರ ಕಟ್ಟುವಂತಿಲ್ಲ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ.. ಒಂದೇ ತಿಂಗಳಲ್ಲಿ 9 ಕೋಟಿ ರೂಪಾಯಿ ದಂಡ ಸಂಗ್ರಹ 

2008ರ ರಾಷ್ಟ್ರೀಯ ಹೆದ್ದಾರಿ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಹೊಸ ನಿಯಮದ ಪ್ರಕಾರ ಟೋಲ್ ದರ ವಾಹನಗಳು ಸಂಚರಿಸುವ ದೂರದ ಮೇಲೆ ಅವಲಂಬಿಸುತ್ತದೆ. ವಾಹನಗಳು ಚಲಿಸುವ ದೂರವನ್ನು GPS ಮೂಲಕ ಪರಿಶೀಲಿಸಲಿದ್ದು, ಅದರ ಅನ್ವಯ ದರ ನಿಗದಿ ಮಾಡಲಾಗುತ್ತಿದೆ. ಈ ಹೊಸ ನಿಯಮ GPS ಆಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ.

publive-image

ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮೊದಲ 20 ಕಿ.ಮೀ ಉಚಿತವಾಗಿ ಪ್ರಯಾಣಿಸಬಹುದು. 20 ಕಿ.ಮೀ ಒಳಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ರಮಿಸಿದ್ರೆ ಯಾವುದೇ ಟೋಲ್ ದರ ಇರುವುದಿಲ್ಲ. 20 ಕಿ.ಮೀ ನಂತರ ಸಂಚರಿಸುವ ಖಾಸಗಿ ವಾಹನಗಳಿಗೆ ಟೋಲ್ ದರ ಅನ್ವಯವಾಗುತ್ತದೆ.

ಇದನ್ನೂ ಓದಿ: ಸುಬ್ಬ.. ಸುಬ್ಬ.. ನಿನ್ನ ಬಿಟ್ಟಿರಲ್ಲ ಕಣೋ; ಹೆಂಡ್ತಿ.. ಮುದ್ದು ಹೆಂಡ್ತಿ; ದರ್ಶನ್, ಪವಿತ್ರಾ ಚಾಟಿಂಗ್‌ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ! 

20 ಕಿ.ಮೀ ಒಳಗಿನ ಟೋಲ್ ದರ ಖಾಸಗಿ ವಾಹನ ಮಾಲೀಕರಿಗೆ ದುಬಾರಿಯಾಗಿತ್ತು. ಈ ಸಮಸ್ಯೆ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 20 ಕಿ.ಮೀ ವರೆಗೆ ಉಚಿತ ಪ್ರಯಾಣ ಘೋಷಣೆಯಿಂದ ಖಾಸಗಿ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment