Advertisment

ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

author-image
Bheemappa
Updated On
BREAKING: ನಡು ರಸ್ತೆಯಲ್ಲಿ ಅಡ್ಡಗಟ್ಟಿ ನಟ ಚೇತನ್​​ಗೆ ರಕ್ತ ಬರುವಂತೆ ಹೊಡೆದ ಪುಂಡರು..!
Advertisment
  • ಯುವಕನಿಗೆ ಏನು ಮಾಡಬೇಡಿ ಕುಡಿದಿದ್ದಾನೆ ಎಂದು ಹೇಳಿದ ಯುವತಿ
  • ಸ್ಥಳಕ್ಕೆ ಬಂದ‌ 15 ರಿಂದ 20 ಯುವಕರರಿಂದ ಏಕಾಏಕಿ ನಟನ ಮೇಲೆ ಹಲ್ಲೆ
  • ನಟನ ಚೈನ್, ಹಣ, ಮೊಬೈಲ್ ಕಸಿದುಕೊಂಡು ಹೋಗಿರುವ ಪುಂಡರು

ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಸ್ಯಾಂಡಲ್​ವುಡ್​ನ ನಟ‌ ಚೇತನ್‌ ಚಂದ್ರ ಮೇಲೆ ಕಿಡಿಗೇಡಿಗಳು‌ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕಗ್ಗಲಿಪುರದ ಬೇಕರಿಯೊಂದರ ಬಳಿ ನಡೆದಿದೆ.

Advertisment

ಸ್ಯಾಂಡಲ್​ವುಡ್​ನ ನಟ‌ ಚೇತನ್‌ ಚಂದ್ರ ಕನಕಪುರದ ಬಳಿ‌ ಇರುವ ದೇವಸ್ಥಾನವೊಂದಕ್ಕೆ ಹೋಗಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಗ್ಗಲಿಪುರದಲ್ಲಿ ಹೋಗುವಾಗ ಯುವಕನೊಬ್ಬ ವೀಲ್ಹಿಂಗ್‌ ಮಾಡಿಕೊಂಡು ಬಂದು ನಟನನ್ನು ಸತಾಯಿಸಿದ್ದಾನೆ. ನಂತರ ಅಡ್ಡಗಟ್ಟಿ ನಿಂತು ಕಾರಿಗೆ ಹಾನಿ ಮಾಡಿದ್ದಲ್ಲದೇ ಚೇತನ್ ಮೇಲೆ ಕಬ್ಬಿಣದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.

publive-image

ಈ ವೇಳೆ ಕಾರಿಂದ ಇಳಿದು ಪ್ರತಿಕ್ರಿಯೆಗೆ ನಟ ಮುಂದಾಗಿದ್ದಾರೆ. ಆಗ ಯುವಕನ ಜೊತೆಗಿದ್ದ ಯುವತಿ ಅವನಿಗೆ ಏನು ಮಾಡಬೇಡಿ, ಅವನು ಮದ್ಯಪಾನ ಮಾಡಿದ್ದಾನೆ ಎಂದಿದ್ದಾಳೆ. ಹೀಗಾಗಿ ನಟ ಏನು ಮಾಡಿಲ್ಲ. ಬಳಿಕ ಅದೇ ಸ್ಥಳಕ್ಕೆ ಬಂದ 15-20 ಯುವಕರು ಚೇತನ್ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಟನ ಬಳಿಯಿದ್ದ ಚೈನ್, ಸ್ವಲ್ಪ ಹಣ ಮತ್ತು ವಿಡಿಯೋ ಮಾಡುತ್ತಿದ್ದ ಮೊಬೈಲ್ ಅನ್ನು ಕಸಿದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: BREAKING: ನಡು ರಸ್ತೆಯಲ್ಲಿ ಅಡ್ಡಗಟ್ಟಿ ನಟ ಚೇತನ್​​ಗೆ ರಕ್ತ ಬರುವಂತೆ ಹೊಡೆದ ಪುಂಡರು..!

Advertisment

ಪುಂಡರ ದಾಳಿಯಿಂದ ಚೇತನ್ ಅವರ ತಲೆ‌ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು ಹೆಚ್ಚು ರಕ್ತಸ್ರಾವವಾಗಿದೆ. ಸದ್ಯ ನಟನನ್ನು ಕಗ್ಗಲಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ನಟ ದೂರು ನೀಡಿದ್ದಾರೆ.

ಇದನ್ನೂ ಓದಿ:10 ರಾಜ್ಯ 96 ಕ್ಷೇತ್ರಗಳಿಗೆ ಮತಹಬ್ಬ.. ಅದೃಷ್ಟದ ಅಗ್ನಿ ಪರೀಕ್ಷೆಯಲ್ಲಿ ಸ್ಟಾರ್ಸ್​..! ಯಾಱರು ಇದ್ದಾರೆ?

publive-image

ಅಸಲಿಗೆ ಆಗಿದ್ದೇನು.?

ನಟ ಚೇತನ್ ಕನಕಪುರದಿಂದ ವಾಪಸ್ ಬರುತ್ತಿದ್ದಾಗ 1 ಕಿ.ಮೀ ನಿಂದ ಯುವಕನೊಬ್ಬ ಸತಾಯಿಸಿಕೊಂಡು ಬಂದಿದ್ದಾನೆ. ಆ ಯುವಕನ ಪತ್ನಿ ಕಗ್ಗಲಿಪುರದ ಬೇಕರಿಯೊಂದರ ಬಳಿ ಕಾಯುತ್ತಿದ್ದಳು. ಹೆಂಡತಿ ಇದ್ದ ಸ್ಥಳದಲ್ಲೇ ಕಾರು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಚೇತನ್ ಕಾರಿಂದ ಇಳಿದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಯುವಕನ ಪತ್ನಿ ಹಾಗೂ ಇನ್ನಿತರರು ನಟನ ಸುತ್ತ ಗುಂಪುಗಟ್ಟಿದ್ದಾರೆ. ಪತ್ನಿಯ ಊರು ಕೂಡ ಅದೇ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ‌ ಸೇರಿ ನಂತರ ಚೇತನ್‌‌ ಮೇಲೆ ಹಲ್ಲೆ ‌ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisment

ನಟ ಚೇತನ್ ಅವರು ರಾಜಧಾನಿ, ಪ್ರೇಮಿಸಂ, ಹುಚ್ಚು ಹುಡುಗರು, ಜಾತ್ರೆ, ಶಾರ್ದೂಲ, ಕುಂಭರಾಶಿ ಸೇರಿ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment