ಕಿಡ್ನ್ಯಾಪ್​​ನಿಂದ ಹತ್ಯೆವರೆಗೂ; ನಟ ದರ್ಶನ್​​ ಗ್ಯಾಂಗ್​ ಕ್ರೌರ್ಯ ಅಷ್ಟಿಷ್ಟಲ್ಲ; ಇಲ್ಲಿದೆ 20 ಮನಕಲಕುವ ಫೋಟೋಸ್​​

author-image
admin
Updated On
ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?
Advertisment
  • ದರ್ಶನ್​​ ನೋಡಿದ ರೇಣುಕಾಸ್ವಾಮಿ ಫಸ್ಟ್ ಫೋಟೋ ಯಾವುದು ಗೊತ್ತಾ?
  • ರೇಣುಕಾಸ್ವಾಮಿ ಇನ್​​ಸ್ಟಾಗ್ರಾಮ್​ನಲ್ಲಿ ಕಳಿಸಿದ್ದ ಮೆಸೇಜ್​​ ಅಸಹ್ಯ!
  • ಜಾರ್ಜ್​​ಶೀಟ್​​ನಲ್ಲಿರೋ ಫೋಟೋಗಳು ಥೇಟ್​​ ದೃಶ್ಯಂ ಸಿನಿಮಾದಂತಿದೆ

ರೇಣುಕಾಸ್ವಾಮಿ ಹತ್ಯೆ ಕೇಸ್‌ನ ಭಯಾನಕ ಸತ್ಯವನ್ನು ಈ 20 ಫೋಟೋಗಳು ಹೇಳುತ್ತಿದೆ. ಪೊಲೀಸರು ಸಲ್ಲಿಸಿರುವ ಜಾರ್ಜ್​​ಶೀಟ್​​ನಲ್ಲಿ ಎದ್ದು ಕಾಣುತ್ತಿರೋ ಫೋಟೋಗಳು ಥೇಟ್​​ ದೃಶ್ಯಂ ಸಿನಿಮಾದ ದೃಶ್ಯದಂತೆಯೇ ಕಾಣುತ್ತಿದೆ. ಕಿಡ್ನ್ಯಾಪ್ ಮಾಡಿದಾಗಿನಿಂದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ತನಕದ ಫೋಟೋಗಳು ಪ್ರಕರಣಕ್ಕೆ ಎಂಥಾ ಗಟ್ಟಿ ಸಾಕ್ಷಿಗಳಾಗಿವೆ ಗೊತ್ತಾ? ಒಂದೊಂದು ಫೋಟೋ ಕೂಡ ಒಂದು ಕಥೆಯನ್ನು ಕರುಳು ಹಿಂಡುವ ವ್ಯಥೆಯನ್ನು ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ: ಗುಬ್ಬಿಯಂತ ರೇಣುಕಾಸ್ವಾಮಿ ಅಂತ್ಯ ಹೇಗಾಯ್ತು? ದರ್ಶನ್ ಕೊಟ್ಟ 6 ಹೇಳಿಕೆಗಳೇ ಭಯಾನಕ; ಏನವು? 

ಡಿ ದೃಶ್ಯಂ - 1
ಸ್ವಾಮಿ ಕಿಡ್ನಾಪ್​​ ಸ್ಕೆಚ್​​ ಕಥೆ ಹೇಳ್ತಿವೆ 3 ಫೋಟೋ
ಪೊಲೀಸರು ಸಲ್ಲಿಸಿರೋ ಜಾರ್ಜ್​​ಶೀಟ್​​ನೊಳಗೆ ಒಂದೊಂದು ಫೋಟೋ ಒಂದೊಂದು ಸಾಕ್ಷಿ ನುಡಿಯುತ್ತಿವೆ. ಆ ಕ್ಷಣಕ್ಕೆ ದರ್ಶನ್​​ ಅಂಡ್​ ಗ್ಯಾಂಗ್ ಹೆಂಗೆಲ್ಲಾ ರೇಣುಕಾಸ್ವಾಮಿಯನ್ನು ಉರಿದು ಮುಕ್ಕಿ ಬಿಸಾಕಿತ್ತು ಅನ್ನೋದು ಗೊತ್ತಾಗುತ್ತಿದೆ. ಇಲ್ಲಿ ದರ್ಶನ್​ ಹಾಗೂ ಪವಿತ್ರಾ ಗೌಡ ಪೊಲೀಸರ ಅತಿಥಿ ಆದ್ಮೇಲೆ ತೆಗೆಸಿಕೊಂಡ ಫೋಟೋಗಳು ಮತ್ತೊಂದು ಮಗ್ಗುಲಿನ ಅಧ್ಯಾಯವನ್ನು ಬಿಚ್ಚಿಡುತ್ತಿವೆ. ಅದ್ರಲ್ಲೂ, ಪೊಲೀಸರ ಜೊತೆ ನಿಂತುಕೊಂಡು ಕೈಯಲ್ಲಿ ಫೋನ್ ತೋರಿಸುತ್ತಾ ಇರೋ ಈ ಫೋಟೋ ಕಿಡ್ನಾಪ್ ಪ್ಲಾನ್​​ನ ಕಥೆ ಹೇಳುತ್ತಿದೆ.

publive-image

ಡಿ ದೃಶ್ಯಂ 2
ರೇಣುಕಾಸ್ವಾಮಿ ಇನ್​​ಸ್ಟಾಗ್ರಾಮ್​ನಲ್ಲಿ ಕಳಿಸಿದ್ದ ಮೆಸೇಜ್​​ ಅಸಹ್ಯ!

ಇಷ್ಟು ದಿನ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್​ ಕಳಿಸಿದ್ದ ಅನ್ನೋದನ್ನಷ್ಟೇ ಕೇಳಿದ್ರಿ. ಆದ್ರೀಗ, ಎಂಥಾ ಮೆಸೇಜ್​ ಕಳುಹಿಸಿದ್ದ, ಎಂಥಾ ಫೋಟೋ ಕಳುಹಿಸಿದ್ದ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ ನುಡಿಯುತ್ತಿವೆ. ಅದ್ರಲ್ಲೂ ಅತ್ಯಂತ ಕೆಟ್ಟದಾಗಿ ಅಶ್ಲೀಲ ಮೆಸೇಜ್​ ಫೋಟೋಗಳು ಕಳಿಸಿದ್ದಾನೆ ಅನ್ನೋ ಫೋಟೋ ಸಾಕ್ಷಿ ರೇಣುಕಾಸ್ವಾಮಿಯೊಳಗಿನ ಚಪಲಸ್ವಾಮಿ ಮನಃಸ್ಥಿತಿ ಎಂಥದ್ದು ಅನ್ನೋದನ್ನ ಹೇಳುತ್ತಿದೆ.

publive-image

ಡಿ ದೃಶ್ಯಂ 3
ದರ್ಶನ್​​ ನೋಡಿದ ರೇಣುಕಾಸ್ವಾಮಿ ಫಸ್ಟ್ ಫೋಟೋ
ನೋಡಿ, ಇಲ್ಲಿ ಆಟೋ ಒಂದು ಗಾಜಿನೊಳಗಿನ ರೇಣುಕಾಸ್ವಾಮಿ ಕಾಣ್ತಿದ್ದಾನಲ್ವಾ? ಇದೇ, ಇದೇ ಫೋಟೋ ಮೂಲಕವೇ ಡಿ ಗ್ಯಾಂಗ್​​ ದರ್ಶನ್​​ಗೆ ಇವನೇ ರೇಣುಕಾಸ್ವಾಮಿ ಅನ್ನೋದನ್ನ ಪರಿಚಯಿಸಿತ್ತು. ದರ್ಶನ್ ಮೊಟ್ಟ ಮೊದಲ ಸಲ ಈ ಫೋಟೋ ಮೂಲಕವೇ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್, ಫೋಟೋ ಕಳಿಸಿದ್ದ ಭೂಪ ಯಾರು ಅನ್ನೋದನ್ನ ಖಾತ್ರಿಪಡಿಸಿಕೊಂಡಿದ್ದು. ಇದಾದ ಬಳಿಕವೇ ದರ್ಶನ್​​ ಟೀಂ ರೇಣುಕಾಸ್ವಾಮಿಯ ಕಿಡ್ನಾಪ್ ಪ್ಲಾನ್ ಮಾಡಿಕೊಂಡಿದ್ದು.

publive-image

ಡಿ ದೃಶ್ಯಂ 4
ಸ್ಕೂಟಿಯಲ್ಲಿ ಓಡಾಡುತ್ತಿದ್ದ ರೇಣುಕಾಸ್ವಾಮಿ ಪತ್ತೆ!
ರೇಣುಕಾಸ್ವಾಮಿ ಕೆಲಸ ಮಾಡೋದು ಎಲ್ಲಿ? ಪ್ರತಿ ದಿನ ಮನೆಯಿಂದ ಎಷ್ಟು ಗಂಟೆಗೆ ಹೊರಡುತ್ತಾನೆ? ಎಲ್ಲೆಲ್ಲಾ ಓಡಾಡುತ್ತಾನೆ ಅನ್ನೋದನ್ನ ಚೆನ್ನಾಗಿ ಮಾಹಿತಿ ಕಲೆ ಹಾಕಿತ್ತು ಡಿ ಗ್ಯಾಂಗ್. ಇಂಥಾ ಸಂದರ್ಭವೇ ರೇಣುಕಾಸ್ವಾಮಿ ಸ್ಕೂಟಿಯಲ್ಲಿ ಓಡಾಡೋ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಕಟ್ಟಕಡೆಯದಾಗಿ ರೇಣುಕಾಸ್ವಾಮಿ ಸ್ಕೂಟಿಯಲ್ಲಿ ಕಂಡ ಈ ಫೋಟೋ ಬಳಿಕವೇ ಸ್ವಾಮಿಯ ಕಿಡ್ನಾಪ್ ಆಗಿದ್ದು.

ಇದನ್ನೂ ಓದಿ: ರೇಣುಕಾಸ್ವಾಮಿಗೆ ಪವಿತ್ರಾ ನಂಬರ್ ಸಿಕ್ಕಿದ್ದು ಹೇಗೆ? ಮೆಸೇಜ್‌ ಮಾಡಿ ಬಲೆಗೆ ಬಿದ್ದ ಇಂಚಿಂಚೂ ಮಾಹಿತಿ ಇಲ್ಲಿದೆ! 

publive-image

ಡಿ ದೃಶ್ಯಂ 5
ಸ್ವಾಮಿ ಜೊತೆ ಮೂವರು..ಕಿಡ್ನ್ಯಾಪ್ ಕಥೆ ಬಿಚ್ಚಿಟ್ಟ ಫೋಟೋ
ರೇಣುಕಾಸ್ವಾಮಿ ಜೊತೆ ಇನ್ನೂ ಮೂವರು ನಿಂತಿದ್ದಾರೆ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಎಲ್ಲಿದ್ದಾನೆ? ಅವನ ಅಡ್ಡಾ ಯಾವುದು ಅನ್ನೋದು ಖಚಿತ ಆದ ಕೂಡಲೇ ರಾಘವೇಂದ್ರ ಜೊತೆ ಇಬ್ಬರು ರೇಣುಕಾಸ್ವಾಮಿ ಕಿಡ್ನಾಪ್ ಅಧ್ಯಾಯ ಆರಂಭಿಸಿದ್ರು. ಆ ಕ್ಷಣ ರೇಣುಕಾಸ್ವಾಮಿ ಸಹ ಪವಿತ್ರಾ ಗೌಡ ಕಳುಹಿಸಿದ್ದಾಳೆ ಅನ್ನೋ ಕಾರಣಕ್ಕೆ ಇದೇ ಮೂವರೊಂದಿಗೆ ಹೊರಡೋದಕ್ಕೆ ಶುರುವಾಗಿದ್ದೆ. ಇಲ್ಲಿಂದಲೇ ನೋಡಿ ರೇಣುಕಾಸ್ವಾಮಿ ಕಿಡ್ನಾಪ್ ಆಟ ಆರಂಭವಾಗಿದ್ದು.

publive-image

ಡಿ ದೃಶ್ಯಂ 6
ಕಾರಿ​​ನಲ್ಲಿ ಬೆಂಗಳೂರಿನತ್ತ ಹೊರಟ ಸ್ವಾಮಿ ಫೋಟೋ!
ಇದೇ ಫೋಟೋ ಕಿಡ್ನಾಪ್ ನಂತರದ ಕಥೆಯನ್ನು ಹೇಳುತ್ತಿರುವುದು. ಇಲ್ಲಿ, ರೇಣುಕಾಸ್ವಾಮಿ ಜೊತೆ ಕಾರಿನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಸುಳಿವು ಸಿಗುತ್ತಿದೆ. ಅಷ್ಟೇ ಅಲ್ಲ, ಪವಿತ್ರಾ ಗೌಡ ಕಳುಹಿಸಿದ್ದಾರೆ ಅನ್ನೋ ಕಾರಣಕ್ಕೋ ಏನೋ? ಮುಂದೇನಾಗುತ್ತದೆ ಅನ್ನೋ ಸಣ್ಣದೊಂದು ಸುಳಿವೂ ಇಲ್ಲದ ರೇಣುಕಾಸ್ವಾಮಿ ಕಮಕ್ ಕಿಮಕ್ ಎನ್ನದೇ ಪ್ರಯಾಣ ಆರಂಭಿಸಿದ್ದ. ಟೋಲ್​ ಗೇಟ್​ ಬಳಿ ಸಾಗಿದ ಕಾರ್​​ನ ಫೋಟೋ ರೇಣುಕಾಸ್ವಾಮಿ ಎಲ್ಲಿ ತನಕ ಹೊರಟ ಅನ್ನೋ ಕಥೆ ಹೇಳುತ್ತಿದೆ.

publive-image

ಡಿ ದೃಶ್ಯಂ 7
ದುರ್ಗಾ ಬಾರ್​​ನಲ್ಲಿ ಎಣ್ಣೆ ಖರೀದಿಸಿತ್ತು ಡಿ ಗ್ಯಾಂಗ್
ಆರೋಪಿಗಳಾದ ರಾಘವೇಂದ್ರ, ಜಗದೀಶ್‌ ಹಾಗೂ ಅನು, ಮೃತ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿಕೊಂಡು ಬರುವಾಗ ದುರ್ಗಾ ಬಾರ್‌ನಲ್ಲಿ ಮದ್ಯವನ್ನು ಖರೀದಿ ಮಾಡಿದ್ದಾರೆ. ಮದ್ಯ ಖರೀದಿ ಮಾಡಿದ್ದಲ್ಲೇ ರೇಣುಕಾಸ್ವಾಮಿಯಿಂದಲೇ ಹಣ ಕೊಡಿಸಿರುವುದು ದುರ್ಗಾ ಬಾರ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾರ್‌ನಲ್ಲಿದ್ದಾಗ ರೇಣುಕಾಸ್ವಾಮಿ ಬಳಿ ಇದ್ದ ಚಿನ್ನದ ಚೈನು, ಉಂಗುರ, ವಾಚ್‌ ಹಾಗೂ ಬೆಳ್ಳಿಯ ಕರಡಿಗೆಯನ್ನೂ ಬೆದರಿಸಿ ಪಡೆದುಕೊಂಡಿದ್ದಾರೆ. ಇದು ತುಮಕೂರಿನ ಸನಿಹಕ್ಕೆ ರೇಣುಕಾಸ್ವಾಮಿ ಕಿಡ್ನಾಪ್ ಆಗಿ ಬಂದ ಕಥೆ ಹೇಳುತ್ತಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್​ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?

publive-image

ಡಿ ದೃಶ್ಯಂ 8
ರೇಣುಕಾಸ್ವಾಮಿಗೆ ಭಯ ಶುರುವಾಗಿದ್ದೇ ಇಲ್ಲಿಂದ!
ಮೃತ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಕೊಂಡು ಬರುವಾಗ ಸೆರೆಯಾದ ಇಟಿಯೋಸ್‌ ಕಾರ್‌ನ ಚಿತ್ರ. ಇದರಲ್ಲಿ ಎ8 ಆರೋಪಿ ರವಿಯ ವಿವರ ಕೂಡ ದಾಖಲಾಗಿದೆ. ನೆಲಮಂಗಲದ ಟೋಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಇಲ್ಲಿಂದೀಚೆಗೆ ರೇಣುಕಾಸ್ವಾಮಿಗೆ ಭಯ ಶುರುವಾಗಿದ್ದು. ಯಾಕಂದ್ರೆ ಇಷ್ಟೊತ್ತಿಗಾಗಲೇ ಡಿ ಗ್ಯಾಂಗ್​ ಎಣ್ಣೆ ಹೊಡ್ಕೊಂಡು ಫುಲ್ ಚಿತ್ತಾಲ್ ಪತ್ತಾಲ್ ಆಗಿತ್ತು. ಪ್ರತೀ ನಿಮಿಷಕ್ಕೊಮ್ಮೆ ಮಾತಿನ ವೈಖರಿ ಬದಲಾಗ್ತಿತ್ತು. ಮಿಸ್ಟರ್​​ ರೇಣುಕಾಸ್ವಾಮಿ ಅಂತಿದ್ದೋರು, ಮತ್ತೊಂದು ಮಗದೊಂದು ಸಂಬೋಧನೆಯ ಮೂಲಕ ರೇಣುಕಾಸ್ವಾಮಿಗೆ ಸುಳಿವು ನೀಡುತ್ತಿದ್ದರು.

publive-image

ಡಿ ದೃಶ್ಯಂ 9
ಸ್ವಾಮಿಯನ್ನ ಸಾವಿನ ಬಾಯಿಗೆ ತಳ್ಳಿದ ಫೋಟೋ
ರೇಣುಕಾಸ್ವಾಮಿಯನ್ನು ಅಕ್ಷರಶಃ ಸಾವಿನ ಬಾವಿಗೆ ತಳ್ಳಿದ್ದು ಇಲ್ಲಿಂದಲೇ ನೋಡಿ. ಯಾಕಂದ್ರೆ, ಕಾರಿನಲ್ಲಿ ಚಿತ್ರದುರ್ಗದಿಂದ ಕರೆತಂದ ಡಿ ಗ್ಯಾಂಗ್​ ಸದಸ್ಯರು ತುಮಕೂರು ದಾಟಿದ ಮೇಲೆ ತುಸು ಬಿಸಿ ಮುಟ್ಟಿಸುತ್ತಾ ಬಂದ್ರು. ಯಾವಾಗ ನೆಲಮಂಗಲ ಟೋಲ್​ ದಾಟಿತೋ, ಆ ಕ್ಷಣದಿಂದಲೇ ರೇಣುಕಾಸ್ವಾಮಿಗೆ ಭಯವೂ ಶುರುವಾಯ್ತು. ಇನ್ನು, ತನ್ನ ಕೊನೆಯ ನಿಲ್ದಾಣ ಇದೇ ಜಾಗ ಇರಬಹುದು ಅನಿಸಿದ್ದು ಈ ಫೋಟೋದ ಜಾಗಕ್ಕೆ ಕಾರ್​ ಬಂದು ನಿಂತಾಗ. ನೋಡಿ, ಇದು ಪಟ್ಟಣಗೆರೆ ಶೆಡ್​​ಗೆ ಸನಿಹ ತೆಗೆದ ಫೋಟೋ. ಇದೇ ಕಾರಿನಲ್ಲೇ ರೇಣುಕಾಸ್ವಾಮಿ ಭಯದಿಂದ ನಡುಗುತ್ತಾ ಕುಳಿತಿದ್ದ.

ಡಿ ದೃಶ್ಯಂ 10
ಅಂತಿಮ ನಿಲ್ದಾಣಕ್ಕೆ ಬಂದಿಳಿಯುವ ಮುನ್ನ
ರೇಣುಕಾಸ್ವಾಮಿಯನ್ನು ರಾಘವೇಂದ್ರ ಅಂಡ್ ಟೀಮ್ ಚಿತ್ರದುರ್ಗದಿಂದ ಸುಮ್ಮನೆ ಕರೆದುಕೊಂಡು ಬರಲಿಲ್ಲ. ತುಮಕೂರು ದಾಟಿದಾಗಿನಿಂದ ಒಂದು ಲೆಕ್ಕವೇ ಶುರುವಾಗಿತ್ತು. ಯಾವಾಗ ಈ ಪಟ್ಟಣಗೆರೆ ಶೆಡ್​​ ಬಳಿಗೆ ಕಾರ್​ ಬಂದು ನಿಲ್ತೋ ರೇಣುಕಾಸ್ವಾಮಿಗೆ ಒಂದು ಅರ್ಥವಾಗಿತ್ತು. ಇದು ನನ್ನ ಬದುಕಿನ ಅಂತಿಮ ನಿಲ್ದಾಣ ಅನ್ನೋದು ಅರ್ಥವಾಗಿತ್ತು. ಯಾಕಂದ್ರೆ, ಅಲ್ಲಿಗೆ ಬರುವ ಹೊತ್ತಿಗೆ ಕಾರಿನಲ್ಲಿ ಸಣ್ಣ ಸಣ್ಣ ಮಾತಿನ ಮೂಲಕ, ಸಂಜ್ಞೆಗಳ ಮೂಲಕ ರೇಣುಕಾಸ್ವಾಮಿಗೆ ಡಿ ಗ್ಯಾಂಗ್ ನೋಡಪ್ಪಾ ಇದೇ ನಿನ್ನ ಅಂತಿಮ ನಿಲ್ದಾಣ ಅನ್ನೋ ಮುನ್ಸೂಚನೆ ನೀಡಿತ್ತು ಅನಿಸುತ್ತದೆ. ಚಾರ್ಜ್​​ಶೀಟ್​​ನಲ್ಲಿ ಇಂಥಾ ಸಾಕಷ್ಟು ಫೋಟೋಗಳು ಸ್ವಾಮಿಯ ಸಂಕಟದ ಸುಳಿವು ನೀಡುತ್ತಿವೆ.

ಇದನ್ನೂ ಓದಿ: ಬರೀ ಫೋಟೋ ಅಲ್ಲ ಸೆಕ್ಸ್‌ಗೂ ಪೀಡಿಸಿದ್ದ.. ಪವಿತ್ರಾ ಗೌಡ 3 ಶಾಕಿಂಗ್ ಸ್ಟೇಟ್‌ಮೆಂಟ್‌; ಏನದು? 

publive-image

ಡಿ ದೃಶ್ಯಂ-11
ಪವಿತ್ರಾ ದರ್ಶನ್‌ ಪ್ರೇಮಕ್ಕೆ ಸಾಕ್ಷಿಯ ಚಿತ್ರಗಳು!
ದರ್ಶನ್​ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧಕ್ಕೆ ಸಾಕ್ಷಿಯಂತಿರೋ ಈ ಫೋಟೋಗಳನ್ನೂ ಕೂಡ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಅಂಟಿಸಿದ್ದಾರೆ. ಇದನ್ನ ನೋಡಿದ ಮೇಲಾದ್ರೂ ದರ್ಶನ್​- ಪವಿತ್ರಾ ನಡುವೆ ಆ ರೀತಿಯ ಸಂಬಂಧ ಇತ್ತು ಅನ್ನೋದು ಕನ್ಫರ್ಮ್​ ಆಗದೇ ಇರಲ್ಲ. ದರ್ಶನೇ ಹೇಳಿಕೊಂಡಿರೋ ಪ್ರಕಾರ ಇಬ್ಬರೂ ಲಿವ್​ ಇನ್​ ಸಂಸಾರ. ಅಲ್ಲಲ್ಲ, ಲಿವ್​ ಇನ್​ರಿಲೇಷನ್​​ಶಿಪ್ಪನಲ್ಲಿದ್ರು. ಹಾಗೆಯೇ, ಪವಿತ್ರಾ ಗೌಡ ಕೂಡ ವಿಜಯಲಕ್ಷ್ಮಿ ಬಗ್ಗೆ ಗೊತ್ತಿದ್ದರೂ ತಾವಿಬ್ಬರೂ ಪ್ರೀತಿಯಲ್ಲಿರೋದನ್ನು ಒಪ್ಪಿಕೊಂಡಿದ್ದಾರೆ. ಆ ಪ್ರೀತಿಗೆ ಪುರಾವೆ ನೀಡುವಂತಹ ಫೋಟೋಗಳನ್ನ ಪೊಲೀಸರು ತಮ್ಮ ಕ್ರೈಂ ರೆಕಾರ್ಡ್ಸ್​ನಲ್ಲಿ ಅಂಟಿಸುವಂತಹ ದುಸ್ಥಿತಿ ಬಂದಿದ್ದು ನಿಜಕ್ಕೂ ದುರಾದೃಷ್ಟಕರ.

publive-image

ಡಿ ದೃಶ್ಯಂ-12
ಬಿಟ್ಬಿಡಿ ಸ್ವಾಮಿ ಅಂತಿರೋ ರೇಣುಕಾಸ್ವಾಮಿ!
ಈ ಚಿತ್ರ. ಇದೊಂದೇ ಚಿತ್ರ. ಡಿಗ್ಯಾಂಗ್‌ನ ಮಹಾನ್‌ ಕ್ರೌರ್ಯದ ಕೇಕೆಯನ್ನ ಬಿಚ್ಚಿಟ್ಟಿಯಾಗಿದೆ. ಡಿಗ್ಯಾಂಗ್‌ನಲ್ಲಿನ ಕಟುಕರು ಆವತ್ತು ಅದೆಷ್ಟು ಹಸಿದ ತೋಳಗಳಾಂತಾಗಿದ್ರು ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಇದು ಪಟ್ಟಣಗೆರೆ ಶೆಡ್​​ನಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್‌ ಎಂಟ್ರಿಯಾದಾಗ ರೇಣುಕಾಸ್ವಾಮಿ ತನ್ನ ಬಿಡ್ಬಿಡಿ ಸ್ವಾಮಿ ಅಂತಾ ಪ್ರಾಣ ಭಿಕ್ಷೆ ಬೇಡಿದ್ದ ಫೋಟೋ. ತನಗೆ ಗರ್ಭಿಣಿ ಪತ್ನಿ ಇದ್ದಾಳೆ. ಬಿಡ್ಬಿಡಿ ಅಣ್ಣಾ ಅಂತಾ ಅಂಗಲಾಚಿರುವ ಫೋಟೋವನ್ನೂ ತಗೆದಿದ್ದ ದುರುಳರು ಅಕ್ಷರಶಃ ಮೃಗೀಯವಾಗಿ ವರ್ತಿಸಿದ್ರು. ಆದ್ರೂ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಸ್ವಾಮಿಗೆ ಯಾವುದೇ ರೀತಿಯ ಕರುಣೆಯನ್ನ ತೋರಿಸಲಿಲ್ಲ.

publive-image

ಡಿ ದೃಶ್ಯಂ-13
ಶವವಾಗಿ ಬಿದ್ದಿರುವ ಫೋಟೋ
ಅಕ್ಕಪಕ್ಕ ಲಾರಿಗಳು... ನೀಲಿ ಜೀನ್ಸ್‌... ಬಿಳಿ ಬನಿಯನ್‌ ಹಾಕಿಕೊಂಡು ರೇಣುಕಾಸ್ವಾಮಿ ನಿತ್ರಾಣನಾಗಿ ಬಿದ್ದಿದ್ದಾನೆ. ಇದು ಕೂಡ ಆವತ್ತು ಮಾರಣಾಂತಿಕ ಹಲ್ಲೆಯಾದ ದಿನ ಪಟ್ಟಣಗೆರೆ ಶೆಡ್‌ನಲ್ಲಿ ತೆಗೆದಿದ್ದ ಫೋಟೋ. ಹೌದು, ರೇಣುಕಾಸ್ವಾಮಿ ಮೇಲೆ ಡಿಗ್ಯಾಂಗ್‌ ಅಮಾನವೀಯವಾಗಿ ಹಲ್ಲೆ ನಡೆಸಿದ್ಮೇಲೆ ಅಲ್ಲೇ ಸುಸ್ತಾಗಿ ಬಿದ್ದು ಹೋಗ್ತಾನೆ. ಇದು ಸುಸ್ತಾಗಿ ಬಿದ್ದಿದ್ದೋ ಅಥವಾ ಸತ್ತೇ ಹೋಗಿರುವ ಫೋಟೋನಾ ಕ್ಲ್ಯಾರಿಟಿ ಇಲ್ಲ. ಆದ್ರೆ ಫೋಟೋ ಪೊಲೀಸ್‌ ಫೈಲ್ಸ್‌ಗೆ ಸಿಕ್ಕಿರೋ ಸ್ಟ್ರಾಂಗ್‌ ಎವಿಡೆನ್ಸ್‌. ಈ ಫೋಟೋವನ್ನು ಸ್ಥಳದಲ್ಲಿದ್ದ ಆರೋಪಿಗಳು ಫೋಟೋ ತೆಗೆದು ವಿನಯ್‌ಗೆ ಹಳುಹಿಸಿದ್ರು. ಆತನ ಮೊಬೈಲ್‌ನಲ್ಲಿ ಪತ್ತೆಯಾಗಿದೆ ಅಂತಾ ಹೇಳಲಾಗ್ತಿದೆ.

publive-image

ಡಿ ದೃಶ್ಯಂ-14
ಡಿಗ್ಯಾಂಗ್‌ಗೆ ಉರುಳಾಗುತ್ತಾ ಹಗ್ಗ, ಬಡಿಗೆ?
ಈ ಕೊಲೆ ಕೇಸಲ್ಲಿ ಪೊಲೀಸರು ಸ್ವಲ್ಪ ಯಾಮಾರಿದ್ರೂ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು. ಆದ್ರೆ, ಪೊಲೀಸ್ರು ಕೇವಲ ಆರೋಪಿಗಳಿಗೆ ಜೇಡರ ಬಲೆ ಹೆಣೆದು ಯಾವುದೇ ಒತ್ತಡಕ್ಕೆ ಮಣಿಯದೇ ಕಂಬಿ ಎಣಿಸುವಂತೆ ಮಾಡಿದ್ದು ಅಷ್ಟೇ ಅಲ್ಲ. ಆರೋಪಿಗಳೇ ಅಪರಾಧಿಗಳು ಅಂತಾ ಕೋರ್ಟ್‌ನಲ್ಲಿ ಪ್ರೂವ್‌ ಮಾಡಲು ಬೇಕಾದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಅದ್ರಲ್ಲಿ ಇಲ್ಲಿ ನಾವು ತೋರಿಸ್ತೀರೋ ಹಗ್ಗ, ಬಡಿಗೆಯೂ ದೊಡ್ಡ ಸಾಕ್ಷ್ಯವಾಗುತ್ತೆ. ಇದನ್ನು ಬಳಸಿಯೇ ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್‌ ಹಲ್ಲೆ ಮಾಡಿದೆ.

ಇದನ್ನೂ ಓದಿ: ‘ಬರೋಬ್ಬರಿ 1.75 ಕೋಟಿ ಸಾಲ ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದೆ’- ನಟ ದರ್ಶನ್​​ 

publive-image

ಡಿ ದೃಶ್ಯಂ-15
ಶಾಕ್‌ ಕೊಟ್ಟ ಡಿವೈಸ್​ ಸಿಕ್ತು, ಅದೂ ವಿಟ್ನೆಸ್​!
ಮರ್ಡರ್‌ ಕೇಸ್‌ಗಳನ್ನು ಭೇದಿಸೋದು ದೊಡ್ಡ ಸಾಧನೆ ಅಲ್ಲ, ಆದ್ರೆ, ಅದ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹ ಮಾಡೋದು ಪೊಲೀಸ್ರಿಗೆ ಸವಾಲಾಗಿರುತ್ತೆ. ರೇಣುಕಾಸ್ವಾಮಿಗೆ ಒಟ್ಟು 39 ಕಡೆ ಗಾಯವಾಗಿತ್ತು. ಅದು ಪೋಸ್ಟ್‌ ಮಾರ್ಟಂನಲ್ಲಿ ಗೊತ್ತಾಗಿತ್ತು. ಹಾಗೇ ಕರೆಂಟ್‌ ಶಾಕ್‌ ಕೊಟ್ಟಿದ್ದಾರೆ ಅನ್ನೋದು ಪೋಸ್ಟ್‌ ಮಾರ್ಟಂ ವರದಿಯಲ್ಲಿಯೇ ಹೇಳಿತ್ತು. ಆ ವರದಿಗೆ ಸಂಬಂಧ ಪಟ್ಟಂತೆ ಸ್ಥಳ ಮಹಜರಿಗೆ ಹೋದಾಗ ಪೊಲೀಸ್ರು ಆ ಸಾಧನವನ್ನು ವಶಕ್ಕೆ ಪಡ್ಕೊಂಡಿದ್ದಾರೆ. ಅದರ ಫೋಟೋವನ್ನು ಚಾರ್ಜ್‌ಶೀಟ್‌ನಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಡಿಗ್ಯಾಂಗ್‌ನ ಕ್ರೌರ್ಯಕಾಂಡವನ್ನು ತೋರಿಸಿದ್ದು ನ್ಯಾಯಾಲದಲ್ಲಿ ಪ್ರಮುಖ ಸಾಕ್ಷ್ಯವಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ರೇಣುಕಾಸ್ವಾಮಿಗೆ ಪವಿತ್ರಾ ನಂಬರ್ ಸಿಕ್ಕಿದ್ದು ಹೇಗೆ? ಮೆಸೇಜ್‌ ಮಾಡಿ ಬಲೆಗೆ ಬಿದ್ದ ಇಂಚಿಂಚೂ ಮಾಹಿತಿ ಇಲ್ಲಿದೆ! 

publive-image

ಡಿ ದೃಶ್ಯಂ-16
ಪವಿತ್ರಾ, ದರ್ಶನ್‌.. ಚಪ್ಪಲಿಯೂ ಸಾಕ್ಷ್ಯವಾಯ್ತು!
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಪವಿತ್ರಾ ಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಹಾಗೇ ದರ್ಶನ್‌ ಕೂಡ ಹಲ್ಲೆ ನಡ್ಸಿದ್ದಾರೆ ಅನ್ನೋ ಮಾಹಿತಿ ಇತ್ತು. ಹಾಗೇ ಪವಿತ್ರಾ ಗೌಡ ಚಪ್ಪಲಿ ಮೇಲೆ ಸಿಕ್ಕಿದ್ದ ರಕ್ತದ ಕಲೆಗೂ, ರೇಣುಕಾಸ್ವಾಮಿ ರಕ್ತಕ್ಕೂ ಮ್ಯಾಚ್‌ ಆಗಿತ್ತು. ಇನ್ನು ದರ್ಶನ್‌ ಧರಿಸಿದ್ದ ಶೂದಲ್ಲಿ ಪಟ್ಟಣಗೆರೆ ಧೂಳ್‌ ಸಹ ಪತ್ತೆಯಾಗಿತ್ತು. ಇದೀಗ ಅವುಗಳನ್ನು ಪೊಲೀಸ್ರು ವಶಪಡಿಸಿಕೊಂಡಿದ್ದು, ಲ್ಯಾಬ್‌ನಲ್ಲಿ ಟೆಸ್ಟ್‌ ಮಾಡಿಸ್ಕೊಂಡ್‌ ಕೋರ್ಟ್‌ಗೆ ಸಾಕ್ಷ್ಯವಾಗಿ ದಾಖಲೆ ನೀಡಿದ್ದಾರೆ.

publive-image

ಡಿ ದೃಶ್ಯಂ-17
ಹೋಟೆಲ್‌ನಲ್ಲಿ ದರ್ಶನ್‌ ಟೆನ್ಷನ್‌!
ದರ್ಶನ್‌ ಅರೆಸ್ಟ್‌ ಆಗೋದಕ್ಕೂ ಒಂದು ದಿನ ಹಿಂದೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರೋ ಫೋಟೋ ಇದು. ಅದು ಮೈಸೂರಿನ ರ್ಯಾಡಿಸನ್‌ ಹೋಟೆಲ್‌ನದ್ದು. ಹೌದು, ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಭೀಕರ ಹಲ್ಲೆ ನಡ್ಸಿಯಾದ್ಮೇಲೆ ದರ್ಶನ್‌ ನೇರವಾಗಿ ಮೈಸೂರಿಗೆ ಹೋಗ್ತಾರೆ. ಅಲ್ಲಿ ಡೆವಿಲ್‌ ಸಿನಿಮಾ ಶೂಟಿಂಗ್‌ ಇರೋದ್ರಿಂದ ಹೋಟೆಲ್‌ನಲ್ಲಿ ಉಳಿದ್ಕೊಳ್ತಾರೆ. ಆ ಸಂದರ್ಭ ಸಿಸಿಟಿವಿ ದೃಶ್ಯಗಳನ್ನು ಪೊಲೀಸ್ರು ವಶಕ್ಕೆ ಪಡ್ಕೊಂಡಿದ್ದಾರೆ. ಅದ್ರ ಒಂದು ಚಿತ್ರವನ್ನು ಪೊಲೀಸ್ರು ದಾಖಲೆಯಾಗಿದೆ ಕೋರ್ಟ್‌ಗೆ ಚಾರ್ಜ್‌ಶೀಟ್‌ನಲ್ಲಿ ನೀಡಿದ್ದಾರೆ.

publive-image

ಡಿ ದೃಶ್ಯಂ-18
ಪವಿತ್ರಾಗೌಡ ಶೆಡ್‌ಗೆ ಹೋಗ್ತಿರೋದು!
ಪೊಲೀಸ್ರು ಅದೆಷ್ಟು ಚಾಣಾಕ್ಷ್ಯತನದಿಂದ ಬುದ್ದಿವಂತಿಕೆಯಿಂದ ತನಿಖೆ ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇದು ನೋಡಿ. ರೇಣುಕಾಸ್ವಾಮಿ ಚಿತ್ರದುರ್ಗದಲ್ಲಿ ಕಿಡ್ನಾಪ್‌ ಆದಾಗಿಂದ ದರ್ಶನ್‌ ಮೈಸೂರಿನಲ್ಲಿ ಅರೆಸ್ಟ್‌ ಆಗುವವರೆಗೂ ಏನೇನ್‌ ಆಯ್ತು ಅನ್ನೋದನ್ನು ಸಿಸಿಟಿವಿಗಳನ್ನು ಸಂಗ್ರಹ ಮಾಡಿದ್ದಾರೆ. ಆರೋಪಿಗಳು ತಮ್ಮ ಮನೆಯ ಸಿಸಿಟಿವಿ ದಾಖಲೆಗಳನ್ನು ನಾಶ ಮಾಡೋ ಸಾಧ್ಯತೆ ಇದೆ ಅನ್ನೋದ್‌ ಪೊಲೀಸ್ರಿಗೆ ಗೊತ್ತಿತ್ತು. ಹೀಗಾಗಿ ಅವ್ರು ಪಕ್ಕದ ಮನೆಯವ್ರ ಸಿಸಿಟಿವಿಗಳನ್ನು ವಶಕ್ಕೆ ಪಡ್ಕೊಂಡಿದ್ದಾರೆ. ಅಂದ ಹಾಗೇ ಇದು ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್‌, ವಿನಯ್‌ ಮತ್ತು ಪ್ರದೋಷ್‌ ಸೇರ್ಕೊಂಡ್‌ ಪವಿತ್ರಾ ಗೌಡ ಅನ್ನು ಮನೆಯಿಂದ ಕರ್ಕೊಂಡ್‌ ಹೋಗ್ತಾ ಇರೋದು.

publive-image

ಡಿ ದೃಶ್ಯಂ-19
ದರ್ಶನ್‌ ಮನೆಗೆ ಬಂದು ಹೋಗಿರೋದು!
ಪಟ್ಟಣಗೆರೆಯಲ್ಲಿ ಡಿಗ್ಯಾಂಗ್‌ನ ರಾಕ್ಷಸಿ ಕ್ರೌರ್ಯಕ್ಕೆ ರೇಣುಕಾಸ್ವಾಮಿ ಪ್ರಾಣ ಕಳೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಮೂರ್ನಾಲ್ಕು ಜನ ದರ್ಶನ್‌ ಮನೆಗೆ ಓಡೋದಿ ಬರ್ತಾರೆ. ಅಣ್ಣಾ ರೇಣುಕಾಸ್ವಾಮಿ ಸತ್ತು ಹೋಗಿದ್ದಾನೆ ಅಂತಾ ಹೇಳಿ ಮೀಟಿಂಗ್‌ ಮಾಡಿ. 40 ಲಕ್ಷ ತೆಗೆದ್ಕೊಂಡ್‌ ಹೋಗ್ತಾರೆ. ಆದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸ್ರು ಅದನ್ನು ದಾಖಲೆಯಾಗಿ ನೀಡಿದ್ದಾರೆ. ಇದು ರೇಣುಕಾಸ್ವಾಮಿ ಕೊಲೆಯಾದ ದಿನದ ರಾತ್ರಿಯಾಗಿರೋದು.

ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್​ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?

publive-image

ಡಿ ದೃಶ್ಯಂ-20
ಸ್ವಾಮಿ ಶವ ಬಿಸಾಕ್ತಾ ಇರೋ ದೃಶ್ಯ!
ರಾತ್ರಿ ವೇಳೆ ರೇಣುಕಾಸ್ವಾಮಿ ಶವವನ್ನು ಆರೋಪಿಗಳು ಕಾರ್‌ನಲ್ಲಿ ತುಂಬಿಕೊಂಡು ಬರ್ತಾರೆ. ಹಾಗೇ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಮೋರಿಗೆ ಎಸೆಯುತ್ತಾರೆ. ಅದೇ ದೃಶ್ಯ ನೋಡಿ ಇದು. ಮೂವರು ಆರೋಪಿಗಳು ಕಾರ್‌ನಿಂದ ಶವನನ್ನು ತೆಗೆದು ಮೋರಿಗೆ ಎಸೆಯುತ್ತಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದನ್ನು ಪೊಲೀಸ್ರು ಫೋಟೋ ಮಾಡಿ ದಾಖಲೆಯಾಗಿ ಕೋರ್ಟ್‌ಗೆ ಕೊಟ್ಟಿದ್ದಾರೆ. ಇದು ಆರೋಪಿಗಳ ಪಾಲಿಗೆ ಕಂಟಕವಾಗೋದು ಗ್ಯಾರಂಟಿ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment