ರೇಣುಕಾಸ್ವಾಮಿ ಭೇಟಿಗೂ ಮೊದಲು ಮಾತನಾಡುತ್ತಿರಲಿಲ್ಲ ದರ್ಶನ್, ಪವಿತ್ರಾ!
ನಟ ದರ್ಶನ್ ಜೊತೆ ಪವಿತ್ರಾಗೌಡ ಮುನಿಸಿಕೊಳ್ಳಲು ಅಸಲಿ ಕಾರಣವೇನು?
ಜಗಳ, ಮೌನದ ಬಗ್ಗೆ ಪೊಲೀಸರ ಎದುರು ಹೇಳಿಕೆ ನೀಡಿರುವ ಪವಿತ್ರಾಗೌಡ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ಪ್ರತಿಯೊಬ್ಬ ಆರೋಪಿಯ ಸ್ವ-ಇಚ್ಛಾ ಹೇಳಿಕೆಯನ್ನು ದಾಖಲಿಸಿಕೊಂಡು ಅದನ್ನು 3991 ಪುಟದ ಜಾರ್ಜ್ಶೀಟ್ನಲ್ಲಿ ದಾಖಲಿಸಿದ್ದಾರೆ. ಆರೋಪಿ ನಂಬರ್ 1 ಆಗಿರುವ ಪವಿತ್ರಾಗೌಡರನ್ನು ವಿಚಾರಣೆ ಮಾಡಿರುವ ಪೊಲೀಸರು ಅವರ ಹೇಳಿಕೆಯನ್ನು ಪುಟ ಸಂಖ್ಯೆ 3849 ರಿಂದ 3851 ಪುಟದವರೆಗೆ ಪವಿತ್ರಾ ಹೇಳಿಕೆಯನ್ನು ದಾಖಲಿಸಿದ್ದಾರೆ. ಪವಿತ್ರಾ ತಮ್ಮ ಹೇಳಿಕೆಯಲ್ಲಿ ಈ ಹಿಂದೆ ದರ್ಶನ್ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರ ಬಗ್ಗೆಯೂ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ಗೂ ಪವಿತ್ರಾಗೂ ಇರೋ ನಂಟೇನು? ಸ್ವಇಚ್ಛಾ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು; ಏನದು?
ರೇಣುಕಾಸ್ವಾಮಿ ಕೊಲೆಯ ಒಂದು ತಿಂಗಳ ಮುಂಚೆ ಪವಿತ್ರಾಗೌಡ ದರ್ಶನ್ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರು. ಅದಕ್ಕೆ ಕಾರಣ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಇದೇ ವರ್ಷ ಮೇ 19 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ನನಗೆ ತಿಳಿಸದೇ ಪತ್ನಿಯೊಂದಿಗೆ ದುಬೈಗೆ ಹೋಗಿದ್ದರಿಂದ ನಾನು ಕೋಪಗೊಂಡು ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದೆ ಎಂದು ತಮ್ಮ ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ದಿನ ನಡೆದಿದ್ದೇನು? ನಟ ದರ್ಶನ್ ಬಿಚ್ಚಿಟ್ಟ ಇಂಚಿಂಚೂ ಶಾಕಿಂಗ್ ಮಾಹಿತಿ ಇಲ್ಲಿದೆ!
ಇದರೊಂದಿಗೆ ಫೆಬ್ರವರಿಯಿಂದ ಗೌತಮ್ ಕೆ ಎಸ್ ಎಂಬ ಖಾತೆಯಿಂದ ನನಗೆ ನಿರಂತರವಾಗಿ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆಯೂ ಪವಿತ್ರಾಗೌಡ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ