Advertisment

ಪ್ರೀತ್ಸೆ ಪ್ರೀತ್ಸೆ ಅಂತ 38 ವರ್ಷದ ಮಹಿಳೆ ಹಿಂದೆ ಬಿದ್ದ 20ರ ಯುವಕ.. ಆ ಮೇಲೆ ಆಗಿದ್ದೆ ಫುಲ್​ ಥ್ರಿಲ್ಲಿಂಗ್

author-image
Bheemappa
ಪ್ರೀತ್ಸೆ ಪ್ರೀತ್ಸೆ ಅಂತ 38 ವರ್ಷದ ಮಹಿಳೆ ಹಿಂದೆ ಬಿದ್ದ 20ರ ಯುವಕ.. ಆ ಮೇಲೆ ಆಗಿದ್ದೆ ಫುಲ್​ ಥ್ರಿಲ್ಲಿಂಗ್
Advertisment
  • ತನಗಿಂತ 18 ವರ್ಷ ದೊಡ್ಡವಳ ಹಿಂದೆ ಬಿದ್ದ ಯಂಗ್ ಬಾಯ್
  • ಆಕೆಗೆ ಮದುವೆಯಾದ್ರೂ ನೀನೇ ಬೇಕು ಸಖಿ ಅಂತಾ ಕಾಡಿದ್ದ
  • ಶುರುವಾದ ಲವ್​ ಸ್ಟೋರಿ ಆಮೇಲೆ ಎಂಡ್ ಆಗಿದ್ದು ಹೇಗೆ..?

ಆಕೆಗೆ ಮದುವೆಯಾಗಿತ್ತು.. ಚೆಂದದ ಗಂಡ.. ಸುಂದರ ಸಂಸಾರ.. ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು.. ಆದ್ರೆ, ಈ ಮಧ್ಯೆ ನೀನೇ ಬೇಕು ನಲ್ಲೆ ಅಂತಾ 20ರ ಹುಡುಗನೊಬ್ಬ ಬೇಡ ಬೇಡ ಅಂದ್ರೂ 38ರ ಮಹಿಳೆಯನ್ನ ಬಿಡದೇ ಕಾಡಿದ್ದ. ಆದ್ರೆ, ಈ ಒನ್ ವೇ ಲವ್​ ಸ್ಟೋರಿ ಎಂಡ್ ಆಗಿದ್ದು ಮಾತ್ರ ಥ್ರಿಲ್ಲಿಂಗ್​ ಕ್ರೈಂ ಸ್ಟೋರಿಯಲ್ಲಿ. ಅಷ್ಟಕ್ಕೂ ಆಗಿದ್ದೇನು?.

Advertisment

ಇದನ್ನೂ ಓದಿ:ಎಗ್​ ರೈಸ್​ ತಿನ್ನಲು ಹೋಗಿದ್ದ 6 ವಿದ್ಯಾರ್ಥಿಗಳು.. 800 ಬಸ್ಕಿ ಶಿಕ್ಷೆಗೆ ಭಯ ಬಿದ್ದು SSLC ಸ್ಟೂಡೆಂಟ್ಸ್​ ನಾಪತ್ತೆ

ಈ ಪ್ರೇಮ ಕಥೆಯ ಪಾಗಲ್ ಪ್ರೇಮಿಯ ಹೆಸರು ಕಾರ್ತಿಕ್. ಈತನಿಗೆ ಇನ್ನು ಕೇವಲ 20 ವರ್ಷಗಳು. ಆಗಲೇ ಈತನಲ್ಲಿ ಪ್ರೀತಿ ಹುಟ್ಟಿಕೊಂಡಿತ್ತು. ಅದು ತನಗಿಂತ 18 ವರ್ಷ ದೊಡ್ಡವಳ ಮೇಲೆ. ಆದರೆ 38 ವರ್ಷದ ಮಹಿಳೆ ಹಿಂದೆ ಬಿದ್ದಿದ್ದ ಪೋರ. ಈತ ಮಾಡಿದ್ದು ಮಾತ್ರ ಘನ ಘೋರ.

ಇದನ್ನೂ ಓದಿ: ಸರ್ಕಾರ​ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?

Advertisment

publive-image

ಕಾಲೇಜು ಬಿಟ್ಟು ಪ್ರೀತಿ ಕಡೆ ಮುಖ ಮಾಡಿದ್ದ ಕಾರ್ತಿಕ್​, ಅವಳೊಬ್ಬಳ ಹಿಂದೆ ಬಿದ್ದಿದ್ದ. ಆಕೆಗೆ ಮದುವೆಯಾಗಿದ್ರೂ ನೀನೇ ಬೇಕು ಸಖಿಯೇ ಅಂತಾ ಬಿಡದೇ ಕಾಡಿದ್ದ. ಹೀಗೆ ಶುರುವಾದ ಲವ್​ ಸ್ಟೋರಿ ಆಮೇಲೆ ಏನ್​ ಆಯ್ತು ಗೊತ್ತಾ?.

ಆ ಮಹಿಳೆ ಫೋನ್ ಮಾಡುತ್ತಿದ್ದಳು. ಇದಕ್ಕಾಗಿಯೇ ಒಂದು ವಾರ ಮೊದಲೇ ನಮ್ಮ ಬಳಿ ಜಗಳ ಮಾಡಿದ್ದ. ನೀವು ಬೇಡ ಅವಳೆ ಬೇಕು ಎಂದು ಹೋಗಿದ್ದ. ಅಲ್ಲಿಗೆ ಹೋಗಿ ಬಾ ಎಂದು ಅವಳನ್ನ ಕರೆದಿದ್ದಾನೆ. ಅದಕ್ಕೆ ಆಕೆ ನಾನು ಗಂಡನನ್ನ ಬಿಟ್ಟು ಬರಲ್ಲ. ಬೇಕಾದ್ರೆ ಹಾಗೇ ಮಾತಾಡೋಣ ಎಂದಿದ್ದಾಳೆ. ಇಬ್ಬರಿಗೂ ಒಂದು ವಾರದಿಂದ ಜಗಳವಾಗಿದೆ. ಅವಳು ಬೇಡ ಎಂದರೆ ಬೇರೆ ಮದುವೆ ಮಾಡು ಎಂದಿದ್ದ. ಆದರೆ ಅವಳತ್ತಿರ ಹೋಗಿ ನೀನು ಬಂದು ಬಿಡು ಹೋಗಿ ಬಿಡೋಣ ಎಂದು ಹೇಳಿದ್ದನು.

ಪವಿತ್ರಾ, ಗಾಯಾಳು ಕಾರ್ತಿಕ್ ಸಹೋದರಿ

ನನಗೆ ‘ಇವಳೇ’ ಬೇಕು..!

  • ಮದುವೆ ಆಗಿರೋದು ಗೊತ್ತಿದ್ರು ಆಕೆ ಹಿಂದೆ ಬಿದ್ದಿದ್ದ ಕಾರ್ತಿಕ್
  • ಕಾರ್ತಿಕ್​ ಲವ್​ ಸಿಗ್ನಲ್​ ಕಂಡು ವಾರ್ನ್​ ಮಾಡಿದ್ದ ಆಕೆ ಗಂಡ
  • ಕಾರ್ತಿಕ್​ಗೆ​ ಮಹಿಳೆಯ ಸಹೋದರ ವಿನೋದ್ ಕೂಡ ವಾರ್ನ್
  • ಎಷ್ಟೇ ವಾರ್ನ್​ ಮಾಡಿದ್ರೂ ಮಹಿಳೆ ಹಿಂದೆ ಬಿದ್ದಿದ್ದ ಕಾರ್ತಿಕ್​
Advertisment

ಇದನ್ನೂ ಓದಿ: ಮೊಬೈಲ್​ ರಿಟ್ರೀವ್​, ದರ್ಶನ್​ಗೆ ಮತ್ತಷ್ಟು ಸಂಕಷ್ಟ.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

publive-image

ಹೀಗೆ ಅವಳ ಪ್ರೇಮ ಪಾಶದಲ್ಲಿ ವಿಲ ವಿಲ ಅಂತಿದ್ದ ಕಾರ್ತಿಕ್​, ಅದ್ಯಾಕೋ ಗೊತ್ತಿಲ್ಲ ಕಳೆದ ಆಗಸ್ಟ್ 19ರಂದು ರಾತ್ರಿ 11 ಗಂಟೆಗೆ ಪಂತರಪಾಳ್ಯಕ್ಕೆ ಹೋಗಿದ್ದ. ಈ ವೇಳೆ ಭಾವ ಸತೀಶ್, ಗೆಳೆಯ ಸೂರ್ಯನ ಜೊತೆ ಸೇರಿ ಮಹಿಳೆ ಸಹೋದರ ವಿನೋದ್, ಕಾರ್ತಿಕ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಲೆ ಮತ್ತು ಹೊಟ್ಟೆಗೆ ಚಾಕು ಇರಿದು ಎಸ್ಕೇಪ್ ಆಗಿ ಬಿಟ್ಟಿದ್ದಾರೆ.

ಈ ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಅದೇನೆ ಹೇಳಿ.. ಪ್ರೀತಿ ಪ್ರೇಮ ಎಲ್ಲಾ ಬಿಟ್ಟು ಕಾರ್ತಿಕ್​ ಕಾಲೇಜಿಗೆ ಹೋಗಿದ್ದಿದ್ರೆ ಎಲ್ಲ ಸರಿ ಇರ್ತಾಯಿತ್ತು. ಆದ್ರೀಗ ಮದುವೆ ಆಗಿರೋ ಮಹಿಳೆ ಹಿಂದೆ ಬಿದ್ದು ಆಸ್ಪತ್ರೆ ಸೇರುವಂತಾಗಿದ್ದು ಮಾತ್ರ ವಿಪರ್ಯಸ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment