newsfirstkannada.com

ಸರ್ಕಾರ​ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?

Share :

Published August 22, 2024 at 7:28am

Update August 22, 2024 at 7:29am

    24 ಗಂಟೆಯೊಳಗೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟಿಸ್

    ಯಾರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ

    BJP, JDS ವಿರುದ್ಧ ಗವರ್ನರ್ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿಲ್ಲ

ಸಿಎಂ ಸಿದ್ದರಾಮಯ್ಯಗೆ ಮುಡಾ ಭೂತ ಬೆನ್ನತ್ತಿದ ಬೇತಾಳದಂತೆ ಕಾಡುತ್ತಿದೆ. ಪ್ರಾಸಿಕ್ಯೂಷನ್​ ಭೀತಿ ಸಿಎಂಗೆ ಇನ್ನಿಲ್ಲದಂತೆ ಕಾಡ್ತಿದೆ. ಈ ಮಧ್ಯೆ ವಿಪಕ್ಷಗಳ ವಿರುದ್ಧ ಸಿದ್ದು ಮಾತಿನ ಯುದ್ಧ ನಡೆಸ್ತಿದ್ದಾರೆ. ಜೊತೆಗೆ ಪ್ರಾಸಿಕ್ಯೂಷನ್ ಪ್ರತ್ಯಸ್ತ್ರವನ್ನ ಪ್ರಯೋಗಿಸಿ ಎದುರಾಳಿಗಳ ಇಮ್ಮೆಟ್ಟಿಸುವ ಗೋಜಿಗೆ ಬಿದ್ದಿದ್ದಾರೆ.

ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಮೈತ್ರಿ ಪಡೆಗೇ ದೊಡ್ಡ ಪೀಕಲಾಟ ಶುರುವಾಗಿದೆ. ಯಾವ ಅಸ್ತ್ರ ಸಿಎಂ ವಿರುದ್ಧ ತಿರುಗಿಸಲಾಗಿತ್ತೋ ಅದೇ ಅಸ್ತ್ರ ಬೂಮ್ರಾಂಗ್‌ ಆಗಿ ಮೈತ್ರಿ ಪಡೆಗೇ ಚುಚ್ಚೋ ಸಾಧ್ಯತೆ ಕಂಡು ಬರ್ತಿದೆ.. ಇವತ್ತು ರಾಜ್ಯಪಾಲರ ನಡೆ ವಿರುದ್ಧ ಆಡಳಿತ ಪಕ್ಷ ಮತ್ತೊಂದು ನಿರ್ಣಯ ಕೈಗೊಳ್ಳಲು ಸಜ್ಜಾಗಿದೆ.

ರಾಜ್ಯಪಾಲರ ವಿರುದ್ಧ ಮತ್ತೆ ಖಂಡನಾ ನಿರ್ಣಯ!

ಟಿ.ಜೆ. ಅಬ್ರಹಾಂ ದೂರು ಕೊಟ್ಟ 24 ಗಂಟೆಯೊಳಗೆ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟಿಸ್ ನೀಡಿದ್ರು. ಇದಾದ ಬಳಿತ ಪ್ರಾಸಿಕ್ಯೂಷನ್‌ಗೂ ಅನುಮತಿ ನೀಡಿದ್ರು. ಆದ್ರೆ, ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಸೇರಿ ದೋಸ್ತಿ ಪಡೆಯ ಅದೆಷ್ಟೋ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿದ್ರೂ ಇನ್ನೂ ಅನುಮತಿ ನೀಡಿಲ್ಲ. ಇದು ರಾಜ್ಯಪಾಲರ ಮಾಡ್ತಿರೋ ರಾಜಕೀಯ ಅನ್ನೋದು ಕೈ ಪಡೆಯ ಸಿಟ್ಟು. ಇದೇ ವಿಚಾರಕ್ಕೆ ಇವತ್ತು ನಡೆಯೋ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಸುತ್ತಿನ ಸಮರ ಸಾರಲು ಸರ್ಕಾರ ಸಜ್ಜಾಗಿದೆ.

ಇದನ್ನೂ ಓದಿ: ‘ನನ್ನ ಬಂಧಿಸಲು 100 ಸಿದ್ದು ಬರಬೇಕು’- ಕುಮಾರಸ್ವಾಮಿ ಸವಾಲಿಗೆ ಸಿದ್ದರಾಮಯ್ಯ ತಿರುಗೇಟು; ಏನಂದ್ರು? VIDEO

‘ಕೈ’ ಮತ್ತೆ ಖಂಡನಾ ನಿರ್ಣಯ!

  • ಇವತ್ತು ನಡೆಯುವ ಸಂಪುಟ ಸಭೆಯಲ್ಲಿ ಮತ್ತೆ ಖಂಡನಾ ನಿರ್ಣಯ
  • ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲು ನಿರ್ಧಾರ
  • ಬಿಜೆಪಿ, ಜೆಡಿಎಸ್‌ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿಲ್ಲ
  • HDK, ನಿರಾಣಿ, ಜೊಲ್ಲೆ, ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಇಲ್ಲ
  • ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಮನವಿ
  • ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತದಿಂದ ಮನವಿ
  • 10 ತಿಂಗಳಾದರೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿಲ್ಲವೆಂದು ಕಿಡಿ
  • ರಾಜ್ಯಪಾಲರು ತಾರತಮ್ಯ ಮಾಡುತ್ತಿದ್ದಾರೆಂದು ಸಂಪುಟದಲ್ಲಿ ನಿರ್ಣಯ

ಇದನ್ನೂ ಓದಿ: ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ 

ಈಗಾಗಲೇ ಮುಡಾ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೀತಿದೆ. ಮತ್ತೊಂದೆಡೆ ಮುಡಾ ಅಸ್ತ್ರದ ಮೂಲಕ ಸರ್ಕಾರದ ಪಿಲ್ಲರ್​ ಅನ್ನೇ ಅಲುಗಾಡಿಸಲು ಹೋಗಿ ಮೈತ್ರಿ ಪಡೆಯೇ ಅಡಕತ್ತರಿಯಲ್ಲಿ ಸಿಲುಕಿದೆಿ. ಇತ್ತ ರಾಜ್ಯಪಾಲರ ನಡೆ ಸರ್ಕಾರವನ್ನ ಅಸ್ಥಿರಗೊಳಿಸುವ ಹುನ್ನಾರ ಅಂತ ಕೈಪಡೆ ಕೆಂಡಕಾರುತ್ತಿದೆ. ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಪ್ರಾಸಿಕ್ಯೂಷನ್ ಪ್ರಹಸನ ಮತ್ತೆಲ್ಲಿಗೆ ಹೋಗಿ ಮುಟ್ಟುತ್ತೋ ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರ​ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?

https://newsfirstlive.com/wp-content/uploads/2024/08/HDK-5.jpg

Load More