newsfirstkannada.com

‘ನನ್ನ ಬಂಧಿಸಲು 100 ಸಿದ್ದು ಬರಬೇಕು’- ಕುಮಾರಸ್ವಾಮಿ ಸವಾಲಿಗೆ ಸಿದ್ದರಾಮಯ್ಯ ತಿರುಗೇಟು; ಏನಂದ್ರು? VIDEO

Share :

Published August 21, 2024 at 6:31pm

    ಹೆಚ್‌.ಡಿ ಕುಮಾರಸ್ವಾಮಿ ಅವರಿಗೂ ಎದುರಾದ ಪ್ರಾಸಿಕ್ಯೂಷನ್ ಸಂಕಷ್ಟ!

    ’ನನ್ನ ಅರೆಸ್ಟ್ ಮಾಡಲು ಒಬ್ಬರಲ್ಲ 100 ಸಿದ್ದರಾಮಯ್ಯ ಅವರೇ ಬರಬೇಕು’

    ಹೆಚ್‌ಡಿಕೆ ಸವಾಲಿಗೆ ಸಿಎಂ ಸಿದ್ದರಾಮಯ್ಯ ಮಾತಿನಲ್ಲೇ ಖಡಕ್ ತಿರುಗೇಟು

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರ ಮಧ್ಯೆ ವಾಕ್ಸಮರ ಜೋರಾಗಿದೆ.

ಸಿಎಂ ಸಿದ್ದರಾಮಯ್ಯ ಅವರಂತೆ ಪ್ರಾಸಿಕ್ಯೂಷನ್ ಸಂಕಷ್ಟ ಹೆಚ್‌.ಡಿ ಕುಮಾರಸ್ವಾಮಿ ಅವರಿಗೂ ಎದುರಾಗಿದೆ. ಲೋಕಾಯುಕ್ತ ವಿಶೇಷ ತನಿಖಾ ತಂಡ ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ 2ನೇ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಚ್‌.ಡಿ ಕುಮಾರಸ್ವಾಮಿ ಅವರು ಇಂದು ದಿಢೀರ್ ಸುದ್ದಿಗೋಷ್ಟಿ ನಡೆಸಿದರು.

ಇದನ್ನೂ ಓದಿ: ಮುಡಾದಲ್ಲಿ ಮೂಡಿದ ವೈಟ್ನರ್ ಮೇಲೆ ಗುಮಾನಿ.. ಡಿಸಿ, ಮುಡಾ ಅಧ್ಯಕ್ಷರಿಗೆ ಸಿಎಂ ಪತ್ನಿ ಬರೆದ ಪತ್ರದಲ್ಲೇನಿದೆ?

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡಿದ ಕುಮಾರಸ್ವಾಮಿ ಅವರು ಸಖತ್ ಟಾಂಗ್ ಕೊಟ್ಟಿದ್ದರು. ನನ್ನನ್ನು ಅರೆಸ್ಟ್ ಮಾಡಲು ಒಬ್ಬರಲ್ಲ 100 ಸಿದ್ದರಾಮಯ್ಯ ಅವರೇ ಬರಬೇಕು. 100 ಸಿದ್ದರಾಮಯ್ಯ ಬಂದರೂ ನನ್ನ ಬಂಧಿಸಲು ಆಗಲ್ಲ ಅನ್ನೋ ಸವಾಲು ಹಾಕಿದ್ದರು. ಸಿದ್ದರಾಮಯ್ಯ ಅವರ ರೀತಿ ಸುಳ್ಳು ಹೇಳಿಕೊಂಡು ಭಂಡತನವನ್ನ ಕರ್ನಾಟಕ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ತಿರುಗೇಟು!
100 ಸಿದ್ದರಾಮಯ್ಯ ಬಂದ್ರು ಅರೆಸ್ಟ್ ಮಾಡೋಕೆ ಆಗಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಕೂಡ ಸಖತ್ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನ ಬಂಧಿಸೋಕೆ ನೂರು ಸಿದ್ದರಾಮಯ್ಯ ಅಲ್ಲ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಾಕು. ನಾನು ಬಂಧಿಸಲ್ಲ ಪೊಲೀಸರು ಬಂಧಿಸುತ್ತಾರೆ. ನಾನು ಅರೆಸ್ಟ್ ಮಾಡ್ತಿನಾ? ಪೊಲೀಸರೇ ಆ ಕೆಲಸ ಮಾಡ್ತಾರೆ‌ ಎಂದು ಸಿದ್ದರಾಮಯ್ಯ ಮಾತಿನ ಚಟಾಕಿ ಹಾರಿಸಿದರು.

ಇದನ್ನೂ ಓದಿ: ಸಿದ್ದು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ.. ರಾಜ್ಯಪಾಲರ ಭದ್ರತೆಯಲ್ಲಿ ಭಾರೀ ಬದಲಾವಣೆ; ಹೇಗಿದೆ ಗೊತ್ತಾ?

ಹೆಚ್‌.ಡಿ ಕುಮಾರಸ್ವಾಮಿ ಹೆದರಿಕೊಳ್ಳದೆ ಹೋಗಿದ್ದರೆ ಇವತ್ತು ದಿಢೀರ್ ಅಂತ ಪ್ರೆಸ್ ಮೀಟ್ ಮಾಡುತ್ತಿರಲಿಲ್ಲ. ಕುಮಾರಸ್ವಾಮಿ ಹಿಡ್ ಅಂಡ್ ರನ್‌ ಮಾಡ್ತಾರೆ. ದಾಖಲೆಗಳಿದ್ರೆ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಬಂಧಿಸಲು 100 ಸಿದ್ದು ಬರಬೇಕು’- ಕುಮಾರಸ್ವಾಮಿ ಸವಾಲಿಗೆ ಸಿದ್ದರಾಮಯ್ಯ ತಿರುಗೇಟು; ಏನಂದ್ರು? VIDEO

https://newsfirstlive.com/wp-content/uploads/2023/11/SIDDARAMAIAH_CM_HDK.jpg

Load More