newsfirstkannada.com

SSLC ಓದುತ್ತಿದ್ದ ಯುವಕನ ಬರ್ಬರ ಕೊಲೆ ಮಾಡಿದ ದುಷ್ಕರ್ಮಿಗಳು ಗ್ಯಾಂಗ್; ಕಾರಣವೇನು?

Share :

Published April 15, 2024 at 6:53pm

  ಯಾರೊಂದಿಗೂ ಕಿರಿಕ್ ಮಾಡಿಕೊಳ್ಳದ ಹುಡುಗ ಬೀದಿ ಹೆಣ ಆಗಿದ್ದೇಕೆ?

  ಯಾರ ತಂಟೆಗೂ ಹೋಗದ ಯುವಕನನ್ನು ಹತ್ಯೆ ಮಾಡಿದ ಗ್ಯಾಂಗ್​

  ಬಿಸಿಲನಾಡು ಕಲಬುರಗಿಯಲ್ಲಿ ಹದಿ ಹರೆಯದ ಯುವಕನ ಹತ್ಯೆ

ಕಲಬುರಗಿ: ಆತ ಮೆರವಣಿಗೆ ಅಂತ ಅಮ್ಮನಿಗೆ ಹೇಳಿ ಮನೆ ಬಿಟ್ಟಿದ್ದ. ಆದ್ರೆ ಅದೇ ಮೆರವಣಿಗೆಯಲ್ಲಿ ಅವನ ಹತ್ಯೆ ನಡೆದು ಹೋಗಿದೆ. ಆದ್ರೆ ಕೊಂದವರು ಯಾರು? ನಡು ಬೀದಿಯಲ್ಲಿ ದಾಳಿ ಮಾಡಿ ಯಾಕೆ ಕೊಂದರು? ಅನ್ನೋದೆ ನಿಗೂಢವಾಗಿದೆ. ಇವತ್ತಿನ ಯಂಗ್ ಜನರೇಷನ್​​ ಹುಡುಗರಿಗೆ ಹವಾ ಮಾಡ್ಬೇಕು. ಹೆಸರು ಮಾಡಬೇಕು ಅನ್ನೋ ಹುಚ್ಚು. ಈ ಹುಚ್ಚಿನಿಂದ ಅವರು ಎಂಥಾ ಕೆಲಸ ಮಾಡೋಕು ರೆಡಿ ಇರ್ತಾರೆ. ಇಂಥಾ ಹುಚ್ಚು ಹಚ್ಚಿಕೊಂಡವರು ಸಣ್ಣ ಸಣ್ಣ ಕಾರಣಕ್ಕೂ ದ್ವೇಷ ಹಗೆ ಸಾಧಿಸಿಕೊಂಡು ಮಾಡಬಾರದ ಕೆಲಸ ಮಾಡ್ತಾರೆ. ಇಂಥಾದ್ದೆ ಕ್ಷುಲ್ಲಕ ಕಾರಣಕ್ಕೆ ಬಿಸಿಲನಾಡು ಕಲಬುರಗಿಯಲ್ಲಿ ಹದಿ ಹರೆಯದ ಯುವಕನ ಜೀವ ಹೋಗಿದೆ.

ಏಪ್ರಿಲ್ 14 ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ. ಹೀಗಾಗಿ ಕಲಬುರಗಿಯಲ್ಲಿ ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿಯನ್ನ ಆಚರಿಸಲಾಗಿತ್ತು. ನಗರದ ತುಂಬಾ ಮೆರವಣಿಗೆ ಸಾಗ್ತಿತ್ತು. ಆದ್ರೆ ಇದೇ ಮೆರವಣಿಗೆಯಲ್ಲಿ ಯುವಕನೊಬ್ಬನ ರಕ್ತ ಹರಿದಿದೆ. ಯುವಕರ ಗುಂಪೊಂದು ಜಸ್ಟ್​ 20 ವರ್ಷದ ಯುವಕನನ್ನ ಕೊಚ್ಚಿ ಕೊಚ್ಚಿ ಹತ್ಯೆ ಮಾಡಿದೆ. ಸದ್ಯ ಈ ಹತ್ಯೆ ಕಂಡು ಕಲಬುರಗಿ ಮಂದಿ ಬೆಚ್ಚಿ ಬಿದ್ದಿದ್ದಾರೆ. ಅಂಬೇಡ್ಕರ್ ಜಯಂತಿ ಸಲುವಾಗಿ ಕಲಬುರಗಿ ನಗರದಲ್ಲೂ ಸಂಭ್ರಮ ಮನೆ ಮಾಡಿತ್ತು. ಗಲ್ಲಿ ಗಲ್ಲಿಗಳಲ್ಲೂ ಮೆರವಣಿಗೆ, ಪೂಜೆ ನಡೀತಾ ಇದ್ವು. ಅದ್ರಂತೆ ಕಲಬುರಗಿಯ ಅಶೋಕ್ ನಗರ ಬಡಾವಣೆಯ ಯುವಕರ ಗುಂಪು ಕೂಡ ಮೆರವಣಿಗೆ ಹಮ್ಮಿಕೊಂಡಿತ್ತು. ಇದೇ ಮೆರವಣಿಗೆಯಲ್ಲಿ ಆಕಾಶ್​​ ಅನ್ನೋ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಡು ಬೀದಿಯಲ್ಲೇ ಕೊಚ್ಚಿ ಹಾಕಿ ಆಕಾಶ್ ಜೀವ ತೆಗೆಯಲಾಗಿದೆ.

ಇದನ್ನೂ ಓದಿ: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ಇಶಿತಾ ವರ್ಷ; ಯಾವ ಸೀರಿಯಲ್​ ಗೊತ್ತಾ?

ಅಶೋಕ್ ನಗರದಿಂದ ಜೇವರ್ಗಿ ಕ್ರಾಸ್​​​ನ ರಾಷ್ಟ್ರಪತಿ ಚೌಕ್​ ಬಳಿ ಮೆರವಣಿಗೆ ಬಂದಾಗ ನಾಲ್ಕು ಜನ ಯುವಕರ ಗುಂಪೊಂದು ಬೈಕ್​ನಲ್ಲಿ ನುಗ್ಗಿ ಬಂದಿದೆ. ಏಕಾಏಕಿ ದಾಳಿ ಮಾಡಿದ ಯುವಕರ ಗುಂಪು ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡ್ತಿದ್ದ ಆಕಾಶ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ನೂರಾರು ಜನರ ಮಧ್ಯೆಯೇ ಮನ ಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ. ಆಕಾಶ್ ಡ್ಯಾನ್ಸ್​ನಲ್ಲಿ ಮಗ್ನನಾಗಿದ್ದ ಈ ವೇಳೆ ಹಿಂದಿನಿಂದ ಬಂದಿದ್ದ ಕಿರಾತಕರು ಚಾಕು ಇರಿದು ಪರಾರಿಯಾಗಿಬಿಟ್ಟಿದ್ದಾರೆ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕಾಶ್​ನನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆಕಾಶ್​ ಆಸ್ಪತ್ರೆಯಲ್ಲಿ ಪ್ರಾಣ ಚೆಲ್ಲಿದ್ದಾನೆ. ಘಟನೆಯಲ್ಲಿ ಇನ್ನೊಬ್ಬ ಯುವಕ ಕೂಡ ಗಾಯಗೊಂಡಿದ್ದು, ಆ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಅಸಲಿಗೆ ಈ ಆಕಾಶ್​ ಎರಡು ವರ್ಷದ ಹಿಂದೆ ಎಸ್​ಎಸ್​ಎಲ್​ಸಿ ಪಾಸಾಗಿದ್ದ. ಆದ್ರೆ, ಕಾಲೇಜು ಮೆಟ್ಟಿಲು ಹತ್ತದೇ ಸ್ನೇಹಿತರ ಜೊತೆ ಟೈಂಪಾಸ್ ಮಾಡ್ಕೊಂಡಿದ್ದ. ಪಾಪ ಈ ಆಕಾಶ್ ತಂದೆ ಆಟೋ ಓಡಿಸಿ ಹೇಗೋ ಜೀವನ ಸಾಗಿಸ್ತಿದ್ರು. ಹೇಗಾದ್ರು ಮಾಡಿ ಈ ಬಾರಿ ಕಾಲೇಜು ಅಡ್ಮಿಷನ್ ಮಾಡಿಸಬೇಕು ಅಂತ ಅಂದುಕೊಂಡಿದ್ರು. ಆದ್ರೆ ಆಕಾಶ್ ತಂದೆಯ ಕನಸಿಗೆ ಕಿರಾತಕರು ಕೊಳ್ಳಿ ಇಟ್ಟಿದ್ದು, ರೋಡ್​ನಲ್ಲೇ ಆಕಾಶ್​ ಜೀವ ಬಲಿ ಪಡೆದಿದ್ದಾರೆ. ಆಕಾಶ್​ ಯಾರ ಜೊತೆಯೂ ಜಗಳ ಆಡಿದವನಲ್ಲ. ಬಡಾವಣೆಯಲ್ಲೂ ಆಕಾಶ್​ಗೆ ಒಳ್ಳೆ ಹೆಸರಿದೆ. ಹೀಗಿರುವಾಗ ನನ್ನ ಮಗನನ್ನ ಯಾರ ಕೊಂದ್ರು ಯಾಕೆ ಕೊಂದ್ರು ಅನ್ನೋದೆ ನಮಗೆ ದಿಗಿಲು ಬಡಿಸಿದೆ ಅಂತ ಆಕಾಶ್​ ತಂದೆ ಭಾವುಕರಾಗಿದ್ರು, ಇನ್ನು, ಮಗ ಕೊಲೆಯಾಗಿದ್ದನ್ನ ಕಂಡು ಆಕಾಶ್ ತಾಯಿ ಅಕ್ಷರಶಃ ಕಂಗಲಾಗಿದ್ದಾರೆ. ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ನಮ್ಮ ಮಗ ನಮ್ಮನ್ನ ಬಿಟ್ಟು ಹೋಗಿದ್ದ. ನನ್ನ ಮಗನನ್ನ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಅಂತ ಕಣ್ಣೀರು ಹಾಕಿದ್ದಾರೆ.

ಇಲ್ಲಿ ಒಂದು ವಿಚಾರ ಹೇಳಲೇಬೇಕು. ಆಕಾಶ್​​ ಇನ್ನೂ ಚಿಕ್ಕ ಹುಡುಗ. ಮನೆಯವರು ಹೇಳೋ ಪ್ರಕಾರ ಯಾರೊಂದಿಗೂ ಗಲಾಟೆ ಮಾಡಿಕೊಂಡವನಲ್ಲ. ಆದ್ರೂ ನೂರಾರು ಜನರ ಮಧ್ಯೆ ಆಕಾಶ್ ಹತ್ಯೆ ಮಾಡಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಹಂತಕರನ್ನ ಕೂಡಲೇ ಪತ್ತೆ ಹಚ್ಚಿ ಅರೆಸ್ಟ್ ಮಾಡ್ಬೇಕು ಅಂತ ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಡು ಬೀದಿಯಲ್ಲೇ ಇನ್ನೂ ಬಾಳಿ ಬದುಕಬೇಕಿದ್ದ ಹುಡುಗನನ್ನ ಕೊಚ್ಚಿ ಹಾಕಲಾಗಿದೆ. ಆದ್ರೆ ಈ ಕೊಲೆಗೆ ಕಾರಣ ಏನು ಅನ್ನೋದೇ ಈಗ ನಿಗೂಢವಾಗಿದೆ. ಯಾರೊಂದಿಗೂ ಕಿರಿಕ್ ಮಾಡದ ಹುಡುಗನನ್ನ ಬೀದಿ ಹೆಣ ಮಾಡಿದ್ದೇಕೆ ಅನ್ನೋದು ಪೊಲೀಸರ ತನಿಖೆ ಬಳಿಕವಷ್ಟೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC ಓದುತ್ತಿದ್ದ ಯುವಕನ ಬರ್ಬರ ಕೊಲೆ ಮಾಡಿದ ದುಷ್ಕರ್ಮಿಗಳು ಗ್ಯಾಂಗ್; ಕಾರಣವೇನು?

https://newsfirstlive.com/wp-content/uploads/2024/04/death8.jpg

Load More