ಸೈಬರ್ ಸೆಕ್ಯೂರಿಟಿ ಕುರಿತು ಏನೆಲ್ಲಾ ಚರ್ಚೆ ಮಾಡಲಾಯಿತು?
ಸೈಬರ್ ಭದ್ರತೆಯಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಬೇಕಾಗಿದೆ
ಸೈಬರ್ ಕ್ರೈಮ್ ಅನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು
ಸಿಲಿಕಾನ್ ಸಿಟಿಯಲ್ಲಿ ವರ್ಲ್ಡ್ ವೈಡ್ ವುಮೆನ್ ಇನ್ ಸೈಬರ್ ಸೆಕ್ಯುರಿಟಿ (w3-cs) ಸಹಯೋಗದೊಂದಿಗೆ ದೇಶದ ಪ್ರತಿಷ್ಠಿತ ಸಂಸ್ಥೆ BSides ಬೆಂಗಳೂರು ವಾರ್ಷಿಕ ಸಮ್ಮೇಳನ 2ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ 1,100ಕ್ಕೂ ಹೆಚ್ಚು ಜನ ಭಾಗವಹಿಸಿ ಯಶಸ್ವಿಗೊಳಿಸಿದರು. ಸೈಬರ್ ಸೆಕ್ಯೂರಿಟಿಗೆ ಸಂಬಂಧಪಟ್ಟಂತ ಹಲವು ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜ್ಞಾನಿ ಜಿ ಆ್ಯಂಡ್ ಗ್ರೂಪ್ ಕೋ-ಆರ್ಡಿನೇಟರ್ (R&D in Cyber Security and UIDAI) ತುಳಿಕಾ ಪಾಂಡೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್ ಮತ್ತು IT (MeitY) ಕ್ಷೇತ್ರಗಳಲ್ಲಿ ಸೈಬರ್ ಭದ್ರತೆಯ ನಾವೀನ್ಯತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಪಡಿಸಲು ಹಲವು ಸರ್ಕಾರಿ ಉಪಕ್ರಮಗಳ ಇವೆ ಎಂದು ಮಾಹಿತಿ ನೀಡಿದರು. ಹಣಕಾಸಿನ ಬೆಂಬಲ, ಮಾರ್ಗದರ್ಶನದ ಬಗ್ಗೆಯೂ ಮಾಹಿತಿ ನೀಡಿದರು.
ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್?
BSides ಬೆಂಗಳೂರು ಮತ್ತು W3-CS ಸಂಸ್ಥಾಪಕ ಸುಜಾತಾ ಯಕಸಿರಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಸೈಬರ್ ಸುರಕ್ಷತೆಯಲ್ಲಿ ಸಮುದಾಯದ ಎಲ್ಲರೂ ತೊಡಗಿಕೊಳ್ಳುವ ಬಗ್ಗೆ ಒತ್ತಿ ಹೇಳಿದರು. ವಿಶೇಷವಾಗಿ ಸೈಬರ್ ಭದ್ರತೆಯಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಿ ನಾಯಕತ್ವದ ಪಾತ್ರಗಳನ್ನು ತೆಗೆದುಕೊಳ್ಳುವ ಕುರಿತು ಮಾತನಾಡಿದರು. BSides ಬೆಂಗಳೂರಿನ ಸಹ-ಸಂಸ್ಥಾಪಕ ಅಶೋಕ್ ರತ್ನಗಿರಿ ಅವರು ಸೈಬರ್ ಸುರಕ್ಷೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
CxO ರೌಂಡ್‌ಟೇಬಲ್, IPS, ಡಾ. ಸುಬ್ರಹ್ಮಣ್ಯೇಶ್ವರ ರಾವ್, ಸೈಬರ್ ಅಪರಾಧಗಳು ಮತ್ತು ಹಣಕಾಸಿನ ವಂಚನೆಗಳ ಬಗ್ಗೆ ನಾವು ತುಂಬಾ ಜಾಗೃತವಾಗಿರಬೇಕು. ಕಾಣದ ವೈರಿಗಳ ವಿರುದ್ಧ ಪ್ರತಿಯೊಬ್ಬರು ಹೋರಾಡಬೇಕು. ಇಂತಹ ಕೃತ್ಯದಿಂದ ರಕ್ಷಣೆ ಆಗಬೇಕು ಎಂದು ಹೇಳಿದರು. ಮಧ್ಯಸ್ಥಗಾರರ ಸಹಯೋಗ ಮತ್ತು ಡಿಜಿಟಲ್ ಥ್ರೆಟ್ಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವು ಎಐ, ರಾನ್ಸರ್ ವೇರ್, ಡೇಟಾ ರಕ್ಷಣೆ ಮತ್ತು ಗೌಪ್ಯತೆ, ZeroTrust, ಕ್ಲೌಡ್ ಭದ್ರತೆ ಮತ್ತು ಅನೇಕ ಟ್ರೆಂಡಿಂಗ್ ಟೆಕ್ ವಿಷಯಗಳ ಸುತ್ತಲಿನ ಇತ್ತೀಚಿನ ತಂತ್ರಜ್ಞಾನ ಟ್ರ್ಯಾಕ್‌ಗಳನ್ನು ಒಳಗೊಂಡಿತ್ತು. ಇದು ಲೀಡರ್ಸ್ ಸ್ಪೀಕ್ ಸರಣಿ, ಪ್ಯಾನೆಲ್ ಚರ್ಚೆ ಸೇರಿ ಪ್ರಮುಖ ಟಿಪ್ಪಣಿ ಒಳಗೊಂಡಿತ್ತು. ಸಂವಾದಾತ್ಮಕ ಕಾರ್ಯಾಗಾರಗಳು ವೆಬ್3.0, ಮೊಬೈಲ್ ಭದ್ರತೆ, ಲೈವ್ ಕಾರ್ ಹ್ಯಾಕಿಂಗ್ ಮತ್ತು ಲಾಕ್ ಪಿಕಿಂಗ್ ಸೇರಿ ಬೇರೆ ಬೇರೆ ವಿಷಯಗಳನ್ನು ಒಳಗೊಂಡಿತ್ತು. ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ವಿಶೇಷ ಟ್ರ್ಯಾಕ್ (w3-cs ಕನೆಕ್ಟ್1.0) ಲಾಂಚ್ ಮತ್ತು ಎಮರ್ಜ್ ಎಕ್ಸ್ ಸ್ಟಾರ್ಟ್ ಅಪ್ ಶೋಕೇಸ್ ಎನ್ನುವುದು ಕಾರ್ಯಕ್ರಮದ ಹೈಲೈಟ್ ಆಗಿತ್ತು. ಅಲ್ಲದೇ ಇದು ತನ್ನ ಸಾಂಪ್ರದಾಯಿಕ ಸೈಬರ್ ಸೆಕ್ಯುರಿಟಿ ಎಕ್ಸಲೆನ್ಸ್ ಅವಾರ್ಡ್ಸ್ 2024 ಅನ್ನು ಕೂಡ ಆಯೋಜನೆ ಮಾಡಿತ್ತು.
ಇದನ್ನೂ ಓದಿ: ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು?
BSides ಬೆಂಗಳೂರು ಸಮ್ಮೇಳನ ಸೈಬರ್ ಕಿರಾತಕರ ವಿರುದ್ಧ ತಮ್ಮದೇ ಶೈಲಿಯಲ್ಲಿ ಯುದ್ಧ ಸಾರುತ್ತಲೇ ಬಂದಿದ್ದ ಹಲವು ಸೈಬರ್ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಉತ್ತಮ ಮಾಹಿತಿ ನೀಡಿ ಎಚ್ಚರಿಸಿದರು. ಸೈಬರ್ ಕ್ರೈಂ ಹೆಚ್ಚುತ್ತಿರುವ ಸಮಯದಲ್ಲಿ ಇಂತಹ ಸೈಬರ್ ಕಾನ್‌ಕ್ಲೇವ್ ಕಾರ್ಯಕ್ರಮ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದು, ಪ್ರಶಂಸನೀಯವಾಗಿದೆ. ಡಿಜಿಟಲ್ ಚಾಲೆಂಜ್ಗಳ ವಿರುದ್ಧ ರಕ್ಷಣೆ ಪ್ರಮುಖವಾಗಿದೆ. ಸೈಬರ್ ಥ್ರೆಟ್ ಹೆಚ್ಚಾಗುತ್ತಿದ್ದು, ಅವುಗಳನ್ನ ತಡೆಯಲು ಅಗತ್ಯವಿರುವ ಜ್ಞಾನ ಹಾಗೂ ವೃತ್ತಿಪರರನ್ನು ರೆಡಿಮಾಡುವಲ್ಲಿ ಬಿಸೈಡ್ಸ್ ಕಾರ್ಯಕ್ರಮ ನಿರ್ಣಾಯಕ ಪಾತ್ರ ವಹಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ