newsfirstkannada.com

ಆರ್​ಸಿಬಿಗೆ ತನ್ನದೇ ಆಟಗಾರ ವಿಲನ್.. ಕಪ್ ಗೆಲುವಿನ ಕನಸಿಗೆ ಮುಳುವಾದ RCB ಹೀರೋ..!

Share :

Published May 4, 2024 at 11:10am

  ‘ಪವರ್ ಲೆಸ್’ ಬೌಲಿಂಗ್​​ಗೆ ದಿಕ್ಕೆಟ್ಟ ಆರ್​ಸಿಬಿ..!

  ನ್ಯೂ ಬಾಲ್​ನಲ್ಲೂ ಮಿಯಾ ಮ್ಯಾಜಿಕ್ ಮಾಯ..!

  9 ಮ್ಯಾಚ್.. 6 ವಿಕೆಟ್.. ಪವರ್ ಲೆಸ್ ಬೌಲಿಂಗ್..!

ಈ ಸೀಸನ್​​ನಲ್ಲಿ ಆರ್​ಸಿಬಿಯ ದುಸ್ಥಿತಿಗೆ ನಿಜವಾದ ಕಾರಣ ಏನಪ್ಪಾ ಅಂದ್ರೆ, ಅದು ಬೌಲಿಂಗ್ ಡಿಪಾರ್ಟ್​ಮೆಂಟ್​. ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಭಾಂದವ ಮೊಹಮ್ಮದ್​ ಸಿರಾಜ್​ ಈಗ ವಿಲನ್​ ಆಗಿದ್ದಾರೆ. ಮೊಹಮ್ಮದ್​ ಸಿರಾಜ್​ ನಿರೀಕ್ಷೆಗೆ ತಕ್ಕಂತ ಆಟವಾಡಿದ್ರೆ ತಂಡ ಸೋಲಿನ ಸುಳಿಯಲ್ಲೇ ಇರುತ್ತಿರಲ್ಲ.

ಮೊಹಮ್ಮದ್ ಸಿರಾಜ್.. ರಾಯಲ್ ಚಾಲೆಂಜರ್ಸ್​ ಬೆಂಗಳೂರಿನ ಗೇಮ್​ ಚೇಂಜರ್​​.​​. 140+ ಅಸುಪಾಸಿನಲ್ಲಿ ಬೌಲಿಂಗ್ ಮಾಡೋ ಈತನ ಅಗ್ರೆಸ್ಸಿವ್ ಆಟ ನಿಜಕ್ಕೂ ಅದ್ಭುತ. ಈತನೇ ಆರ್​ಸಿಬಿಯ ರಿಯಲ್​ ಮ್ಯಾಚ್​ ವಿನ್ನರ್ ಅನಿಸಿಕೊಂಡಿದ್ರು. ಆದ್ರೀಗ ಇದೇ ಮ್ಯಾಚ್ ವಿನ್ನರ್ ಸಿರಾಜ್, ಆರ್​ಸಿಬಿ ಪಾಲಿಗೆ ವಿಲನ್ ಆಗಿದ್ದಾರೆ.

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ದೋಸ್ತಿ ನಾಯಕ ಶಿವರಾಮೇಗೌಡ ವಾಗ್ದಾಳಿ

ಆರ್​ಸಿಬಿ ಪಾಲಿಗೆ ಆಪದ್ಬಾಂಧವನೇ ಆಪತ್ತು
ಮೊಹಮ್ಮದ್ ಸಿರಾಜ್​.. ಆರ್​ಸಿಬಿಯ ಆಪದ್ಬಾಂಧವ… ಸಂಕಷ್ಟದಲ್ಲಿದ್ದಾಗಲೆಲ್ಲಾ ತಂಡದ ಕೈ ಹಿಡಿದಿದ್ದ ಅಟ್ಯಾಕರ್.. ಸಿಡಿಗುಂಡಿನಂತೆ ಎದುರಾಳಿಯ ಮೇಲೆ ಎರಗುತ್ತಿದ್ದ ಸಿರಾಜ್, ಆರ್​ಸಿಬಿ ಬೌಲಿಂಗ್ ಅಟ್ಯಾಕ್​ನ ಮೇನ್ ಪಿಲ್ಲರ್ ಆಗಿದ್ರು. ಆದ್ರೀಗ ಇದೇಲ್ಲವೂ ಸುಳ್ಳಾಗಿದೆ. ಇದಕ್ಕೆ ಕಾರಣ ಪ್ರಸಕ್ತ ಸೀಸನ್​​ನಲ್ಲಿ ನೀಡ್ತಿರುವ ಪರ್ಫಾಮೆನ್ಸ್​.

‘ಪವರ್ ಲೆಸ್’ ಬೌಲಿಂಗ್​​ಗೆ ದಿಕ್ಕೆಟ್ಟ ಆರ್​ಸಿಬಿ
ಪ್ರಸಕ್ತ ಆವೃತ್ತಿಯಲ್ಲಿ ಸಿರಾಜ್​​ರ ಪವರ್ ಲೆಸ್ ಬೌಲಿಂಗ್, ನಿಜಕ್ಕೂ ತಂಡಕ್ಕೆ ಮಾರಕವಾಗಿದೆ. ಪವರ್ ಪ್ಲೇ, ಡೆತ್​ ಓವರ್​ಗಳಲ್ಲಿ ದಾರಾಳವಾಗಿ ರನ್ ನೀಡಿದ್ದಾರೆ. ವಿಕೆಟ್ ಬೇಟೆಯಾಡಲು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ.., ಎದುರಾಳಿಗಳ ಪಾಲಿನ್ ರನ್ ಮಷಿನ್ ಆಗಿದ್ದಾರೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್.. ಈ ಅಂಕಿಅಂಶಗಳು..

ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ

ಪ್ರಸಕ್ತ ಆವೃತ್ತಿಯಲ್ಲಿ ಸಿರಾಜ್
ಪ್ರಸಕ್ತ ಆವೃತ್ತಿಯಲ್ಲಿ 9 ಪಂದ್ಯಗಳಿಂದ ಸಿರಾಜ್ 6 ವಿಕೆಟ್ ಉರುಳಿಸಿದ್ದಾರೆ. 26 ರನ್ ನೀಡಿ 2 ವಿಕೆಟ್ ಉರುಳಿಸಿರುವುದು ಬೆಸ್ಟ್ ಪರ್ಫಾಮೆನ್ಸ್​ ಆಗಿದೆ. 9.50ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಹಿಂದೆ ನ್ಯೂ ಬಾಲ್​ನಲ್ಲಿ ವಿಕೆಟ್ ಬೇಟೆಯಾಡುತ್ತಿದ್ದ ಸಿರಾಜ್, ಈ ಸಲ ಪವರ್ ಪ್ಲೇನಲ್ಲಿ ಜಸ್ಟ್​ ಎರಡೇ ಎರಡು ವಿಕೆಟ್ ಉರುಳಿಸಿದ್ದಾರೆ. ಒಟ್ಟಾರೆಯಾಗಿಯೂ, ಕಳೆದ ಆವೃತ್ತಿಗೆ ಹೋಲಿಸಿದ್ರೆ, ಸಿರಾಜ್​ ಫುಲ್​ ಡಮ್ಮಿಯಾಗಿದ್ದಾರೆ.

ಇದನ್ನೂ ಓದಿ:ಹವಾಮಾನ ಇಲಾಖೆಯಿಂದ RCB ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್​.. ಆತಂಕ ಶುರು

ಕಳೆದ ಸೀಸನ್​​ನಲ್ಲಿ ಸಿರಾಜ್
ಕಳೆದ ಸೀಸನ್​ನಲ್ಲಿ ಸಿರಾಜ್​​ 14 ಪಂದ್ಯಗಳಿಂದ 19 ವಿಕೆಟ್ ಉರುಳಿಸಿದ್ರು. 21 ರನ್ ನೀಡಿ 4 ವಿಕೆಟ್ ಪಡೆದಿದ್ದು ಬೆಸ್ಟ್ ಪರ್ಫಾಮೆನ್ಸ್​ ಆಗಿತ್ತು. 7.52ರ ಎಕಾನಮಿಯಲ್ಲಿ ರನ್ ನೀಡಿದ್ರು. ಪ್ರಸಕ್ತ ಆವೃತ್ತಿಯಲ್ಲಿ ಭಾರೀ ವೈಫಲ್ಯ ಅನುಭವಿಸಿರುವ ಸಿರಾಜ್, ಒಂದ್ಕಡೆ ಆರ್​ಸಿಬಿಯ ಸತತ ಸೋಲಿಗೆ ಕಾರಣವಾಗ್ತಿದ್ದಾರೆ. ಇದೇ ದುಬಾರಿ ಸ್ಪೆಲ್, ಟೀಮ್ ಇಂಡಿಯಾ ಅಭಿಮಾನಿಗಳ ಟೆನ್ಶನ್​ಗೆ ಕಾರಣವಾಗಿದೆ. ಮುಂದಿನ ಟಿ20 ವಿಶ್ವಕಪ್​​​​​​​​ನಲ್ಲಿ ಹೀಗೆ ಆಡಿದ್ರೆ ಹೇಗೆ ಎಂಬ ಪ್ರಶ್ನೆ ಹುಟ್ಟಿದೆ. ಐಪಿಎಲ್​ನಲ್ಲಿ ಆರ್​ಸಿಬಿಗೆ ವಿಲನ್ ಆಗಿರೋ ಸಿರಾಜ್, ಟಿ20 ವಿಶ್ವಕಪ್​ನಲ್ಲಾದರೂ ಟೀಮ್​ ಇಂಡಿಯಾ ಹೀರೋ ಆಗಿ ಮೆರೆದಾಡುತ್ತಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ:ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿಗೆ ತನ್ನದೇ ಆಟಗಾರ ವಿಲನ್.. ಕಪ್ ಗೆಲುವಿನ ಕನಸಿಗೆ ಮುಳುವಾದ RCB ಹೀರೋ..!

https://newsfirstlive.com/wp-content/uploads/2024/05/SIRAJ-1.jpg

Load More