newsfirstkannada.com

ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?

Share :

Published May 4, 2024 at 7:28am

    ಮಳೆಗೆ ತಂಪಾಯ್ತು ಇಳೆ.. ಸಾಂಸ್ಕೃತಿಕ ರಾಜಧಾನಿಗೆ ಹೊಸ ಕಳೆ

    ಸಕ್ಕರೆ ನಾಡಿಗೂ ಮೊದಲ ಮಳೆಯ ಸಿಂಚನ, ಕೆಲವು ಕಡೆ ಅನಾಹುತ

    ಆಲಿಕಲ್ಲು ಮಳೆಗೆ ಚಾಮರಾಜನಗರ ಅನ್ನದಾತರು ಕಂಗಾಲು

ಮಳೆ ಬಂತು ಮಳೆ ಅಂತ ನಿನ್ನೆ ಮೊದಲ ವರ್ಷಧಾರೆಯಲ್ಲಿ ಮಿಂದೆದ್ದ ಕರುನಾಡು ಬೇಸಿಗೆಯ ಬಿರು ಬಿಸಿಲಿಗೆ ಬಾಯ್ ಹೇಳಿತ್ತು. ಮೈಸೂರು, ಮಂಡ್ಯ, ಬೆಂಗಳೂರು ಸೇರಿ ಹಲವೆಡೆ ಸುರಿದ ಧಾರಕಾರ ಮಳೆ ಇಳೆಗೆ ಹೊಸ ಕಳೆಯನ್ನ ತುಂಬಿತ್ತು.. ಅಲ್ಲದೇ ಕೆಲ ಅವಾಂತರಗಳನ್ನೂ ಸೃಷ್ಟಿಮಾಡಿತ್ತು.

ಬಿರು ಬೇಸಿಗೆಯಿಂದ ಬೆಂದಿದ್ದ ಕರುನಾಡಿಗೆ ನಿನ್ನೆ ಮಳೆರಾಯನ ಆಗಮನ ಹೊಸ ಹುರುಪು ತಂದಿದೆ.. ಮಳೆ ಬಂತು ಮಳೆ ನಿನ್ನೆ ಇಳೆ ತಂಪು ತಂಪು ಕೂಲ್​ ಕೂಲ್ ಆಗಿದೆ.. ಬೇಸಿಗೆಯ ಸೆಕೆಗೆ ಬೆಂದು ಹೋಗಿದ್ದ ಜನರು ಮಳೆಯ ಹನಿಗಳ ಸ್ಪರ್ಶಗಳಿಂದ ಫುಲ್​ ಖುಷ್ ಆಗಿದ್ದಾರೆ. ಒಂದ್ಕಡೆ ಮಳೆರಾಯನ ಮೊದಲ ಆಗಮನ ಆನಂದಕ್ಕೆ ಕಾರಣವಾದ್ರೆ ಮತ್ತೊಂದುಕಡೆ ಅವಾಂತರಕ್ಕೂ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ:ಮಳೆರಾಯ ಮಾಡಿದ ಅನಾಹುತ.. ಚಲಿಸುತ್ತಿದ್ದ ಬಸ್​​ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬಗಳು

ಮೈಸೂರು
ಅರಮನೆ ನಗರಿ ಮೈಸೂರಿನಲ್ಲಿ ವರುಣನ ಆಗಮನ ಸಕಲ ಜೀವರಾಶಿಗಳಿಗೆ ಮರು ಜನ್ಮ ಬಂದಂತಾಗಿತ್ತು.. ವರುಣನ ಸಿಂಚನದಿಂದ ಮೈಸೂರಲ್ಲಿ ಹೊಸ ಹುರುಪು ಕಳೆಗಟ್ಟಿತ್ತು.. ಧೋ ಅಂತ ಗಂಟೆಗೂ ಹೆಚ್ಚುಕಾಲ ಸುರಿದ ವರ್ಷಧಾರೆ ಇಳೆಗೆ ಹೊಸ ಕಳೆ ನೀಡಿತ್ತು. ವರ್ಷದ ಮೊದಲ ಮಳೆ ಸಂತೋಷದ ಹೊನಲನ್ನ ಸುರಿಸೋ ಜೊತೆಗೆ ಕೆಲವೆಡೆ ಸಂಕಷ್ಟವನ್ನು ಸೃಷ್ಟಿಮಾಡಿತ್ತು.. ನರಸೀಪುರದಲ್ಲಿ ಭಾರೀ ಗಾಳಿಮಳೆಗೆ ಮರಗಳು ಧರೆಗುರುಳಿದ್ವು, ವಾಹನಗಳ ಮೇಲೆಯೇ ಮರವೊಂದು ಉರುಳಿಬಿದ್ದ ಜನರನ್ನ ಆತಂಕಕ್ಕೆ ತಳ್ಳಿತು.

ಕಾಲೇಜು ಬಸ್​ ಮೇಲೆ ಬಿದ್ದ ವಿದ್ಯುತ್ ಕಂಬ.. ತಪ್ಪಿದ ದುರಂತ
ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಕಾಲೇಜು ಬಸ್​ವೊಂದು ರಸ್ತೆಯಲ್ಲಿ ಬರುವಾಗ್ಲೆ ವಿದ್ಯುತ್ ಕಂಬ ಬಸ್​ನ ಮೇಲೆ ಬಿದ್ದಿತ್ತು.. ಅದೃಷ್ಟವಶಾತ್ ಬಸ್​ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ರು.

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?

ಮಂಡ್ಯ
ಸಕ್ಕರೆ ನಾಡು ಮಂಡ್ಯಕ್ಕೂ ನಿನ್ನೆ ಮೊದಲ ಮಳೆಯ ಸಿಂಚನವಾಗಿತ್ತು.. ಮಳೆ ಜೊತೆ ಬಿರುಗಾಳಿ ಕೈಜೋಡಿಸಿ ಅವಾಂತರಗಳೂ ಸೃಷ್ಟಿಯಾಗಿತ್ತು.. ಮಂಡ್ಯದ ಬೀಡಿ ಕಾಲೋನಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಕೆಲ ಮನೆಗಳು‌ ಜಖಂಗೊಂಡ್ವು.

ಚಿಕ್ಕಬಳ್ಳಾಪುರ
ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಗೆ ಅನ್ನದಾತರ ಆತಂಕಕ್ಕೆ ಕಾರಣವಾಯ್ತು.. ಚಿಂತಾಮಣಿಯಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆ ನಾಶವಾಯ್ತು..

ಇದನ್ನೂ ಓದಿ:ಆರ್​ಸಿಬಿಗೆ ಇವತ್ತು ಬಿಗ್​ ಡೇ.. ಪ್ಲೇಯಿಂಗ್-11ನಲ್ಲಿ ಆಗುತ್ತಾ ಭಾರೀ ಬದಲಾವಣೆ..?

ಬೆಂಗಳೂರು
ಬೆಂದಕಾಳೂರಿಗೆ ನಿನ್ನೆ ಎಂಟ್ರಿಕೊಟ್ಟ ಮಳೆರಾಯ ಹಲವೆಡೆ ಅಬ್ಬರಿಸಿ ಬೊಬ್ಬಿರಿದಿದ್ದ.. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ಸಿಡಿಲು ಬಡಿದು ರತ್ಮಮ್ಮ ಎಂಬ ಮಹಿಳೆ ಜೊತೆ ಇಪ್ಪತ್ತಕ್ಕೂ ಹೆಚ್ಚು ಮೇಕೆಗಳೂ ಸಾವನ್ನಪ್ಪಿದ್ವು.
ಒಟ್ನಲ್ಲಿ ವರ್ಷಧಾರೆ ಕರುನಾಡನ್ನ ಕೂಲ್ ಕೂಲ್ ಮಾಡುವ ಜೊತೆಗೆ ಬೇಸಿಗೆಯಿಂದ ಬಸವಳಿದಿದ್ದ ಜನತೆಗೆ ತಣ್ಣನೆಯ ಮುದ ನೀಡಿತ್ತು.. ಇಷ್ಟು ದಿನ ಮಳೆಗಾಗಿ ಕಾದುಕುಳಿತಿದ್ದ ಜನ ಮುಖದಲ್ಲಿ ಮಂದಹಾಸ ಮೂಡಿಸಿದ ವರುಣನಿಗೆ ಜನತೆ ಹೃದಯ ತುಂಬಿ ಥ್ಯಾಂಕ್ಸ್​ ಹೇಳಿದ್ರೆ, ಕೆಲವು ಕಡೆ ಆಗಿರುವ ಅನಾಹುತಗಳಿಂದ ಸಾಕಪ್ಪ ಎಂದು ಉಸಿರು ಬಿಗಿಹಿಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?

https://newsfirstlive.com/wp-content/uploads/2024/05/CBL-RAIN.jpg

Load More