newsfirstkannada.com

ಅಬ್ಬಬ್ಬಾ! ಮೋದಿಗೆ ಸಪೋರ್ಟ್​ ಮಾಡಲು ಮಿತ್ರಪಕ್ಷಗಳು ಇಟ್ಟ ಡಿಮ್ಯಾಂಡ್ಸ್​​​​ ಎಷ್ಟು ಗೊತ್ತಾ?

Share :

Published June 6, 2024 at 6:41am

  ಇಂಡಿಯಾ ಕೂಟವು ತನ್ನ ಮಿತ್ರಪಕ್ಷಗಳನ್ನು ಸೆಳೆಯಲು ಸರ್ಕಸ್ ಶುರು

  ನಿತೀಶ್ ಕುಮಾರ್ ಜೊತೆ ತೇಜಸ್ವಿ ಯಾದವ್ ವಿಮಾನದಲ್ಲಿ ಪ್ರಯಾಣ

  ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಸಿ ತಮ್ಮ ಒಗ್ಗಟ್ಟಿನ ಪ್ರದರ್ಶನ

ಲೋಕಸಮರದಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದಕ್ಕೆ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸದ್ದು-ಗದ್ದಲಗಳು ಏರ್ಪಟ್ಟಿವೆ. ಪ್ರಧಾನಿ ಗದ್ದುಗೆ ಏರಲು ಎನ್​ಡಿಎ ಬಳಿ ಬೇಕಾದ ಬಲವಿದ್ರೂ ವಿರೋಧಿ ಬಣವು ಸರ್ಕಾರ ರಚಿಸಲು ಸರ್ಕಸ್ ಮಾಡ್ತಿದೆ. ಹೀಗಾಗಿ ಎಲ್ಲರ ಚಿತ್ತ ಟಿಡಿಪಿ, ಜೆಡಿಯು ಕಡೆ ನೆಟ್ಟಿದೆ. ಆದ್ರೆ ಎರಡೂ ಪಕ್ಷಗಳು ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿವೆ. ಎನ್​ಡಿಎ ಮಿತ್ರರ ಜೊತೆ ಸಭೆಯಲ್ಲೂ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿವೆ.

ಇದನ್ನೂ ಓದಿ: ಗೀತಾ ಶಿವರಾಜ್​ಕುಮಾರ್​​ ವಿರುದ್ಧ ನಾಲಿಗೆ ಹರಿಬಿಟ್ಟ ಕುಮಾರ್​ ಬಂಗಾರಪ್ಪ.. ಏನಂದ್ರು?

ಲೋಕಯುದ್ಧದ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡ್ತಿವೆ. ಅದರಲ್ಲೂ ಬಿಜೆಪಿಗೆ ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗದಿದ್ದಕ್ಕೆ ಎನ್​ಡಿಎ ಮಿತ್ರಕೂಟಗಳ ಬೆಂಬಲ ಬೇಕೇ ಬೇಕಾಗಿದೆ. ಇದರಿಂದ ಮಿತ್ರಪಕ್ಷಗಳಿಗೆ ಸಖತ್ ಡಿಮ್ಯಾಂಡ್​ ಬಂದಿದ್ದು ಟಿಡಿಪಿ, ಜೆಡಿಯು ಸೇರಿದಂತೆ ಎಲ್ಲಾ ಮಿತ್ರ ಪಕ್ಷಗಳು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿವೆ.

ಎನ್​ಡಿಎ ಜೊತೆ ಇರಲಿದ್ದೇವೆಂದ ಚಂದ್ರಬಾಬು ನಾಯ್ಡು

ಎನ್​ಡಿಎ ಮೈತ್ರಿ ಕೂಟದಲ್ಲಿ ಬಿಜೆಪಿ ನಂತರ ಅಂದ್ರೆ 16 ಸ್ಥಾನಗಳನ್ನು ಟಿಡಿಪಿ ಗೆದ್ದಿದೆ. ಹೀಗಾಗಿ ಟಿಡಿಪಿ ಎನ್​ಡಿಎಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಬೆನ್ನಲ್ಲೇ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಈ ಮೊದಲೇ ಘೋಷಿಸಿದಂತೆ ಬಿಜೆಪಿ ಜೊತೆ ನಿಲ್ಲಲಿದ್ದೇನೆ ಅಂತ ಘೋಷಣೆ ಮಾಡಿದ್ದಾರೆ. ಈಗಾಗಲೇ I.N.D.I.A ಮೈತ್ರಿಕೂಟದಿಂದಲೂ ಆಹ್ವಾನವಿದ್ರೂ ನನ್ನ ಬೆಂಬಲ ಎನ್​ಡಿಎಗೆ ಎಂದಿದ್ದಾರೆ.

ನಾವು ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದೇವೆ. ಎನ್​ಡಿಎ ಮೀಟಿಂಗ್​ಗೆ ಹೋಗ್ತೇನೆ.

ಚಂದ್ರಬಾಬು ನಾಯ್ಡು, ಟಿಡಿಪಿ ಮುಖ್ಯಸ್ಥ

ದೆಹಲಿಯಲ್ಲಿ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ ಎನ್​ಡಿಎ ಮಿತ್ರಕೂಟ

ಅದ್ಯಾವಾಗ ಬಿಜೆಪಿಗೆ ಬಹುಮತ ಬರಲಿಲ್ಲವೋ ಕೇಸರಿ ಪಾಳಯ ಟೆನ್ಷನ್​ನಲ್ಲಿದೆ. ಅತ್ತ ವಿರೋಧಿ ಬಣ ಇಂಡಿಯಾ ಕೂಟವು ತನ್ನ ಮಿತ್ರಪಕ್ಷಗಳನ್ನು ಸೆಳೆಯಲು ಸರ್ಕಸ್ ಮಾಡ್ತಿದೆ. ಹೀಗಾಗಿ ನಿನ್ನೆ ದೆಹಲಿಯಲ್ಲಿ ಬಿಜೆಪಿ ಎನ್​ಡಿಎ ಮಿತ್ರಕೂಟದ ಸಭೆ ನಡೆಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಸಿ ತಮ್ಮ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಸಭೆಯಲ್ಲಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಹೆಚ್​ಡಿಕೆ, ಪವನ್​ ಕಲ್ಯಾಣ್, ಚಿರಾಗ್ ಪಾಸ್ವಾನ್, ಏಕ್​​ನಾಥ್​​ ಶಿಂಧೆ ಸೇರಿದಂತೆ ಮೈತ್ರಿಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗಿದ್ದರು. ನಾಯಕರೆಲ್ಲರು ಸರ್ಕಾರ ರಚನೆಗೆ ಬೆಂಬಲ ಪತ್ರವನ್ನೂ ನೀಡಿದ್ದಾರೆ.

ನಾವು ಸರ್ಕಾರ ರಚಿಸಲಿದ್ದೇವೆ. ಪ್ರಮಾಣವಚನ ಸ್ವೀಕರಿಸಲು ತಯಾರಿ ನಡೆಯುತ್ತಿದೆ. ಈ ಸರ್ಕಾರ ಭಾರೀ ಸದೃಢವಾಗಿ ನಮ್ಮ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿದೆ.

ಚಿರಾಗ್‌ ಪಾಸ್ವಾನ್‌, ಎಲ್​​ಜೆಪಿ ಮುಖ್ಯಸ್ಥ

ನಿತೀಶ್ ಕುಮಾರ್ ಜೊತೆ ತೇಜಸ್ವಿ ಯಾದವ್ ಪ್ರಯಾಣ

ಇನ್ನು, ನಿನ್ನೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರ ಹೃದಯಬಡಿತ ಹೆಚ್ಚಿಸುವಂತ ಘಟನೆಗಳು ಸಂಭವಿಸಿದೆ. ಎನ್​ಡಿಎ ಪಾಲುದಾರರಾದ ಬಿಹಾರದ ಜೆಡಿಯು ಪಕ್ಷದ ನಿತೀಶ್ ಕುಮಾರ್, ವಿರೋಧಿ ಬಣದ RJDಯ ತೇಜಸ್ವಿ ಯಾದವ್ ಜೊತೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಪಾಟ್ನಾದಿಂದ ದೆಹಲಿಗೆ ವಿಸ್ತಾರಾ ವಿಮಾನದಲ್ಲಿ ಪಯಣ ಮಾಡಿದ್ದಾರೆ. ಇವರಿಬ್ಬರ ಪ್ರಯಾಣ ಕುತೂಹಲ ಮೂಡಿಸಿತ್ತು. ಅದರಲ್ಲೂ ವಿಮಾನ ಟೇಕಾಫ್‌ ಆಗುವಾಗ ಉಭಯ ನಾಯಕರು ಬೇರೆ ಬೇರೆ ಸೀಟಿನಲ್ಲಿ ಕುಳಿತಿದ್ದರು. ಆದ್ರೆ ವಿಮಾನ ಟೇಕಾಫ್‌ ಆದ ಮೇಲೆ ಇಬ್ಬರೂ ಅಕ್ಕ-ಪಕ್ಕ ಕುಳಿತು ಪ್ರಯಾಣಿಸಿದ್ದಾರೆ. ಇದು ಅಚ್ಚರಿಯ ಜೊತೆಗೆ ಅನುಮಾನವನ್ನೂ ಹುಟ್ಟು ಹಾಕಿದೆ.

ಇನ್ನು ಸಚಿವಗಿರಿಗಾಗಿ ಎನ್​ಡಿಎಯಲ್ಲಿರುವ ಎಲ್ಲ ಮಿತ್ರಪಕ್ಷಗಳು ಡಿಮ್ಯಾಂಡ್ ಇಡುತ್ತಿವೆ. ಈ ಪೈಕಿ ನಿತೀಶ್​ ಕುಮಾರ್​ ನಡೆ ಕುತೂಹಲ ಮೂಡಿಸಿದೆ. ಬಿಜೆಪಿ ಬಹುಮತ ಪಡಯದೇ ಇರೋದ್ರಿಂದ ರಾಷ್ಟ್ರಮಟ್ಟದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಎನ್​ಡಿಎ ಮಿತ್ರಪಕ್ಷಗಳು ಮಂತ್ರಿಗಿರಿಗಾಗಿ ಡಿಮ್ಯಾಂಡ್ ಇಡುತ್ತಿವೆ. ಇದರ ನಡುವೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟವೂ ಬಿಜೆಪಿಯ ಮಿತ್ರರನ್ನು ಸೆಳೆದು ಸರ್ಕಾರ ರಚಿಸಲು ಸರ್ಕಸ್​ ಮಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ! ಮೋದಿಗೆ ಸಪೋರ್ಟ್​ ಮಾಡಲು ಮಿತ್ರಪಕ್ಷಗಳು ಇಟ್ಟ ಡಿಮ್ಯಾಂಡ್ಸ್​​​​ ಎಷ್ಟು ಗೊತ್ತಾ?

https://newsfirstlive.com/wp-content/uploads/2024/06/bjp.jpg

Load More