newsfirstkannada.com

ಗೀತಾ ಶಿವರಾಜ್​ಕುಮಾರ್​​ ವಿರುದ್ಧ ನಾಲಿಗೆ ಹರಿಬಿಟ್ಟ ಕುಮಾರ್​ ಬಂಗಾರಪ್ಪ.. ಏನಂದ್ರು?

Share :

Published June 5, 2024 at 5:08pm

    ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು

    ಹೆದರಿಸುವ, ಹುಷಾರ್ ಎನ್ನುವ ಮಾತುಗಳು ಗಂಟಲೋಳಗೆ ಇರಲಿ

    ನನ್ನ ತಂಗಿ ಗೀತಾ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಇರಲ್ಲ

ಶಿವಮೊಗ್ಗ: ಪ್ರತಿಷ್ಠೆಯ ಕಣವಾಗಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​​ನಿಂದ ಸ್ಪರ್ಧೆ ಮಾಡಿದ್ದ ನಟ ಶಿವರಾಜ್​ ಕುಮಾರ್ ಪತ್ನಿ ಗೀತಾ ಅವರು ಸೋತಿದ್ದಾರೆ. ಆದರೆ ಈ ಕುರಿತು ತನ್ನ ಸಹೋದರ, ಸಹೋದರಿ ಬಗ್ಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಖಾರವಾಗಿ ಮಾತನಾಡಿದ್ದಾರೆ. ಕಟುವಾದ ಮಾತುಗಳಿಂದ ತಿವಿದಿದ್ದಾರೆ.

ಶಿವಮೊಗ್ಗ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಪೈಪೋಟಿ ಎನ್ನುವುದಕ್ಕಿಂತ ದಿವಂಗತ ಮಾಜಿ ಸಿಎಂ ಬಂಗಾರಪ್ಪ ಕುಟುಂಬದವರ ನಡುವೆ ನಡೆದ ರಾಜಕೀಯ ಸಂಗ್ರಾಮ. ಗೀತಾ ಶಿವರಾಜ್​ ಕುಮಾರ್​ ಅವರನ್ನ ಗೆಲ್ಲಿಸಲು ಸಹೋದರ ಮಧು ಬಂಗಾರಪ್ಪ ಟೊಂಕ ಕಟ್ಟಿ ನಿಂತಿದ್ರೆ, ಇತ್ತ ಬಿಜೆಪಿಯಿಂದ ಬಿ.ವೈ ರಾಘವೇಂದ್ರರನ್ನ ಗೆಲ್ಲಿಸಲು ಕುಮಾರ್ ಬಂಗಾರಪ್ಪ ಕೂಡ ಅಷ್ಟೇ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲೆಕ್ಷನ್​​ನಲ್ಲಿ ತನ್ನ ತಂಗಿ ಗೀತಾ ಶಿವರಾಜ್​ ಕುಮಾರ್ ಸೋಲುತ್ತಿದ್ದಂತೆ ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿ ಬರಲಿ, ಟಾಟಾ ಎಂದು ವ್ಯಗ್ಯವಾಡಿದ್ದಾರೆ.

ಎಸ್​ ಬಂಗಾರಪ್ಪ ಹೆಸರು ಪ್ರಚಾರಕ್ಕೆ ಬಳಸಿಕೊಂಡ್ರಾ?

ಈ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, ಮಾಜಿ ಸಿಎಂ ಎಸ್​ ಬಂಗಾರಪ್ಪ ಅವರ ಹೆಸರನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಧೀಮಂತ ನಾಯಕನನ್ನ ಕೇವಲ ಒಂದು ಲೋಕಸಭಾ ಕ್ಷೇತ್ರ ಶಿವಮೊಗ್ಗಕ್ಕೆ ಸೀಮಿತಗೊಳಿಸಿ ಪ್ರಚಾರ ಸಾಮಾಗ್ರಿಯಾಗಿ ಉಪಯೋಗಿಸಿಕೊಂಡಿದ್ದಕ್ಕೆ ಇವರಿಗೆ ತಕ್ಕ ಶಾಸ್ತಿಯಾಗಿದೆ. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿ ಬರಲಿ, ಟಾಟಾ ಎಂದು ವ್ಯಗ್ಯವಾಡಿದ್ದಾರೆ.

ಸಹೋದರ ಭವಿಷ್ಯಕ್ಕೆ ಅಡ್ಡಗಾಲು ಹಾಕಲು ಬೆಂಗಳೂರಿಂದ ಬಂದ್ರಾ?

ಡಾ. ರಾಜ್​ಕುಮಾರ್ ಹೆಸರನ್ನು ದುರುಪಯೋಗ ಪಡಿಸಿಕೊಂಡು ಲಾಭ ಮಾಡಿಕೊಳ್ಳಬೇಕು ಎಂದುಕೊಂಡ ಇವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬ ಸ್ಥಿತಿಯಾಗಿದೆ. ಉತ್ತಮ ಉದ್ದೇಶ ಇದ್ರೆ ಗೆಲುವು ಇವರದ್ದೇ ಆಗುತ್ತಿತ್ತು. ಆದರೆ ಸ್ವಂತ ಸಹೋದರನ ಭವಿಷ್ಯಕ್ಕೆ ಅಡ್ಡಗಾಲು ಹಾಕಲೆಂದೇ ಬೆಂಗಳೂರಿಂದ ಬಂದು ವಾತವರಣವನ್ನು ಕಲುಷಿತಗೊಳಿಸಿ ದಿಕ್ಕು, ದೆಸೆ ಇಲ್ಲದಂತೆ ಆಗಿ ಗೂಡು ಸೇರಿಕೊಂಡಿದ್ದಾರೆ. ಹಿಂತಿರುಗಿ ಬರುವುದು ಇನ್ನು ಕನಸಿನ ಮಾತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೈರಿ ಬ್ಯಾಟರ್​​ನಿಂದ ತಂಡಕ್ಕೆ ಬಿಗ್​ ಬೂಸ್ಟ್.. ಪ್ಲೇಯಿಂಗ್​- 11ರಲ್ಲಿ ಪಂತ್ ಆಯ್ಕೆಗೆ ಅಡ್ಡಗಾಲು ಹಾಕ್ತಾರಾ ಸಂಜು?

ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ವಾ ಸಿಎಂ ಸಿದ್ದರಾಮಯ್ಯನವರು ಅವರನ್ನ ಸಂಪುಟದಿಂದ ವಜಾ ಮಾಡಬೇಕು. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಇರಲ್ಲ. ದೊಡ್ಮನೆಯ ವ್ಯವಹಾರ ಸಾಕಷ್ಟಿರುತ್ತದೆ. ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಗಂಟಲೋಳಗೆ, 4 ಗೋಡೆಗಳೋಳಗೆ ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದು ಕುಮಾರ್ ಬಂಗಾರಪ್ಪ ಅವರು ಆಕ್ರೋಶವಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೀತಾ ಶಿವರಾಜ್​ಕುಮಾರ್​​ ವಿರುದ್ಧ ನಾಲಿಗೆ ಹರಿಬಿಟ್ಟ ಕುಮಾರ್​ ಬಂಗಾರಪ್ಪ.. ಏನಂದ್ರು?

https://newsfirstlive.com/wp-content/uploads/2024/06/GEETHA_SHAVARAJKUMAR.jpg

Load More