newsfirstkannada.com

VIDEO: ಪ್ರಪಾತಕ್ಕೆ ಉರುಳಿಬಿದ್ದ ಬಸ್‌.. ದುರಂತದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ

Share :

Published May 30, 2024 at 6:06pm

  ಯಾತ್ರಾರ್ಥಿಗಳು ಚಲಿಸುತ್ತಿದ್ದ ಬಸ್ ಪ್ರಪಾತಕ್ಕೆ ಉರುಳಿ ಬಿದ್ದು ದುರಂತ

  ಬಸ್ ಉರುಳಿ ಬೀಳುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

  ಪ್ರಪಾತದಲ್ಲಿ ಬಿದ್ದವರ ಜೀವ ರಕ್ಷಿಸಲು ರಕ್ಷಣಾ ಸಿಬ್ಬಂದಿಗಳಿಂದ ಹರಸಾಹಸ

ಶ್ರೀನಗರ: ಜಮ್ಮು, ಕಾಶ್ಮೀರದಲ್ಲಿ ಭಯಾನಕ ಬಸ್‌ ದುರಂತ ಸಂಭವಿಸಿದೆ. ಯಾತ್ರಾರ್ಥಿಗಳು ಚಲಿಸುತ್ತಿದ್ದ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, 21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸುಮಾರು 50ಕ್ಕೂ ಅಧಿಕ ಯಾತ್ರಾರ್ಥಿಗಳಿದ್ದ ಪ್ರಯಾಣಿಕರು ದುರಂತಕ್ಕೀಡಾದ ಬಸ್‌ನಲ್ಲಿ ಪ್ರಯಾಣಿಸುತ್ತಾ ಇದ್ದರು. ಯಾತ್ರಾರ್ಥಿಗಳಿದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರು ಕಾಶ್ಮೀರದ ರೇಸಿಯಲ್ಲಿರುವ ಪ್ರಸಿದ್ಧ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರೆ ಕೈಗೊಂಡಿದ್ದರು. ಬಹುತೇಕರು ಉತ್ತರಪ್ರದೇಶ, ರಾಜಸ್ಥಾನ ಮತ್ತು ಹರಿಯಾಣ ಮೂಲದವರಾಗಿದ್ದು, ಕಾಶ್ಮೀರದ ಗೊರ್ಜ್‌ ಬಳಿ ದುರಂತಕ್ಕೀಡಾಗಿದೆ.

ಇದನ್ನೂ ಓದಿ: BREAKING: ಕೊನೆಗೂ ತವರಿನತ್ತ ಮುಖ ಮಾಡಿದ ಪ್ರಜ್ವಲ್ ರೇವಣ್ಣ; ಬೆಂಗಳೂರಿಗೆ ಲ್ಯಾಂಡ್ ಯಾವಾಗ? 

ಬಸ್ ಉರುಳಿ ಬೀಳುತ್ತಿದ್ದಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುವ ಬಸ್‌ನಲ್ಲಿದ್ದವರನ್ನು ರಕ್ಷಿಸಲು ಹರಸಾಹಸ ಪಡಲಾಗಿದೆ. ಜಮ್ಮು-ಪೂಂಜ್ ಹೆದ್ದಾರಿಯ ಗೊರ್ಜ್‌ ಬಳಿ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ಮೃತರ ಸಂಖ್ಯೆ 21ಕ್ಕೆ ತಲುಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪ್ರಪಾತಕ್ಕೆ ಉರುಳಿಬಿದ್ದ ಬಸ್‌.. ದುರಂತದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ

https://newsfirstlive.com/wp-content/uploads/2024/05/Jammu-Kashmir-Accident-1.jpg

Load More