newsfirstkannada.com

BREAKING: ಕೊನೆಗೂ ತವರಿನತ್ತ ಮುಖ ಮಾಡಿದ ಪ್ರಜ್ವಲ್ ರೇವಣ್ಣ; ಬೆಂಗಳೂರಿಗೆ ಲ್ಯಾಂಡ್ ಯಾವಾಗ?

Share :

Published May 30, 2024 at 4:35pm

Update May 30, 2024 at 4:36pm

    ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಮಾನ

    ಪ್ರಜ್ವಲ್ ರೇವಣ್ಣ ಹತ್ತಿದ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಯಾವಾಗ?

    2 ಕ್ಯಾರಿ ಬ್ಯಾಗ್​, 2 ಟ್ರಾಲಿ ಬ್ಯಾಗ್‌ಗಳನ್ನು ತರುತ್ತಿರುವ ಪ್ರಜ್ವಲ್ ರೇವಣ್ಣ

ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಕೊನೆಗೂ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಅಂದ್ರೆ, ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಮಾನವನ್ನು ಹತ್ತಿದ್ದಾರೆ. ಇಂದು ತಡರಾತ್ರಿ ಪ್ರಜ್ವಲ್ ರೇವಣ್ಣ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಾಧ್ಯತೆ ಇದೆ.

ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗುತ್ತಿರುವ ಪ್ರಜ್ವಲ್ ರೇವಣ್ಣ ಅವರು 2 ದಿನಗಳ ಹಿಂದೆಯೇ ಫ್ಲೈಟ್‌ ಟಿಕೆಟ್‌ ಬುಕ್ ಮಾಡಿದ್ದರು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಜ್ವಲ್ ರೇವಣ್ಣ ಅವರು ಮ್ಯೂನಿಕ್‌ನಿಂದ ಲುಪ್ತಾನ್ಸಾ A350-941 ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ.

ಇದನ್ನೂ ಓದಿ: ‘ನಾನೇ ಬರ್ತೀನಿ’ ಪ್ರಜ್ವಲ್​ ರೇವಣ್ಣ ವಿಡಿಯೋ ಬೆನ್ನಲ್ಲೇ ಮತ್ತೊಂದು ಸಂಕಷ್ಟ.. ಬಂಧನದ ಭೀತಿಯಲ್ಲಿ ತಾಯಿ ಭವಾನಿ 

ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಚ್‌ನಿಂದ ವಿಮಾನ ಹತ್ತಿರುವುದು ಪಕ್ಕಾ ಎನ್ನಲಾಗಿದೆ. ಇಂದು ರಾತ್ರಿಯೇ ಪ್ರಜ್ವಲ್ ರೇವಣ್ಣ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಇನ್ನು, ಜರ್ಮನಿಯ ಮ್ಯೂನಿಕ್‌ನಿಂದ ಹೊರಟಿರುವ ಪ್ರಜ್ವಲ್ ರೇವಣ್ಣ ಅವರು 4 ಬ್ಯಾಗ್‌ಗಳನ್ನು ತರುತ್ತಿದ್ದಾರೆ. 2 ಕ್ಯಾರಿ ಬ್ಯಾಗ್​, 2 ಟ್ರಾಲಿ ಬ್ಯಾಗ್‌ಗಳನ್ನು ಪ್ರಜ್ವಲ್ ರೇವಣ್ಣ ತರುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮ್ಯೂನಿಕ್​ನಲ್ಲಿ ಪ್ರಜ್ವಲ್ ರೇವಣ್ಣ ಅವರಿದ್ದ ಫೈಟ್ 29 ನಿಮಿಷ ತಡವಾಗಿ ಟೇಕ್ ಆಫ್ ಆಗಿದೆ. ಇಂದು ಮಧ್ಯಾಹ್ನ 3:46ಕ್ಕೆ ಹೊರಡಬೇಕಿದ್ದ ವಿಮಾನ 4:05ಕ್ಕೆ ಹೊರಟಿದೆ. 29 ನಿಮಿಷ ತಡವಾಗಿ ಮ್ಯೂನಿಕ್‌ನಿಂದ ಹೊರಡಿರುವುದರಿಂದ ಪ್ರಜ್ವಲ್ ರೇವಣ್ಣ ಅವರಿದ್ದ ವಿಮಾನ ರಾತ್ರಿ 12:59ಕ್ಕೆ ಬೆಂಗಳೂರನ್ನು ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್​ ಕೇಸ್​​.. ಬಂಧನ ಭೀತಿಯಲ್ಲಿರೋ ಭವಾನಿ ರೇವಣ್ಣಗೆ ಬಿಗ್​ ಶಾಕ್​​ 

ಪ್ರಜ್ವಲ್ ರೇವಣ್ಣ ಅವರು​ ಬೆಂಗಳೂರು ಏರ್​ಪೋರ್ಟ್​ಗೆ ಬರ್ತಿದ್ದಂತೆ ಅರೆಸ್ಟ್ ಮಾಡಲು SIT ಪೊಲೀಸರು ಕಾದು ಕುಳಿತಿದ್ದಾರೆ. ಮಧ್ಯರಾತ್ರಿ ಏರ್​ಪೋರ್ಟ್​ನಲ್ಲಿ ಪ್ರಜ್ವಲ್ ರೇವಣ್ಣ ಅವರು ಬಂದ್ರೆ ಅವರನ್ನು ಪೊಲೀಸರು​ ಬಂಧಿಸೋದಕ್ಕೆ ಸುಮಾರು 1 ರಿಂದ ಒಂದೂವರೆ ಗಂಟೆಗಳ ಕಾಲ ಬಂಧನ ಪ್ರಕ್ರಿಯೆ ನಡೆಯಲಿದೆ. ಅಲ್ಲಿಂದ ಆರೋಪಿಯ ಇಮಿಗ್ರೇಷನ್ ಪ್ರೋಸೆಸ್ ಆರಂಭವಾಗಿದೆ.

ಹೇಗೆ ಪ್ರಜ್ವಲ್ ಅರೆಸ್ಟ್ ಪ್ರಕ್ರಿಯೆ?
ಹಂತ 1
ಫ್ಲೈಟ್ ಹತ್ತಿದ ತಕ್ಷಣ ಆರೋಪಿ LOC ಇರುವ ಇಂಟಿಮೇಷನ್ ಬರುತ್ತೆ
ಬ್ಯೂರೋ ಆಫ್ ಇಮಿಗ್ರೇಷನ್ ಮೂಲಕ ಇಂಟಿಮೇಷನ್ ಬರಲಿದೆ
ಆಗ ಸೆಕ್ಯೂರಿಟಿ ಟೀಂಗೆ ಇಮಿಗ್ರೇಷನ್ ಮಾಹಿತಿ ರವಾನೆ ಆಗುತ್ತೆ

ಹಂತ 2:
ಪ್ರಜ್ವಲ್ ಬೆಂಗಳೂರಿಗೆ ಬಂದ ತಕ್ಷಣ ಇಮಿಗ್ರೇಷನ್ ಇಂಟಿಮೇಷನ್
ಪ್ರಯಾಣಿಕನ ಮೇಲೆ ಲುಕ್ ಔಟ್ ನೋಟಿಸ್​ ಇದೆ ಎಂದು ಅಲರ್ಟ್​
ಫುಲ್​ ಅಲರ್ಟ್ ಆಗಲಿರುವ ಏರ್​ಪೋರ್ಟ್ ಇನ್​​ಸೈಡ್ ಸೆಕ್ಯೂರಿಟಿ
ವಿದೇಶದಿಂದ ಬಂದ ಪ್ರಯಾಣಿಕ ಇಮಿಗ್ರೇಷನ್ ಸೆಂಟರ್​ಗೆ ಮಾಹಿತಿ

ಹಂತ 3:
ಲುಕ್ ಔಟ್ ನೋಟಿಸ್​ ಇರುವ ವ್ಯಕ್ತಿ ಎಂದು ವೆರಿಫಿಕೇಷನ್
ಆರೋಪಿಯ ಪಾಸ್​ಪೋರ್ಟ್, ಟಿಕೇಟ್ & ವೀಸಾ ಚೆಕ್
ಆರೋಪಿ ಕನ್ಫರ್ಮ್ ಆದ್ರೆ ಏರ್​ಪೋರ್ಟ್ ಪೊಲೀಸ್ರಿಗೆ ಮಾಹಿತಿ
ಪ್ರಜ್ವಲ್​ನ ವಶಕ್ಕೆ ಪಡೆಯಲಿರುವ ಏರ್​ಪೋರ್ಟ್ ಪೊಲೀಸರು

ಹಂತ 4:
ಇನಿಶಿಯೇಟಿಂಗ್ ಆಫೀಸರ್​ಗೆ ಮಾಹಿತಿ ರವಾನೆ
ತನಿಖಾ ತಂಡದ ಅಧಿಕಾರಿ ನೇಮಿಸಿರುವ ಆಫೀಸರ್
ಲುಕ್ ಔಟ್ ನೊಟೀಸ್​ನಲ್ಲಿ ಆ ಅಧಿಕಾರಿ ಡಿಟೇಲ್ಸ್ ಇರುತ್ತೆ
ಆ ಅಧಿಕಾರಿಗೆ ಏರ್​​ಪೋರ್ಟ್ ಪೊಲೀಸರಿಂದ ಮಾಹಿತಿ

ಹಂತ 5:
ಆರೋಪಿಯ ಡೀಟೇಲ್ಸ್​ ಪಡೆದು ಹ್ಯಾಂಡ್ ಓವರ್ ಪ್ರಕ್ರಿಯೆ
ಐಡಿ & ಪ್ರಕರಣದ ಡಿಟೇಲ್ಸ್, ಲುಕ್ ಔಟ್ ಡೀಟೇಲ್ಸ್​ ಪಡೆಯುತ್ತಾರೆ
ಆನಂತರ ಎಸ್ಐಟಿ ಇನಿಸಿಯೆಟಿಂಗ್ ಅಧಿಕಾರಿಗೆ ಹ್ಯಾಂಡ್ ಓವರ್
ಬಳಿಕ ಎಸ್ಐಟಿ ಆರೋಪಿಯ ವಶಕ್ಕೆ ಪಡೆದು ಮುಂದಿನ ಪ್ರಕ್ರಿಯೆ
ಇಷ್ಟು ಪ್ರಕ್ರಿಯೆ ಸುಮಾರು 1 ರಿಂದ ಒಂದೂವರೆ ಗಂಟೆ ಆಗುವ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕೊನೆಗೂ ತವರಿನತ್ತ ಮುಖ ಮಾಡಿದ ಪ್ರಜ್ವಲ್ ರೇವಣ್ಣ; ಬೆಂಗಳೂರಿಗೆ ಲ್ಯಾಂಡ್ ಯಾವಾಗ?

https://newsfirstlive.com/wp-content/uploads/2024/05/Prajwal-Revanna-Flight-1.jpg

Load More