/newsfirstlive-kannada/media/post_attachments/wp-content/uploads/2024/05/belagavi-death.jpg)
ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ನಗರದ ಮಹಾಂತೇಶ ನಗರದ ಬ್ರಿಡ್ಜ್ ಬಳಿ ನಡೆದಿದೆ. ಇಬ್ರಾಹಿಂ ಗೌಸ್ (22) ಮೃತ ಯುವಕ.
ಇದನ್ನೂ ಓದಿ: 3 ಡೆತ್‌ನೋಟ್.. ಬಾತ್‌ರೂಮ್‌ನಲ್ಲಿ ಕತ್ತು ಕೊಯ್ದ ಶವ; ಬೆಂಗಳೂರು ಯುವತಿ ಸಾವಿನ ಸುತ್ತಾ ಹಲವು ಅನುಮಾನ!
ಕೊಲೆಯಾದ ಯುವಕನು ಗಾಂಧಿ ನಗರ ನಿವಾಸಿ. ಇದೇ ಬಡಾವಣೆಯ ಯುವತಿ ಜೊತೆಗೆ ಇಬ್ರಾಹಿಂ ಪ್ರೀತಿ ಮಾಡುತ್ತಿದ್ದನಂತೆ. ಇವತ್ತು ಯುವತಿ ಜೊತೆಗೆ ಬೈಕ್ನಲ್ಲಿ ಇಬ್ರಾಹಿಂ ಹೋಗುತ್ತಿದ್ದ. ಇದನ್ನು ನೋಡಿದ ಯುವತಿಯ ಸಹೋದರ ಕೋಪಗೊಂಡಿದ್ದಾನೆ. ಅದೇ ಕೋಪದಲ್ಲಿ ಇಬ್ರಾಹಿಂಗೆ ಯುವತಿ ಸಹೋದರ ಮುಜಮಿಲ್ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
[caption id="attachment_64366" align="alignnone" width="800"] ಕೊಲೆ ಮಾಡಿದ ಆರೋಪಿ[/caption]
ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹಿಂನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆ ಇಬ್ರಾಹಿಂ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮಾಳ ಮಾರುತಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ