newsfirstkannada.com

3 ಡೆತ್‌ನೋಟ್‌.. ಬಾತ್‌ರೂಮ್‌ನಲ್ಲಿ ಕತ್ತು ಕೊಯ್ದ ಶವ; ಬೆಂಗಳೂರು ಯುವತಿ ಸಾವಿನ ಸುತ್ತಾ ಹಲವು ಅನುಮಾನ!

Share :

Published May 16, 2024 at 3:52pm

Update May 16, 2024 at 4:28pm

  ಬಾತ್‌ರೂಮ್‌ನಲ್ಲಿ ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಬುದ್ಧ

  ಬಾತ್​ರೂಮ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ ಹಾಲ್​ನಲ್ಲಿ ರಕ್ತ ಚೆಲ್ಲಿದ್ದೇಕೆ?

  ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?

ಬೆಂಗಳೂರು: ಮನೆ ಬಾತ್‌ರೂಮ್‌ನಲ್ಲಿ ಯುವತಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಚ್ಚಿ ಬೀಳಿಸಿದೆ. ನಗರದ ಬೃಂದಾವನ ಲೇಔಟ್‌ನಲ್ಲಿ ಈ ದುರಂತ ನಡೆದಿದ್ದು, ದ್ವಿತೀಯ ಪಿಯು ವಿದ್ಯಾರ್ಥಿನಿ ಪ್ರಬುದ್ಧ ಅನುಮಾನಾಸ್ಪದ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ಜಿಮ್ ಟ್ರೈನರ್ ಸೂಸೈಡ್‌ ಕೇಸ್‌ಗೆ ಹೊಸ ಟ್ವಿಸ್ಟ್‌.. ಪತ್ನಿಗೆ ವಿಡಿಯೋ ಕಾಲ್ ಮಾಡಿದ ಮೇಲೆ ಆಗಿದ್ದೇನು? 

ಮಗಳನ್ನು ಕಳೆದುಕೊಂಡಿರುವ ಪ್ರಬುದ್ಧ ತಾಯಿ ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಬಾತ್​ರೂಮ್​ನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ, ಅದರ ಜೊತೆಗೆ ಮೂರು ಡೆತ್ ನೋಟ್​ಗಳು ಸಿಕ್ಕಿವೆ ಎನ್ನಲಾಗಿದೆ. ಡೆತ್‌ನೋಟ್‌ ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಡೆತ್‌ನೋಟ್‌ನಲ್ಲಿರುವ ಹ್ಯಾಂಡ್​ರೈಟಿಂಗ್ ಮ್ಯಾಚ್ ಆಗುತ್ತಿಲ್ಲ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.

ಪ್ರಬುದ್ಧ ಸಾವಿಗೆ 15 ಅನುಮಾನ!

ಅನುಮಾನ-1: ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಮಾತಾಡಿದ್ದ ಪ್ರಬುದ್ಧ ಮಧ್ಯಾಹ್ನ 3.30ಕ್ಕೆ ಸಾವು
ಅನುಮಾನ-2: ಮಧ್ಯಾಹ್ನ 1.30 ರಿಂದ 3.30ರೊಳಗೆ ಆ ಎರಡು ಗಂಟೆಗಳಲ್ಲಿ ಆಗಿದ್ದು ಏನು?
ಅನುಮಾನ-3: ಪ್ರಬುದ್ಧ ಮನೆಗೆ ಬಂದಾಗ ಮನೆಯಲ್ಲಿ ತಾಯಿ, ಸೋದರ ಯಾರೂ ಇರಲಿಲ್ಲ
ಅನುಮಾನ-4: ಸೋದರ ಮನೆಗೆ ಬಂದಾಗ ಮೇನ್ ಡೋರ್ ಲಾಕ್, ಬ್ಯಾಕ್​ಡೋರ್ ಓಪನ್ ಆಗಿತ್ತು
ಅನುಮಾನ-5: ಬಾತ್​ರೂಮ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ ಹಾಲ್​ನಲ್ಲಿ ರಕ್ತ ಚೆಲ್ಲಲು ಸಾಧ್ಯವಾ?
ಅನುಮಾನ-6: ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಾತ್​ರೂಮ್​ನಲ್ಲಿ ಬಿದ್ದಿದ್ದ ಪ್ರಬುದ್ಧ
ಅನುಮಾನ-7: ಮಧ್ಯಾಹ್ನ ತಾಯಿ ಜೊತೆ ಫೋನ್​ನಲ್ಲಿ ಮಾತುಕತೆ, ಆದ್ರೀಗ ಫೋನ್ ನಾಪತ್ತೆ
ಅನುಮಾನ-8: ಪ್ರಬುದ್ಧಳ ಮೊಬೈಲ್ ಫೋನ್​ನಲ್ಲೇ ಅಡಗಿದೆಯಾ ಆಕೆ ಸಾವಿನ ರಹಸ್ಯ?
ಅನುಮಾನ-9: ಘಟನೆಗೂ ಮುನ್ನ ಮನೆಗೆ ಯಾರು ಬಂದಿದ್ದರು ಅನ್ನೋದು ಇನ್ನೂ ಗೊತ್ತಿಲ್ಲ
ಅನುಮಾನ-10: 3 ಡೆತ್​ ನೋಟ್ ಇದ್ದು, ಆತ್ಮಹತ್ಯೆ ಮನಸ್ಥಿತಿಯಲ್ಲಿ 3 ಡೆತ್​ ನೋಟ್ ಬರೆದಿದ್ದಳಾ?
ಅನುಮಾನ-11: ಡೆತ್​ ನೋಟ್‌ನಲ್ಲಿರುವ ಬರವಣಿಗೆ, ಪ್ರಬುದ್ಧಳ ನೋಟ್ಸ್​ನಲ್ಲಿರುವ ಬರವಣಿಗೆ ಮ್ಯಾಚ್ ಆಗ್ತಿಲ್ಲ
ಅನುಮಾನ-12: ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?
ಅನುಮಾನ-13: ಮರಣೋತ್ತರ ಪರೀಕ್ಷೆಯಲ್ಲಿ ಪ್ರಬುದ್ಧ ಆತ್ಮಹತ್ಯೆನಾ? ಕೊಲೆನಾ? ಅನ್ನೋದು ಬಹಿರಂಗ
ಅನುಮಾನ-14: ಕೊಲೆಗೆ ಅಸಲಿ ಕಾರಣ ಏನೆಂಬುದು ಮೊಬೈಲ್ ರಿಕವರಿ ಆದ ನಂತರ ಗೊತ್ತಾಗಲಿದೆ
ಅನುಮಾನ-15: ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ರೆ ಎಡಕೈನಲ್ಲಿ ಮೂಳೆ ಕಾಣೋ ರೀತಿ ಕೈ ಕೂಯ್ದಿರೋದು ಯಾಕೆ?

ಇವಿಷ್ಟು ಅನುಮಾನಗಳ ಜೊತೆಗೆ ಪ್ರಬುದ್ಧ ಈ ಹಿಂದೆ ಎರಡು ಮೂರು ಬಾರಿ ಕೈ ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ಅನುಮಾನವೂ ಇದೆ. ಸದ್ಯ ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ರಬುದ್ಧ ಸಾವಿನ ರಹಸ್ಯ ಬೇಧಿಸೋದು ಸವಾಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಡೆತ್‌ನೋಟ್‌.. ಬಾತ್‌ರೂಮ್‌ನಲ್ಲಿ ಕತ್ತು ಕೊಯ್ದ ಶವ; ಬೆಂಗಳೂರು ಯುವತಿ ಸಾವಿನ ಸುತ್ತಾ ಹಲವು ಅನುಮಾನ!

https://newsfirstlive.com/wp-content/uploads/2024/05/Prabudda.jpg

Load More