newsfirstkannada.com

ಏರಿಯಾದಲ್ಲಿ ಗ್ಯಾಂಗ್ ವಾರ್‌.. ಯುವಕನನ್ನು ಕೊಚ್ಚಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು!

Share :

Published February 7, 2024 at 5:11pm

  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು

  ಹಣಕಾಸಿನ ವಿಚಾರಕ್ಕೆ ರೋಹನ್ ವಾಕಡೆ ಕೊಲೆ ಆಯ್ತಾ?

  ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆಗೆ ಕುಟುಂಬಸ್ಥರ ಆಗ್ರಹ

ಕಲಬುರಗಿ: ಆ ಯುವಕ ತಾನಾಯಿತು ತನ್ನ ಕೆಲಸವಾಯ್ತು ಅಂತಾ ಇರುತ್ತಿದ್ದನು. ನಿತ್ಯವೂ ಕೆಲಸಕ್ಕೆ ಹೋಗಿ ರಾತ್ರಿ ಹೊತ್ತು ಮನೆಗೆ ಬರುತ್ತಿದ್ದ. ಆದ್ರೆ ಕಳೆದ ರಾತ್ರಿ ಕೆಲಸಕ್ಕೆ ಹೋದಾತ ಮರಳಿ ವಾಪಸ್ ಮನೆಗೆ ಬಂದಿರಲಿಲ್ಲ. ಬೆಳಗಾಗೋದ್ರೊಳಗೆ ನಿಮ್ಮ ಮಗನ ಕೊಲೆಯಾಗಿದೆ ಅಂತಾ ಪೋಷಕರಿಗೆ ಬರಸಿಡಿಲಿನಂತೆ ಸುದ್ದಿ ಅಪ್ಪಳಿಸಿದೆ.

ಇದನ್ನು ಓದಿ: ಅಬ್ಬಾ.. ನಾಗರಹಾವು ವಿಷದ ಬಾಟಲ್ ಅನ್ನೇ​​ ನುಂಗಿತ್ತಾ! ಆಮೇಲೇನಾಯ್ತು?

ಹೌದು, ನಗರದ ಆಶ್ರಯ ಕಾಲೋನಿಯಲ್ಲಿ ಈ ನಡೆದಿದೆ. ಮೃತ ಯುವಕನ ಹೆಸರು ರೋಹನ್ ವಾಕಡೆ (22). ನಗರದ ಏಷಿಯನ್ ಮಾಲ್​ನಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ. ನಿತ್ಯ ಬೆಳಗ್ಗೆ 11 ಗಂಟೆಗೆ ಕೆಲಸಕ್ಕೆ ಹೋಗಿ ರಾತ್ರಿ 11 ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದ. ಆದ್ರೆ ಕಳೆದ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ರೋಹನ್‌ ನನ್ನ ಅದೇ ಏರಿಯಾದ ನಾಲ್ಕೈದು ಯುವಕರು ಬೈಕ್ ಅಡ್ಡಗಟ್ಟಿದ್ದಾರೆ. ಈ ವೇಳೆ ರೋಹನ್ ನನ್ನ ಥಳಿಸಿದ, ಯುವಕರ ಗ್ಯಾಂಗ್ ನಂತರ ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ.

ಕಾಲೋನಿ ನಿವಾಸಿ ಕೊಲೆಯಾದ ರೋಹನ್ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇರುತ್ತಿದ್ದನು. ಇದರ ಮಧ್ಯೆ ಅದೇ ಬಡಾವಣೆಯ ಕೆಲವರಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದನು.‌ ಕಳೆದ ರಾತ್ರಿ ಮಾತಾಡೋಣ ಬಾ ಅಂತಾ ರೋಹನ್‌ ನನ್ನ ಕರೆದ ಯುವಕರ ಗ್ಯಾಂಗ್ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದಾರೆಂಬ ಆರೋಪ ಕುಟುಂಬಸ್ಥರು ಹಾಗೂ ಸಂಬಂದಿಕರು ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಘಟನೆ ಸಂಬಂಧ ಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಸ್ಥಳದಲ್ಲಿ ಸಿಕ್ಕಂತಹ ಕೆಲ ಸಾಕ್ಷ್ಯಾಧಾರಗಳು ಹಾಗೂ ಕುಟುಂಬಸ್ಥರು ನೀಡುವ ದೂರಿನನ್ವಯ ತನಿಖೆ ನಡೆಸಲಾಗುತ್ತದೆ. ತನಿಖೆ ನಂತರವಷ್ಟೇ ರೋಹನ್ ಕೊಲೆಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತ ಚೇತನ್ ತಿಳಿಸಿದ್ದಾರೆ‌. ದುಡಿದು ಕುಟುಂಬವನ್ನ ನೋಡಿಕೊಂಡು ಹೋಗುತ್ತಿದ್ದ ರೋಹನ್‌ ಕೊಲೆಯಿಂದ ಪೋಷಕರು ಅಕ್ಷರಶಃ ನಲುಗಿಹೋಗಿದ್ದಾರೆ. ಕಣ್ಣೀರು ಹಾಕುತ್ತ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏರಿಯಾದಲ್ಲಿ ಗ್ಯಾಂಗ್ ವಾರ್‌.. ಯುವಕನನ್ನು ಕೊಚ್ಚಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು!

https://newsfirstlive.com/wp-content/uploads/2024/02/death-2024-02-07T163149.809.jpg

Load More