newsfirstkannada.com

ಅಬ್ಬಾ.. ನಾಗರಹಾವು ವಿಷದ ಬಾಟಲ್ ಅನ್ನೇ​​ ನುಂಗಿತ್ತಾ! ಆಮೇಲೇನಾಯ್ತು?

Share :

Published February 7, 2024 at 4:25pm

    ಹಾವಿನ ಹೊರಳಾಟ ಕಂಡು ಬೆಚ್ಚಿಬಿದ್ದ ಬೈಲೂರು ನಿವಾಸಿಗಳು

    ಉಣ್ಣೆ ನಿವಾರಣೆ ಮಾಡುವ ವಿಷದ ಬಾಟಲ್ ನುಂಗಿದ ಹಾವು

    ಹಾವಿನ ಹೊಟ್ಟೆಗೆ ಸೇರಿದ್ದ ವಿಷದ ಬಾಟಲ್ ತೆಗೆದ ಉರಗ ತಜ್ಞ

ಉಡುಪಿ: ವಿಷದ ಬಾಟಲ್​ವೊಂದನ್ನು ನುಂಗಿ ಒದ್ದಾಡುತ್ತಿದ್ದ ಹಾವಿನ್ನು ರಕ್ಷಣೆ ಮಾಡಿರೋ ಘಟನೆ ನೀರೆ ಬೈಲೂರು ಎಂಬಲ್ಲಿ ನಡೆದಿದೆ. ಹಸುವಿನ ಮೈಮೇಲಿನ ಉಣ್ಣೆ ನಿವಾರಣೆ ಮಾಡುವ ವಿಷದ ಬಾಟಲ್ ನಾಗರ ಹಾವು ನುಂಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಉರಗ ತಜ್ಞ ಗುರುರಾಜ ಸನೀಲ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: BBK10: ಬಿಗ್​ಬಾಸ್​ ಸ್ಪರ್ಧಿ ಮೈಕಲ್ ಹೇರ್ ಸ್ಟೈಲ್ ಮಾಡೋದು ಹೇಗೆ? ಇಲ್ಲಿದೆ ‘ಕನ್ನಡದ ಕಂದ’ ಅಸಲಿ ​ಸೀಕ್ರೆಟ್!

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಉರಗ ತಜ್ಞ ಗುರುರಾಜ ಸನೀಲ್ ಅವರು ಬಂದು ಹಾವು ಅವಿತಿದ್ದ ನೆಲವನ್ನು ಪೂರ್ಣ ಒಡೆದು ಅಡಿಪಾಯದ ಕಲ್ಲುಗಳನ್ನು ಕಿತ್ತು ಹಾಕಿದರು. ಹಾವಿನ ಪೂರ್ತಿ ಹೊಟ್ಟೆಗೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ಇದನ್ನು ಕಂಡ ಅಲ್ಲಿನ ನಿವಾಸಿಗಳು ಒಂದು ಕ್ಷಣ ಶಾಕ್​ ಆಗಿದ್ದರು ಬಳಿಕ ಗುರುರಾಜ ಸನೀಲ್ ಅವರು ಹಾವನ್ನ ಸುರಕ್ಷಿತವಾಗಿ ನೀರೆಬೈಲೂರು ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ನಾಗರಹಾವು ವಿಷದ ಬಾಟಲ್ ಅನ್ನೇ​​ ನುಂಗಿತ್ತಾ! ಆಮೇಲೇನಾಯ್ತು?

https://newsfirstlive.com/wp-content/uploads/2024/02/snake-14.jpg

Load More