newsfirstkannada.com

ಅಪ್ರಾಪ್ತ ಸೊಸೆಯನ್ನ ಅಪಹರಿಸಿ ಮದುವೆಯಾದ ವಿವಾಹಿತ ಮಹಿಳೆ.. ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇಗೆ?

Share :

Published April 2, 2024 at 2:21pm

    ಅಪ್ರಾಪ್ತೆಯನ್ನ ವಿವಾಹವಾಗಿ ಗಂಡ-ಹೆಂಡತಿಯಂತೆ ಬಾಳುವ ಯೋಚನೆ

    ಗಂಡನ ಸಂಬಂಧಿಯನ್ನ ಅಪಹರಿಸಿದ ಹೆಂಡತಿ.. 16ರ ಬಾಲಕಿಗೆ ನಿರಂತರ ಶೋಷಣೆ

    ಪೊಲೀಸ್​ ವಿಚಾರಣೆ ವೇಳೆ ಆಕೆ ಸತ್ಯ ಬಾಯಿ ಬಿಟ್ಟ ಸತ್ಯವೇನು ಗೊತ್ತಾ? ಈ ಸ್ಟೋರಿ ಓದಿ

ಮಧ್ಯಪ್ರದೇಶ: ವಿವಾಹಿತ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಸೊಸೆಯನ್ನು ಅಪಹರಿಸಿ ವಿವಾಹವಾಗಿ ಕೊನೆಗೆ ಆಕೆಗೆ ಲೈಂಗಿಕ ಶೋಷಣೆ ನೀಡಿರುವ ಘಟನೆ ಖಾರ್ಗೋನ್​ ನಲ್ಲಿ ಬೆಳಕಿಗೆ ಬಂದಿದೆ.

ಫೆಬ್ರವರಿ 27ರಂದು 24 ವರ್ಷದ ವಿವಾಹಿತ ಮಹಿಳೆ ಗಂಡನ ಸಂಬಂಧಿಯಾದ 16 ವರ್ಷದ ಬಾಲಕಿಯನ್ನು ಅಪಹರಿಸಿದ್ದಳು. ಕಳೆದ ವಾರ ಇಬ್ಬರನ್ನು ಬರೂದ್​ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಠಾಣಾಧಿಕಾರಿ ಅಧಿಕಾರಿ ರಿತೇಶ್​ ಯಾದವ್​ ಈ ಬಗ್ಗೆ ಮಾತನಾಡಿದ್ದು, ಆರೋಪಿ ತಾನು ಸಲಿಂಗಿ ಎಂದು ಹೇಳಿಕೊಂಡಿದ್ದು ಬಾಲಕಿ ಜೊತೆಗೆ ಸಂಬಂಧಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪುಣೆ To ಬೆಂಗಳೂರು 3,500 ರೂ, ಕ್ಯಾಬ್​ನಲ್ಲಿ ಏರ್​ಪೋರ್ಟ್​ನಿಂದ ನಗರಕ್ಕೆ 2000 ರೂ! ಹೆಂಗಪ್ಪಾ ಸಾಧ್ಯ ಎಂದ ಟ್ವಿಟ್ಟಿಗರು

ಮಹಿಳೆ ಸಂತ್ರಸ್ತೆಯನ್ನು ಇಂದೋರ್​ನಿಂದ ಧಮ್ನೋಡ್​ಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಗಂಡ-ಹೆಂಡತಿಯಂತೆ ವಾಸಿಸಲು ಪ್ರಯತ್ನಿಸಿದ್ದರು.

ಮಹಿಳೆ ಒಂದು ವರ್ಷದ ಹಿಂದೆ ಉಮರಖಾಲಿ ಗ್ರಾಮದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದಳು. ಬಳಿಕ ಗಂಡ ಸಂಬಂಧಿಕಳಾದ ಸಂತ್ರಸ್ತೆಯ ಜೊತೆಗೆ ಸಂಬಂಧ ಹೊಂದಿರುವುದಾಗಿ ಪೊಲೀಸರೊಂದಿಗೆ ಹೇಳಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಹಿಳೆಯ ಬಗ್ಗೆ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ರಾಪ್ತ ಸೊಸೆಯನ್ನ ಅಪಹರಿಸಿ ಮದುವೆಯಾದ ವಿವಾಹಿತ ಮಹಿಳೆ.. ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇಗೆ?

https://newsfirstlive.com/wp-content/uploads/2024/04/Marriage.jpg

Load More