ಪ್ರೀತಿಗೆ ಕುಟುಂಬ ಒಪ್ಪಲಿಲ್ಲ ಎಂದು ಯುವಕ ಸಾವು; ವಿಷಯ ತಿಳಿದು ಯುವತಿ ದುಡುಕಿನ ನಿರ್ಧಾರ

author-image
Veena Gangani
Updated On
ಪ್ರೀತಿಗೆ ಕುಟುಂಬ ಒಪ್ಪಲಿಲ್ಲ ಎಂದು ಯುವಕ ಸಾವು; ವಿಷಯ ತಿಳಿದು ಯುವತಿ ದುಡುಕಿನ ನಿರ್ಧಾರ
Advertisment
  • ನಗರದ ಕಾಯಿಸೊಪ್ಪಿನ ಬೀದಿಯಲ್ಲಿ ನಡೆದ ಘಟನೆ
  • ಮೋನಿಕಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಮೃತ ಯುವಕ
  • ಗಂಭೀರವಾಗಿ ಗಾಯಗೊಂಡ ಯುವತಿ ಆಸ್ಪತ್ರೆಗೆ ದಾಖಲು

ರಾಮನಗರ: ಪ್ರೀತಿಗೆ ಕುಟುಂಬದವರು ಒಪ್ಪಲಿಲ್ಲವೆಂದು ಯುವಕನೊಬ್ಬ ಸಾವಿಗೆ ಶರಣಾದ ಘಟನೆ ನಗರದ ಕಾಯಿಸೊಪ್ಪಿನ ಬೀದಿಯಲ್ಲಿ ನಡೆದಿದೆ. ‌‌ಯಶವಂತ್ (24) ಮೃತ ಯುವಕ.

ಇದನ್ನೂ ಓದಿ: ರೀಲ್ಸ್ ಚೆಲುವೆಯ ದುರಂತ.. ಬೆಟ್ಟದ ಮೇಲೆ ನಡೆದ ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ; ಆಗಿದ್ದೇನು?

ಮೃತ ಯುವಕ ಯಶವಂತ್, ಮೋನಿಕಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಗೆ ಮನೆಯವರು ಸಮ್ಮತಿ ನೀಡಿರಲಿಲ್ಲ. ಇದೇ ವಿಚಾರಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಯುವತಿ ಕೂಡ ಚಾಕುವಿನಿಂದ ಇರಿದುಕೊಂಡು ಸಾಯಲು ಯತ್ನಿಸಿದ್ದಾಳೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆಕೆಯನ್ನು ಬಿ.ಎಂ.ರಸ್ತೆಯಲ್ಲಿರುವ ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.

publive-image

ಯಶವಂತ್ ಮತ್ತು ಮೋನಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದವರಿಗೆ ವಿಷಯ ಗೊತ್ತಾದಾಗ, ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಷಯಕ್ಕೆ ಕುಟುಂಬಸ್ಥರ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಅದರಿಂದ ನೊಂದುಕೊಂಡಿದ್ದ ಯಶವಂತ್ ತನ್ನ ಕೊಠಡಿಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ರಾಮನಗರ ಟೌನ್ ಪೊಲೀಸರು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment