ಡಿವೋರ್ಸ್ ಪಡಿಯೋಣ ಅಂತ ಮಾಗಡಿಗೆ ಕರೆಸಿಕೊಂಡಿದ್ದ ಗಂಡ
ದಾಖಲಾತಿ ಸರಿ ಇರಲಿಲ್ಲ, ಗಂಡನೊಂದಿಗೆ ಉಳಿದಿದ್ಳು ರೀಲ್ಸ್ ರಾಣಿ
ಬೆಟ್ಟದ ದೇವಸ್ಥಾನಕ್ಕೆ ಬೈಕ್ನಲ್ಲಿ ಕರ್ಕೊಂಡು ಹೋಗಿದ್ದ ಮೇಲೆ ಏನಾಯ್ತು?
ರಾಮನಗರ: ಕಳೆದ ಮೂರು ವರ್ಷಗಳಿಂದ ಉಮೇಶ್ ಮತ್ತು ದಿವ್ಯಾ ದೂರ ಆಗಿದ್ದರು. ಇದಾದ ಬಳಿಕ ಬೇರೆಯವನ ಅಕ್ರಮ ಸಂಬಂಧ ಹೊಂದಿದ್ದ ದಿವ್ಯ, ಅವನ ಜೊತೆಯೂ ಒಂದು ತಿಂಗಳಿದ್ಳು.
ಬಳಿಕ ಅವನಿಂದಲೂ ದೂರ ಆಗಿದ್ದ ದಿವ್ಯಾ. ಇತ್ತ ಉಮೇಶನಿಗೆ ಹೆಂಡತಿ ಅಂದ್ರೆ ಪಂಚಪ್ರಾಣ. ಇನ್ನೊಂದೆಡೆ ದಿವ್ಯಾಳಿಗೆ ಫ್ರೀಡಂ ಸಿಕ್ಕು ಸಿಕ್ಕಾಪಟ್ಟೆ ರೀಲ್ಸ್ನಲ್ಲಿ ಮಾಡಿದ್ದಾಳೆ. ಮತ್ತೆ ಹೆಂಡತಿ ಬಗೆಗಿನ ಕಾಮೆಂಟ್ಗಳಿಂದ ಬೇಸತ್ತು ಹೋಗಿದ್ದ. ಇದ್ರ ಮಧ್ಯೆ ಗಂಡನಿಗೆ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ ದಿವ್ಯಾ. ಆದ್ರೆ ಉಮೇಶನಿಗೆ ವಿಚ್ಛೇದನ ಕೊಡುವ ಮನಸ್ಸು ಇರಲಿಲ್ಲ.
ಇದನ್ನೂ ಓದಿ: ಹೆಂಡ್ತಿಗೆ ರೀಲ್ಸ್ ಗೀಳು.. ಗಂಡನಿಗೆ ಕಾಮೆಂಟ್ಸ್ಗಳದ್ದೇ ಗೋಳು; ಚಿಟ್ಟೆ ಟ್ಯಾಟೂ ಚೆಲುವೆ ದುರಂತ ಅಂತ್ಯ!
ಇದ್ರ ಮಧ್ಯೆ ಕಾಮೆಂಟ್ಗಳು ಉಮೇಶ್ ಮನಸ್ಸು ಕೆಡಿಸಿತ್ತು. ಹೀಗಾಗಿ ಪತ್ನಿಯನ್ನ ಕೊಲ್ಲೋದಕ್ಕೆ ಅಂತ ಪಕ್ಕಾ ಪ್ಲಾನ್ ಮಾಡಿದ್ದ ಉಮೇಶ್ ಮಾಗಡಿ ಕೋರ್ಟ್ಗೆ ಬಂದ್ರೆ ಡಿವೋರ್ಸ್ ಕೊಡೋದಾಗಿ ಹೇಳಿದ್ದ. ಇವನ ಮಾತು ನಂಬಿ ಸ್ನೇಹಿತೆಯೊಬ್ಬಳನ್ನ ಕರ್ಕೊಂಡು ಕಾರಿನಲ್ಲಿ ಮಾಗಡಿಗೆ ಬಂದಿದ್ದ ದಿವ್ಯಾ. ಕಳೆದ ಸೋಮವಾರ ಮಾಗಡಿ ಕೋರ್ಟ್ಗೆ ಹೋಗಿದ್ದ ದಿವ್ಯಾ ಮತ್ತು ಉಮೇಶ್ ಅವತ್ತು ದಾಖಲಾತಿ ಸರಿ ಅಲ್ಲ ಅಂತ ಅರ್ಜಿ ಸ್ವೀಕಾರ ಆಗಿರಲಿಲ್ಲ. ಇದು ಉಮೇಶ್ಗೆ ಲಾಭವಾಗಿತ್ತು. ಆದ್ರೆ ದಿವ್ಯಾ ಜೊತೆಯಲ್ಲಿ ಬಂದ ಸ್ನೇಹಿತೆಯಿಂದ ಉಮೇಶ್ಗೆ ಕಂಟಕವಾಗಿತ್ತು.
ಇದನ್ನೂ ಓದಿ: ಮಗನಿಂದಲೇ ತಂದೆಯ ಕೊಲೆ.. ಮಚ್ಚಿನಿಂದ ಕೊಚ್ಚಿ ಸಾಯಿಸಿದ ದುರುಳ
ಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಬೈಕ್ನಲ್ಲಿ ಕರ್ಕೊಂಡು ಹೋಗಿದ್ದ
ಹೀಗಾಗಿ ಮತ್ತೆ ಪ್ಲಾನ್ ಮಾಡಿದ್ದ ಉಮೇಶ ಇವತ್ತು ನನ್ನ ಜೊತೆಯಲ್ಲೇ ಇರು ದಾಖಲಾತಿ ಸರಿ ಮಾಡಿಸೋಣ ಅಂದಿದ್ದ. ಹೀಗಾಗಿ ಸ್ನೇಹಿತರನ್ನ ವಾಪಸ್ ಬೆಂಗಳೂರಿಗೆ ಕಳಿಸಿಕೊಟ್ಟಿದ್ದ. ಅದ್ರಂತೆ ದಿವ್ಯಾಳಿಗೆ ಸಂಜೆ ತನಕ ಇದ್ದು ಏನ್ ಮಾಡೋದು ಬೆಟ್ಟಕ್ಕೆ ಹೋಗಿ ಬರೋಣ ಬಾ ಅಂತ ಕರ್ಕೊಂಡು ಹೋಗಿದ್ದ. ಅದ್ರಂತೆ ಬೈಕ್ನಲ್ಲಿ ಹೆಂಡತಿಯನ್ನ ಹೂಜಗಲ್ಲು ಬೆಟ್ಟಕ್ಕೆ ಕರ್ಕೊಂಡು ಹೋಗಿದ್ದ. ಆದ್ರೆ ದಾರಿ ಮಧ್ಯೆ ಬೈಕ್ ಕೆಟ್ಟು ಹೋಗಿದೆ. ಆಗ ಸ್ನೇಹಿತ ಬಲರಾಮ ಎಂಬಾತನ ಬಳಿ ವಾಪಸ್ ಬಂದು ಬೈಕ್ ತೆಗೆದುಕೊಂಡು ಹೋಗಿದ್ದಾನೆ.
ಕುತ್ತಿಗೆಗೆ ವೇಲ್ ಬಿಗಿದು ಪತ್ನಿ ಜೀವ ತೆಗೆದಿದ್ದಿ ಕಿರಾತಕ ಪತಿ
ಕೊಲೆಗೆ ಸ್ಕೆಚ್ ಹಾಕಿದ್ದ ಉಮೇಶ್ ಅದಾಗಲೇ ಬೆಟ್ಟದಲ್ಲಿ ನಾಲ್ಕು ಸ್ನೇಹಿತರನ್ನ ರೆಡಿ ಮಾಡಿದ್ದ. ದಿವ್ಯಾ ಗಂಡನ ಜೊತೆ ಬರುತ್ತಲೇ ಉಮೇಶ್ ಮತ್ತು ಆತನ ನಾಲ್ಕು ಜನ ಸ್ನೇಹಿತರು ಸೇರಿ ಕುತ್ತಿಗೆಗೆ ವೇಲ್ ಬಿಗಿದು ಹತ್ಯೆ ಮಾಡಿದ್ದಾರೆ.ಉಮೇಶ್ ಸೇರಿ ಐದು ಜನ, ಹೂಜಿಗಲ್ಲು ಬೆಟ್ಟದಿಂದ ಚಿಲೂರು ಬೆಟ್ಟಕ್ಕೆ ನಾಲ್ಕು ಕೀಲೋ ಮೀಟರ, ಬಲರಾಮ ಕಂಪ್ಲೇಟ್ ಆಧಾರದ ಮೇಲೆ ಉಮೇಶ ಮೊಬೈಲ್ ಟ್ರಾಪ್ ಮಾಡ್ದಾಗ ಈ ಮೂರು ಜನ ಮಾಗಡಿಯಲ್ಲಿರೋದು ಗೊತ್ತಾಗುತ್ತೆ.
ಇದನ್ನೂ ಓದಿ: ಮುರಿದು ಬಿದ್ದ ಪ್ರೀತಿ.. ರೈಲ್ವೇ ಟ್ರ್ಯಾಕ್ನಲ್ಲಿ ಪ್ರಾಣಬಿಟ್ಟ ಯುವತಿ
ಬೆಟ್ಟ ರೀಚ್ ಆಗ್ತಿದ್ದಂತೆ ಉಮೇಶ್ ರಾಕ್ಷಸನಾಗಿ ಬದಲಾಗಿಬಿಟ್ಟಿದ್ದ. ಯಾಕಂದ್ರೆ ಹೆಂಡತಿಯನ್ನೇ ಕೊಲ್ಲಲೇಬೇಕು ಅಂತಲೇ ಬೆಟ್ಟಕ್ಕೆ ಕರ್ಕೊಂಡು ಬಂದಿದ್ದ. ಎಲ್ಲವೂ ಅಂದುಕೊಂಡತೆ ನಡೆದಿತ್ತು. ಈ ಮಧ್ಯೆ ನಾಲ್ಕು ಜನ ಸ್ನೇಹಿತರನ್ನ ಸಹ ಕರೆಸಿಕೊಂಡಿದ್ದ. ಹೆಂಡತಿ ರೀಲ್ಸ್ ಕಾಟಕ್ಕೆ ಬೇಸತ್ತು ಹೋಗಿದ್ದ ಉಮೇಶ್ ಕೊನೆಗೆ ಆಕೆ ಕುತ್ತಿಗೆ ವೇಲ್ ಬಿಗಿದು ಜೀವ ತೆಗೆದುಬಿಟ್ಟಿದ್ದ. ಕೊರಳಿಗೆ ತಾಳಿ ಕಟ್ಟಿದವನೆ ಕೊರಳು ಬಿಗಿದು ಉಸಿರು ನಿಲ್ಲಿಸಿಬಿಟ್ಟಿದ್ದ. ಇಷ್ಟೆ ಅಲ್ಲ ಹೂಜುಗಲ್ಲ ಬೆಟ್ಟದಲ್ಲಿದ್ದ ದಿವ್ಯಾ ಮೃತದೇಹವನ್ನು ನಾಲ್ಕು ಕೀ ಮೀಟರ್ವರೆಗೆ ಹೊತ್ತೊಯ್ದು ಪಕ್ಕದಲ್ಲಿದ್ದ ಚಿಲೂರು ಬೆಟ್ಟದಲ್ಲಿ ಹೂತು ಹಾಕಿದ್ರು.
ಇದನ್ನೂ ಓದಿ: ಹತ್ಯೆಯಾದ ಮೇಲೂ ಅತ್ಯಾಚಾರ.. ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ 10 ಸ್ಫೋಟಕ ಸತ್ಯಗಳು ಇಲ್ಲಿವೆ
ಉಮೇಶ್ ಅಂದುಕೊಂಡಂತೆ ನಡೆದಿತ್ತು. ಹಾಗಾಗಿ ಹೆಂಡತಿ ಕಾಟ ತಪ್ತೋ ಅಂತ ಎಣ್ಣೆ ಕುಡಿದು ಫುಲ್ ಟೈಟಾಗಿದ್ದಾನೆ. ಎಣ್ಣೆ ಮತ್ತಲ್ಲೇ ಫ್ರೆಂಡ್ ಕೊಟ್ಟಿದ್ದ ಬೈಕ್ ವಾಪಸ್ ಕೊಡೋಕೆ ಹೋಗಿದ್ದಾನೆ ಆಗ್ಲೇ ನೋಡಿ ಈ ಉಮೇಶ್ನ ಕೊಲೆ ಕರಾಮತ್ತು ಬಯಲಾಗಿದ್ದು. ಯಾಕಂದ್ರೆ ಉಮೇಶನ ಸ್ನೇಹಿತ ಬಲರಾಮ ಬೈಕ್ ಕೊಡುವಾಗ ಜೊತೆಯಲ್ಲಿ ಹೆಂಡತಿಯನ್ನ ನೋಡಿದ್ದ.
ಆದ್ರೆ ವಾಪಸ್ ಬೈಕ್ ಕೊಡುವಾ ಹೆಂಡತಿ ಇರಲಿಲ್ಲ. ಹಾಗಾಗಿ ಬೈಕ್ ವಾಪಸ್ ಕೊಡುವಾಗ ಈ ಬಲರಾಮ ಉಮೇಶನಿಗೆ ಹೆಂಡತಿ ಎಲ್ಲಿ ಅಂತ ಕೇಳಿದ್ದಾನೆ. ಈ ಉಮೇಶ ಕುಡಿದ ನಶೆಯಲ್ಲಿ ಅವಳ ಕಥೆ ಮುಗಿಸಿದ್ದೀನಿ ಅಂತ ಸತ್ಯ ಕಕ್ಕಿಬಿಟ್ಟಿದ್ದಾನೆ. ಈ ವಿಚಾರ ಗೊತ್ತಾಗ್ತಿದ್ದಂತೆ ಬಾಲರಾಜ ಮಾಗಡಿ ಠಾಣೆಗೆ ಹೋಗಿ ಕಂಪ್ಲೇಟ್ ಕೊಟ್ಟಿದ್ದಾನೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಉಮೇಶನ ಮೊಬೈಲ್ ಟ್ರೇಸ್ ಮಾಡಿ ಘಟನೆ ವೇಳೆ ಉಮೇಶ್ ಜೊತೆಗಿದ್ದ ನಾಲ್ಕು ಜನರನ್ನ ಅರೆಸ್ಟ್ ಮಾಡಿದ್ದಾರೆ. ಅತ್ತ ಕಂಪ್ಲೇಟ್ ವಿಚಾರ ಗೊತ್ತಾಗ್ತಿದ್ದಂತೆ ಉಮೇಶ್ ಎಸ್ಕೇಪ್ ಆಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ