newsfirstkannada.com

11 ದಿನಕ್ಕೆ 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ; ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಕೋಟಿ?

Share :

Published February 1, 2024 at 8:26pm

Update February 1, 2024 at 8:27pm

    ಅಯೋಧ್ಯೆ ರಾಮಮಂದಿರಕ್ಕೆ ಪ್ರತಿನಿತ್ಯ 2 ಲಕ್ಷ ಭಕ್ತರು ಆಗಮನ

    ಆನ್‌ಲೈನ್ ಮೂಲಕವೇ 3.50 ಕೋಟಿ ರೂಪಾಯಿ ದೇಣಿಗೆ

    ಕಾಣಿಕೆಗಾಗಿ ರಾಮಮಂದಿರದ ಆವರಣದಲ್ಲಿ 4 ಹುಂಡಿಗಳ ವ್ಯವಸ್ಥೆ

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಯಾಗಿ 11 ದಿನಗಳೇ ಕಳೆದಿದೆ. ಪ್ರತಿನಿತ್ಯ ಲಕ್ಷಾಂತರ ರಾಮನ ಭಕ್ತರು ರಾಮಮಂದಿರಕ್ಕೆ ಆಗಮಿಸುತ್ತಿದ್ದು, ಬಾಲರಾಮನ ಮೂರ್ತಿ ನೋಡಿ ಧನ್ಯರಾಗುತ್ತಿದ್ದಾರೆ. ಜನವರಿ 22ರಂದು ರಾಮಮಂದಿರವನ್ನು ಉದ್ಘಾಟನೆ ಮಾಡಲಾಗಿದ್ದು ಇಲ್ಲಿಯವರೆಗೂ ಬರೋಬ್ಬರಿ 25 ಲಕ್ಷ ಜನರು ಭೇಟಿ ನೀಡಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಭಕ್ತಸಾಗರ ಒಂದು ಕಡೆಯಾದ್ರೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕೋಟ್ಯಾಂತರ ರೂಪಾಯಿ ದೇಣಿಗೆ ಕೂಡ ಹರಿದು ಬರುತ್ತಿದೆ. ಕಳೆದ 11 ದಿನದಲ್ಲಿ ರಾಮಮಂದಿರದ ಹುಂಡಿಯಲ್ಲಿ 8 ಕೋಟಿ ರೂಪಾಯಿ ಸಂಗ್ರಹವಾಗಿದ್ರೆ, ಭಕ್ತರು ಆನ್‌ಲೈನ್ ಮೂಲಕ 3.50 ಕೋಟಿ ರೂಪಾಯಿ ಅನ್ನು ರಾಮನಿಗೆ ಸಮರ್ಪಿಸಿದ್ದಾರೆ.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆಫೀಸ್‌ನ ಉಸ್ತುವಾರಿ ಪ್ರಕಾಶ್ ಗುಪ್ತಾ ಎಂಬುವವರು ಭಕ್ತರ ಕಾಣಿಕೆ ಬಗ್ಗೆ ಮಾಹಿತಿ ನಿಡಿದ್ದಾರೆ. ರಾಮಮಂದಿರದಲ್ಲಿ ನಾಲ್ಕು ಹುಂಡಿಗಳನ್ನು ಇಡಲಾಗಿದೆ. ರಾಮಲಲ್ಲಾ ಮೂರ್ತಿಯ ದರ್ಶನದ ಪಕ್ಕ, ಭಕ್ತರು ಕುಳಿತುಕೊಳ್ಳುವ ಪ್ರದೇಶದಲ್ಲಿ ಹುಂಡಿಗಳನ್ನು ಇಡಲಾಗಿದೆ. ಭಕ್ತರು ದೇಣಿಗೆ ನೀಡಲು 10 ಕೌಂಟರ್‌ಗಳನ್ನು ತೆರೆಯಲಾಗಿದೆ.

ದೇಣಿಗೆ ನೀಡುವ ಕೌಂಟರ್‌ಗಳಲ್ಲಿ ಟ್ರಸ್ಟ್‌ನ ಸಿಬ್ಬಂದಿ ದೇಣಿಗೆ ಸಂಗ್ರಹಿಸುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಈ ಕೌಂಟರ್‌ಗಳು ತೆರೆದಿರುತ್ತದೆ. ರಾಮಮಂದಿರ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಎಣಿಕೆ ಮಾಡಲು 14 ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ. ಅದರಲ್ಲಿ 11 ಮಂದಿ ಬ್ಯಾಂಕ್ ಸಿಬ್ಬಂದಿಗಳಾದ್ರೆ ಮೂವರು ದೇವಸ್ಥಾನ ಟ್ರಸ್ಟ್‌ನ ಸಿಬ್ಬಂದಿಗಳಾಗಿದ್ದಾರೆ. ಸಿಸಿಟಿವಿ ಕಣ್ಗಾವಲಿನಲ್ಲಿ ಭಕ್ತರ ಕಾಣಿಕೆ ಹಣವನ್ನು ಲೆಕ್ಕ ಮಾಡಲಾಗುತ್ತಿದೆ.

ಇದನ್ನೂ ಓದಿ: VIDEO: 31 ವರ್ಷದ ಬಳಿಕ ಜ್ಞಾನವಾಪಿ ಶಿವಲಿಂಗಕ್ಕೆ ಮೊದಲ ಪೂಜೆ; ಈ ಅದ್ಭುತ ಕ್ಷಣ ಹೇಗಿತ್ತು ಗೊತ್ತಾ?

ಈಗಲೂ ಪ್ರತಿದಿನ ಅಯೋಧ್ಯೆ ರಾಮಮಂದಿರಕ್ಕೆ 2 ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ. ಲಕ್ಷಾಂತರ ಮಂದಿ ಭಕ್ತರು ರಾಮಲಲ್ಲಾ ಮೂರ್ತಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ಮೂರ್ತಿ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

11 ದಿನಕ್ಕೆ 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ; ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಕೋಟಿ?

https://newsfirstlive.com/wp-content/uploads/2024/01/Ayodhya-Crowd.jpg

Load More