newsfirstkannada.com

ಕಳ್ಳಭಟ್ಟಿ ಸೇವಿಸಿ 25 ಮಂದಿ ಸಾವು.. 60 ಜನರು ಅಸ್ವಸ್ಥ.. ಜಿಲ್ಲಾಧಿಕಾರಿ ಎತ್ತಂಗಡಿ.. 10 ಅಧಿಕಾರಿಗಳು ಅಮಾನತು

Share :

Published June 20, 2024 at 7:35am

Update June 20, 2024 at 11:02am

  ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಭಟ್ಟಿ

  ಮಾರಾಟ ಮಾಡುತ್ತಿದ್ದ 49 ವರ್ಷದ ವ್ಯಕ್ತಿ ಅರೆಸ್ಟ್​

  ತನಿಖೆಯಿಂದ ಹೊರಬಿತ್ತು ಜನರ ಸಾವಿಗೆ ನಿಜವಾದ ಕಾರಣ

ಚೆನ್ನೈ: ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಭಟ್ಟಿ ಸೇವಿಸಿ 25 ಮಂದಿ ಸಾವನ್ನಪ್ಪಿದ ದುರ್ಘಟನೆ ತಮಿಳುನಾಡಿನ ಉತ್ತರ ಭಾಗದ ಕಲ್ಲಾಕುರಿಚಿ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 60 ಜನರು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳ್ಳಭಟ್ಟಿ ಸೇವಿಸಿ ಅಸ್ವಸ್ಥರಾದ ಜನರನ್ನು ಜಿಲ್ಲಾ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಜಿಲ್ಲಾಧಿಕಾರಿ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರಕರಣ ಸಂಬಂಧ ಕೆ.ಕನ್ನುಕುಟ್ಟಿ (49) ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತನಿಂದ ಸುಮಾರು 200 ಲೀಟರ್ ಅಕ್ರಮ ಅರಕ್‌ ಅನ್ನು ವಶಕ್ಕೆ ಪಡೆದು ತಪಾಸಣೆ ಮಾಡಲಾಗಿದೆ. ಈ ವೇಳೆ ಇದರಲ್ಲಿ ಮಾರಣಾಂತಿಕ ಮೆಥನಾಲ್ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಇಂದು ನಿರ್ಧಾರವಾಗಲಿದೆ ದರ್ಶನ್​ ಭವಿಷ್ಯ! ಮತ್ತೆ ಪೊಲೀಸ್​ ಕಸ್ಟಡಿನಾ? ಜೈಲೇ ಗತಿನಾ? 

ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದವರು ಸುದ್ದಿ ತಿಳಿದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ದುಃಖ ವ್ಯಕ್ತಪಡಿಸಿದ್ದಾರೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಹಾಳು ಮಾಡುವ ಇಂತಹ ಅಪರಾಧಗಳನ್ನು ತಡೆದು ಶಿಕ್ಷೆ ನೀಡಲಾಗುವುದು ಎಂಂದು ಹೇಳಿದ್ದಾರೆ.

ಇನ್ನು ಘಟನೆಗೆ ಕಾರಣರಾದ ಆರೋಪಿಗಳ ಬಂಧಿಸಲಾಗಿದೆ ಎಂದ ತಮಿಳುನಾಡು ಸರ್ಕಾರ ಹೇಳಿದೆ. ಮೃತರ ಕುಟುಂಬಗಳಿಗೆ ರಾಜ್ಯಪಾಲ ಆರ್.ಎನ್.ರವಿ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಪವಿತ್ರಾ ನಟ ದರ್ಶನ್ ಪತ್ನಿನಾ? ಕೋರ್ಟ್‌ಗೆ ಸಲ್ಲಿಸಿರೋ ದಾಖಲೆಯಲ್ಲಿ ಅಸಲಿ ಸತ್ಯ ರಿವೀಲ್; ಏನದು?

ಘಟನೆ ಸಂಬಂಧ ಕಲ್ಲಾಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರನ್ನ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಮತ್ತು 9 ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳ್ಳಭಟ್ಟಿ ಸೇವಿಸಿ 25 ಮಂದಿ ಸಾವು.. 60 ಜನರು ಅಸ್ವಸ್ಥ.. ಜಿಲ್ಲಾಧಿಕಾರಿ ಎತ್ತಂಗಡಿ.. 10 ಅಧಿಕಾರಿಗಳು ಅಮಾನತು

https://newsfirstlive.com/wp-content/uploads/2024/06/TN_LIQUER_1.jpg

Load More