ಅಬ್ಬಾ.. ಬಚ್ಚಿಟ್ಟಿದ್ದ ಕೋಟಿ, ಕೋಟಿ ದುಡ್ಡು; ಹಣದ ಗಂಟು ಮೂಟೆ ನೋಡಿ ಅಧಿಕಾರಿಗಳೇ ಶಾಕ್‌!

author-image
admin
Updated On
ಅಬ್ಬಾ.. ಬಚ್ಚಿಟ್ಟಿದ್ದ ಕೋಟಿ, ಕೋಟಿ ದುಡ್ಡು; ಹಣದ ಗಂಟು ಮೂಟೆ ನೋಡಿ ಅಧಿಕಾರಿಗಳೇ ಶಾಕ್‌!
Advertisment
  • ಜ್ಯೂವೆಲ್ಲರಿ ಶಾಪ್‌ನಲ್ಲಿ ಚೀಲಗಳಲ್ಲಿ ತುಂಬಿ ಇಟ್ಟಿದ್ದ ಹಣದ ರಾಶಿ
  • ದೊಡ್ಡ, ದೊಡ್ಡ ಚೀಲದಲ್ಲಿದ್ದ ಕೋಟಿ, ಕೋಟಿ ಹಣವನ್ನು ಜಪ್ತಿ ಮಾಡಿದ IT
  • ಕಂತೆ, ಕಂತೆ ಹಣದ ರಾಶಿಯನ್ನು ನೋಡಿದ ಅಧಿಕಾರಿಗಳಿಗೆ ಬಿಗ್‌ ಶಾಕ್

ಮುಂಬೈ: ಐಟಿ ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಒಂದು ಜ್ಯೂವೆಲ್ಲರಿ ಶಾಪ್‌ನಲ್ಲಿ ದೊಡ್ಡ, ದೊಡ್ಡ ಚೀಲಗಳಲ್ಲಿ ತುಂಬಿ ಇಟ್ಟಿದ್ದ ಹಣದ ರಾಶಿಯನ್ನ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ:ದಿಶಾ ಪಟಾನಿ ಗೆಳೆಯನ ಜೊತೆ ಕಾಣಿಸಿಕೊಂಡ ಹಾರ್ದಿಕ್​ ಪಾಂಡ್ಯ ಪತ್ನಿ! ಡಿವೋರ್ಸ್ ಬಗ್ಗೆ ನತಾಶಾ​ ಏನಂದ್ರು? 

ನಾಸಿಕ್‌ನ ಸುರಾನಾ ಎಂಬ ಜ್ಯೂವೆಲ್ಲರಿ ಶಾಪ್ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಜ್ಯೂವೆಲ್ಲರಿ ಶಾಪ್‌ನಲ್ಲಿ ಚೀಲಗಳಲ್ಲಿ ತುಂಬಿಟ್ಟಿದ್ದ ಕೋಟಿ, ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ.

publive-image

ಜ್ಯೂವೆಲ್ಲರಿ ಶಾಪ್‌ನಲ್ಲಿ ಬರೋಬ್ಬರಿ 26 ಕೋಟಿ ರೂಪಾಯಿ ನಗದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಜ್ಯೂವೆಲ್ಲರಿ ಶಾಪ್​ ಒಂದರಲ್ಲಿ ದೊಡ್ಡ ಚೀಲಗಳಲ್ಲಿ ತುಂಬಿ ಇಟ್ಟಿದ್ದರು.


">May 26, 2024

ಕಂತೆ, ಕಂತೆ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನಗದು ಸೇರಿ ಬರೋಬ್ಬರಿ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment