newsfirstkannada.com

ದಿಶಾ ಪಟಾನಿ ಗೆಳೆಯನ ಜೊತೆ ಕಾಣಿಸಿಕೊಂಡ ಹಾರ್ದಿಕ್​ ಪಾಂಡ್ಯ ಪತ್ನಿ! ಡಿವೋರ್ಸ್ ಬಗ್ಗೆ ನತಾಶಾ​ ಏನಂದ್ರು?

Share :

Published May 26, 2024 at 12:30pm

    ದಿಶಾ ಪಟಾನಿ ಗೆಳೆಯನ ಜೊತೆ ಡೇಟಿಂಗ್​ ಮಾಡ್ತಿದ್ದಾರಾ ನತಾಶಾ?

    ಕ್ಯಾಮೆರಾ ಕಣ್ಣಿಗೆ ಕಾಣಿಸಿದ ನತಾಶಾ ಮತ್ತು ಅಲೆಕ್ಸಾಂಡರ್​ನ ಓಡಾಟ.

    ಹಾರ್ದಿಕ್​ ಜೊತೆ ವಿಚ್ಛೇದನ ಪಡೆದರೇ ಎಂದಿದ್ದಕ್ಕೆ ನತಾಶಾ ಉತ್ತರವೇನು?

ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್​ ವಿಚ್ಛೇದನ ಸುದ್ದಿ ಹರಿದಾಡ್ತಿದೆ. ಇದರ ಬೆನ್ನಲ್ಲೆ ನತಾಶಾ, ನಟಿ ದಿಶಾ ಪಟಾನಿಯ ಗೆಳೆಯ ಅಲೆಕ್ಸಾಂಡರ್​​​​​ ಅಲೆಕ್ಸ್ಲಿಕ್​​​ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾರ್ದಿಕ್​ ಪತ್ನಿ ಮತ್ತು ಅಲೆಕ್ಸಾಂಡರ್​​​​​ ಅಲೆಕ್ಸ್ಲಿಕ್ ಇಬ್ಬರೂ ಡೇಟಿಂಗ್​​​​​​​​​ ಮಾಡುತ್ತಿದ್ದಾರೆಂದು ಹೇಳಲಾಗ್ತಿದೆ. ಇಬ್ಬರು ಓಡಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಕಾಣಿಸಿದೆ. ಇಬ್ಬರನ್ನು ಕಂಡು ಮಾಧ್ಯಮದವರು ಹಾರ್ದಿಕ್​ ಪಾಂಡ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಯನ್ನು ಆಕೆ ತಿರಸ್ಕರಿಸಿದ್ದಾರೆ. ಸುದ್ದಿ ಹಬ್ಬಿಸೋರಿಗೆ ಧನ್ಯವಾದ ಎಂದು ಹೇಳಿದ್ದಾರೆ.

View this post on Instagram

A post shared by Instant Bollywood (@instantbollywood)

ಸೆರ್ಬಿಯಾ ಟು ಬಾಲಿವುಡ್​

ನತಾಶಾ ಸ್ಟಾಂಕೋವಿಕ್​ ಭಾರತದವಳು ಅಲ್ಲ, ಸೆರ್ಬೀಯಾದವಳು. ಹಾರ್ದಿಕ್​ ಪಾಂಡ್ಯಗೆ ಆಕೆ 2018ರಲ್ಲಿ ಸಿಕ್ಕಳು. ಮುಂಬೈ ನೈಟ್​ಕ್ಲಬ್​ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು. ಪರಿಚಯ ಸ್ನೇಹವಾಗಿ ಹಾರ್ದಿಕ್​ ಮತ್ತು ನತಾಶಾ ನಡುವಿನ ಒಡನಾಟ ಜಾಸ್ತಿಯಾಯಿತು. ಮಾತ್ರವಲ್ಲದೆ ಅನೇಕರು ಇವರಿಬ್ಬರ ಓಡಾಟದ ಬಗ್ಗೆ ಅನುಮಾನವು ಹುಟ್ಟುಕೊಂಡಿತು. ಕೊನೆಗೆ 2019ರಲ್ಲಿ ಹಾರ್ದಿಕ್​ ತನ್ನ ಇನ್​ಸ್ಟಾದಲ್ಲಿ ‘ಬೆಸ್ಟ್​ ಫ್ರೆಂಡ್​’ ಎಂದು ಕರೆಯುವ ಮೂಲಕ ಇಬ್ಬರ ಸ್ನೇಹವನ್ನು ಎತ್ತಿತೋರಿಸಿದರು.

ಇದನ್ನೂ ಓದಿ: KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು? ​

2020ರಲ್ಲಿ ಹಾರ್ದಿಕ್​ ಆಕೆಗೆ ಪ್ರಪೋಸ್​​ ಮಾಡಬೇಕು ಎಂದು ಬಯಸಿದ್ದರು. ಅದರಂತೆಯೇ ಜನವರಿ 1 ರಂದು ಹಾರ್ದಿಕ್​ ಆಕೆಯನ್ನು ಪ್ರಪೋಸ್​ ಮಾಡಿದರು. ಬಳಿಕ ಇಬ್ಬರು ನಡುವಿನ ಸ್ನೇಹ ಪ್ರೀತಿಗೆ ತಿರುಗಿರುವ ವಿಚಾರ ಎಲ್ಲೆಡೆ ಹಬ್ಬಿತು. ಬಳಿಕ ಅದೇ ವರ್ಷ ಮೇ ತಿಂಗಳಿನಲ್ಲಿ ನತಾಶಾ ಗರ್ಭಿಣಿಯಾದಳು. ನಂತರ ಈ ಜೋಡಿ ಅಗಸ್ತ್ಯ ಎಂಬ ಮುಂದಾದ ಮಗನನ್ನು ಜುಲೈ ತಿಂಗಳಿನಲ್ಲಿ ಬರಮಾಡಿಕೊಂಡರು. ಮಗನ ಜನನದ ಬಳಿಕ ಹಾರ್ದಿಕ್​ ಮತ್ತು ನತಾಶಾ ಇಬ್ಬರು ಸಾಂಪ್ರದಾಯಿಕವಾಗಿ ವಿವಾಹವಾಗಲು ಬಯಸುತ್ತಾರೆ. ಫೆಬ್ರವರಿ 14, 2023ರಂದು ಉಯದಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುತ್ತಾರೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಈ ಜೋಡಿ ವಿವಾಹವಾಗುತ್ತಾರೆ. ಆದರೀಗ ಈ ಜೋಡಿ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದಿಶಾ ಪಟಾನಿ ಗೆಳೆಯನ ಜೊತೆ ಕಾಣಿಸಿಕೊಂಡ ಹಾರ್ದಿಕ್​ ಪಾಂಡ್ಯ ಪತ್ನಿ! ಡಿವೋರ್ಸ್ ಬಗ್ಗೆ ನತಾಶಾ​ ಏನಂದ್ರು?

https://newsfirstlive.com/wp-content/uploads/2024/05/Natasha-7.jpg

Load More