/newsfirstlive-kannada/media/post_attachments/wp-content/uploads/2024/07/uttara-pradesh.jpg)
ಲಕ್ನೋ: ಉತ್ತರ ಪ್ರದೇಶದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಧಾರ್ಮಿಕ ಕಾಯರ್ಕ್ರಮದಲ್ಲಿ ಕಾಲ್ತುಳಿತಕ್ಕೆ 27 ಮಂದಿ ಮೃತಪಟ್ಟಿರೋ ಘಟನೆ ಹತ್ರಾಸ್ ಜಿಲ್ಲೆಯ ಮುಘಲ್‌ಗರ್ಹಿ ಗ್ರಾಮದಲ್ಲಿ ನಡೆದಿದೆ.
ಹೌದು, ಹತ್ರಾಸ್ ಜಿಲ್ಲೆಯ ಮುಘಲ್‌ಗರ್ಹಿ ಗ್ರಾಮದಲ್ಲಿ ಸತ್ಸಂಗ ಪ್ರಾರ್ಥನಾ ಸಭೆ ನಡೆಯುತ್ತಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ 23 ಮಹಿಳೆಯರು ಕಾಲ್ತುಳಿತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತಪಟ್ಟರ ಸಂಖ್ಯೆ ಏರಿಕೆಯಾಗೋ ಸಾಧ್ಯತೆ ಇದೆ.
ಇದನ್ನೂ ಓದಿ:VIDEO: ದರ್ಶನ್ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?
ಇಲ್ಲಿಯವರೆಗೆ 27 ದೇಹಗಳನ್ನು ಎಟಾಹ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇವರಲ್ಲಿ 23 ಮಹಿಳೆಯರು, 3 ಮಕ್ಕಳು ಮತ್ತು ಓರ್ವ ಪುರುಷ ಸೇರಿದ್ದಾರೆ ಎಂದು ಇಟಾಹ್ ಎಸ್‌ಎಸ್‌ಪಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ