newsfirstkannada.com

×

ಒಂದೇ ಇನ್ನಿಂಗ್ಸ್​​ನಲ್ಲಿ 600ಕ್ಕೂ ಅಧಿಕ ರನ್.. ಮೂವರು ಶತಕ, ಡಬಲ್ ಸೆಂಚುರಿ ಮಿಸ್; ಬೆಚ್ಚಿಬಿದ್ದ ಕಿವೀಸ್

Share :

Published September 28, 2024 at 7:29am

    ಒಂದೇ ಇನ್ನಿಂಗ್ಸ್​ನಲ್ಲಿ ಬೃಹತ್ ರನ್ ಕಲೆ ಹಾಕಿದ ಬ್ಯಾಟ್ಸ್​​ಮನ್ಸ್

    ತವರಿನಲ್ಲಿ ಎದುರಾಳಿ ಟೀಮ್​ಗೆ ಮತ್ತೊಮ್ಮೆ ಶಾಕ್ ಕೊಡುತ್ತಾ..?

    ಬ್ಯಾಟ್ಸ್​ಮನ್​ಗಳ ಆರ್ಭಟಕ್ಕೆ ಔಟ್ ಮಾಡಲಾಗದೇ ಸುಸ್ತು

ಶ್ರೀಲಂಕಾ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್ ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಸೋತು ಮುಖಭಂಗ ಅನುಭವಿಸಿದೆ. 2ನೇ ಟೆಸ್ಟ್​ ಮ್ಯಾಚ್​ನಲ್ಲೂ ಕಿವೀಸ್​ಗೆ ಸೋಲುವ ಆತಂಕ ಎದುರಾಗಿದ್ದು ಲಂಕಾದ ಬ್ಯಾಟ್ಸ್​ಮನ್​ಗಳ ಎದುರು ಬೌಲರ್​ಗಳು ಬೇಸತ್ತು ಹೋಗಿದ್ದಾರೆ. ಕೇವಲ ಒಂದೇ ಒಂದು ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ 600ಕ್ಕೂ ಅಧಿಕ ರನ್​ ಗಳಿಸಿದ್ದು ಮೂವರು ಬ್ಯಾಟ್ಸ್​ಮನ್​ಗಳು ಭರ್ಜರಿ ಶತಕ ಸಿಡಿಸಿದ್ದು ಇದರಲ್ಲಿ ಡಬಲ್​ ಸೆಂಚುರಿ ಸ್ವಲ್ಪದರಲ್ಲೇ ಮಿಸ್ ಆಗಿದೆ.

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ನ್ಯೂಜಿಲ್ಯಾಂಡ್ ಬೌಲರ್ಸ್​​ ಆರಂಭದಲ್ಲೇ ಪರಾಕ್ರಮ ಮೆರೆದರು. ಲಂಕಾದ ಓಪನರ್ಸ್​ ಅನ್ನು​ ಪೆವಿಲಿಯನ್​ಗೆ ಅಟ್ಟಿದರು. ಆದರೆ ಬಳಿಕ ಬ್ಯಾಟ್ಸ್​ಮನ್​ಗಳನ್ನ ವಿಕೆಟ್​ ಪಡೆಯುವಲ್ಲಿ ಕಿವೀಸ್ ಬೌಲರ್ಸ್ ಅಕ್ಷರಶಃ ಬಳಲಿ ಬೆಂಡಾದರು ಎನ್ನಬಹುದು. ಏಕೆಂದರೆ ಕಮಿಂದ್ ಮೆಂಡೀಸ್, ಕುಸಾಲ ಮೆಂಡೀಸ್ ಹಾಗೂ ದಿನೇಶ್ ಚಾಂಡಿಮಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ್ ಮಾಡಿದ್ದಾರೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ದಿನೇಶ್ ಚಾಂಡಿಮಾಲ್ ಹಾಗೂ ಏಂಜೆಲೊ ಮ್ಯಾಥ್ಯೂಸ್ ಉತ್ತಮ ಬ್ಯಾಟಿಂಗ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ದಡಕ್ಕೆ ಮೇಲೇತ್ತಿದರು. ದಿನೇಶ್ ಚಾಂಡಿಮಾಲ್ 16 ಬೌಂಡರಿ ಸಮೇತ 116 ರನ್​ಗಳಿಸಿದ್ರೆ, ಏಂಜೆಲೊ ಮ್ಯಾಥ್ಯೂಸ್ 88 ರನ್​ ಸಿಡಿಸಿ ಔಟ್ ಆದರು. ಇವರ ನಂತರ ಬಂದ ಕಮಿಂದ್ ಮೆಂಡೀಸ್ ಕವೀಸ್​ ಪಡೆಯನ್ನು ಧೂಳೀಪಟ ಮಾಡಿ, ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ 4 ಸಿಕ್ಸ್, 16 ಫೋರ್ ಸಮೇತ 182 ರನ್​ ಗಳಿಸಿ ಔಟ್​ ಆಗದೇ ಉಳಿದರು. ಡಬಲ್ ಸೆಂಚುರಿ ಹಾದಿಯಲ್ಲಿದ್ದರು. ಆದರೆ ಕ್ಯಾಪ್ಟನ್ ಡಿಕ್ಲೇರ್ ಘೋಷಣೆ ಮಾಡಿದ್ದಾರೆ.

ಕುಸಾಲ ಮೆಂಡೀಸ್ ಕೂಡ ವೇಗವಾಗಿ ಬ್ಯಾಟ್ ಬೀಸಿದ್ದು 3 ಸಿಕ್ಸ್, 6 ಬೌಂಡರಿಯಿಂದ 106 ರನ್​ ಸಿಡಿಸಿದರು. ಈ ಮೂಲಕ ಶ್ರೀಲಂಕಾ ಮೊದಲ ಇನ್ನಿಂಗ್ಸ್​ನಲ್ಲೇ ಕೇವಲ 5 ವಿಕೆಟ್​ಗೆ 602 ರನ್​ಗಳ ಬೃಹತ್​ ಮೊತ್ತ ಪೇರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಸದ್ಯ ನ್ಯೂಜಿಲ್ಯಾಂಡ್ ಇನ್ನಿಂಗ್ಸ್​ ಆರಂಭಿಸಿದ್ದು 22ಕ್ಕೆ 2 ಮುಖ್ಯವಾದ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಪಂದ್ಯ ಲಂಕಾ ವಿನ್ ಆದ್ರೆ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ರೇಸ್​ಗೆ ತಲುಪಿದಂತೆ ಆಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಒಂದೇ ಇನ್ನಿಂಗ್ಸ್​​ನಲ್ಲಿ 600ಕ್ಕೂ ಅಧಿಕ ರನ್.. ಮೂವರು ಶತಕ, ಡಬಲ್ ಸೆಂಚುರಿ ಮಿಸ್; ಬೆಚ್ಚಿಬಿದ್ದ ಕಿವೀಸ್

https://newsfirstlive.com/wp-content/uploads/2024/09/SL_VS_NZ.jpg

Load More