newsfirstkannada.com

BREAKING: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕರ್ನಾಟಕದ ಮೂವರು ದಾರುಣ ಸಾವು

Share :

Published May 25, 2024 at 3:42pm

Update May 25, 2024 at 4:06pm

  ಕಲಬುರಗಿಯ 22 ಜನ ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ನಡೆದ ಆಕ್ಸಿಡೆಂಟ್

  ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಹೋಗುತ್ತಿದ್ದಾಗ ಅಫಘಾತ

  ಭೀಕರ ಅಪಘಾತದಲ್ಲಿ ಮೂವರು ಸಾವು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯ

ಕಲಬುರಗಿ: ಅಯೋಧ್ಯೆಯ ಯಾತ್ರೆಗೆಂದು ಹೋಗುತ್ತಿದ್ದ ವೇಳೆ ಕಲಬುರಗಿ ಮೂಲದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರೋ ಘಟನೆಯೊಂದು ನಡೆದಿದೆ. ಶಿವರಾಜ್, ಕಾಶಿನಾಥ್, ತಂಗೆಮ್ಮ ಮೃತ ದುರ್ದೈವಿಗಳು.

ಇದನ್ನೂ ಓದಿ: ಪೋರ್ಷೆ ಕಾರು ಆಕ್ಸಿಡೆಂಟ್‌ ಕೇಸ್‌ಗೆ ಹೊಸ ಟ್ವಿಸ್ಟ್.. ಮೊಮ್ಮಗನ ಉಳಿಸಲು ತಾತನ ಮೆಗಾ ಡೀಲ್‌; ಮಾಡಿದ್ದೇನು?

ಕಲಬುರಗಿಯ 22 ಜನ ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋಧ್ಯೆಗೆ ಹೊರಟಿದ್ದರು. ಇದೇ ವೇಳೆ ಅಯೋಧ್ಯೆ ಬಳಿ ತಡರಾತ್ರಿ ಲಾರಿ ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕರ್ನಾಟಕದ ಮೂವರು ದಾರುಣ ಸಾವು

https://newsfirstlive.com/wp-content/uploads/2024/05/accident17.jpg

Load More