newsfirstkannada.com

×

ಹಾರ್ಟ್ ಪ್ರಾಬ್ಲಮ್ ಇದ್ಯಾ? ಕಡ್ಡಾಯವಾಗಿ ಈ ವ್ಯಾಯಾಮ ಮಾಡಿ! ನೀವು ಓದಲೇಬೇಕಾದ ಸ್ಟೋರಿ!

Share :

Published July 21, 2024 at 5:09pm

Update July 21, 2024 at 5:10pm

    ನಿಮ್ಮ ಹೃದಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಏನು ಮಾಡಬೇಕು..?

    ನಡಿಗೆ, ಓಟ, ಯೋಗಾಸನಗಳು ಹೃದಯದ ಆರೋಗ್ಯಕ್ಕೆ ಸಹಾಯಕಾರಿ

    ನೀವು ಮಾಡಬೇಕಾದ ಮೂರು ಬಗೆಯ ವ್ಯಾಯಾಮಗಳು ಯಾವುವು..?

ಹೃದಯ ಸಂಬಂಧ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಶೈಲಿ, ಆರೋಗ್ಯದ ಬಗ್ಗೆ ಅತೀವ ನಿರ್ಲಕ್ಷ್ಯ, ವಂಶಪಾರಂಪರ್ಯ ಹೀಗೆ ಹಲವು ಕಾರಣಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಅದರಲ್ಲಿ ಹೃದಯಾಘಾತ, ಹೃದಯಸ್ತಂಭನದಂತ ಅನಾಹುತಗಳು ಇತ್ತೀಚೆಗೆ ಯುವಕ, ಯುವತಿಯರಲ್ಲಿ ಕಂಡು ಬರುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ನಿಮ್ಮ ಹೃದಯವನ್ನು ಜೋಪಾನ ಮಾಡುವುದು ನಿಮ್ಮ ಕೈಯಲ್ಲಿಯೇ ಇದೆ. ಮಿಡಿವ ಹೃದಯಕ್ಕಾಗಿ ನಾವು ಸ್ಪಲ್ಪ ದೈಹಿಕವಾಗಿ ದುಡಿಯಬೇಕಾಗುತ್ತದೆ. ಅಂದ್ರೆ ವ್ಯಾಯಾಮ ಮಾಡಬೇಕಾಗುತ್ತದೆ. ಸಾಮಾನ್ಯದಲ್ಲಿ ಸಾಮಾನ್ಯವಾದಂತ ಈ ಮೂರು ಬಗೆಯ ವ್ಯಾಯಾಮವನ್ನು ನೀವು ಮಾಡಿದರೆ ನಿಮ್ಮ ಹೃದಯ ಆರೋಗ್ಯಕರವಾಗಿ ಇರುತ್ತದೆ.

ಇದನ್ನೂ ಓದಿ: ಕೆ.ಎಲ್​​​ ರಾಹುಲ್ ಕ್ರಿಕೆಟ್​ ಬಾಳಲ್ಲಿ ಚೆಲ್ಲಾಟ.. ಗಂಭೀರ್​ಗೆ ನಾಚಿಕೆ ಆಗ್ಬೇಕು ಎಂದು ಆಕ್ರೋಶ

ಏರೋಬಿಕ್ ಎಕ್ಸಸೈಸ್​:

ಏರೋಬಿಕ್ ಎಕ್ಸೆಸೈಜ್, ಅಂದ್ರೆ ದೇಹಕ್ಕೆ ಹೆಚ್ಚು ಹೆಚ್ಚು ಆಮ್ಲಜನಕವನ್ನು ಒದಗಿಸುವಂತ ಒಂದು ವ್ಯಾಯಾಮ, ಜೋರು ನಡಿಗೆ, ಇಲ್ಲವೇ ರನ್ನಿಂಗ್, ಈಜು, ಸೈಕ್ಲಿಂಗ್ ಟೆನ್ನಿಸ್ ಆಟ ಈ ತರದ ವ್ಯಾಯಾಮಗಳು ನಿಮ್ಮ ಹಾರ್ಟ್ ಪಂಪಿಂಗ್​ನಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುತ್ತವೆ. ಇದರಿಂದಾಗಿ ನಿಮ್ಮ ಹೃದಯ ಆರೋಗ್ಯ ಮತ್ತಷ್ಟು ಸುಧಾರಿಸುತ್ತದೆ. ವಾರದಲ್ಲಿ ಕನಿಷ್ಠ 150 ಗಂಟೆಗಳಾದರೂ ಈ ತರದ ವ್ಯಾಯಾಮ ಮಾಡಬೇಕು ಇದರಿಂದ ಹೃದಯದ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಅಂತ ಹೃದಯ ತಜ್ಞರು ಹೇಳುತ್ತಾರೆ. ಇಂತಹ ವ್ಯಾಯಾಮದಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮನುಷ್ಯರು ಹೆಚ್ಚು ಹೆಚ್ಚು ಸದೃಢರಾಗಿರುತ್ತಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ತರದ ವ್ಯಾಯಾಮಗಳು ನಿಮ್ಮ ರಕ್ತಪರಿಚಲನೆಯನ್ನು ಸುಧಾರಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮಿಂದ ದೂರುವಿರುತ್ತವೆ. ಹೀಗಾಗಿ ದಿನಕ್ಕೆ ಕನಿಷ್ಠ ಅರ್ಧಗಂಟೆಯಾದ್ರೂ ಈ ರೀತಿಯ ಏರೋಬಿಕ್ ಎಕ್ಸಸೈಸ್ ಮಾಡಬೇಕು. ಕೇವಲ ಹೃದಯ ಸಂಬಂಧಿ ಕಾಯಿಗಳು ಮಾತ್ರವಲ್ಲ, ಮಧುಮೇಹ ಹಾಗೂ ಬಿಪಿಯಂತಹ ಕಾಯಿಲೆಗಳು ಕೂಡ ನಿಮ್ಮ ಸನಿಹ ಸುಳಿಯುವುದಿಲ್ಲ.

ಇದನ್ನೂ ಓದಿ: VIDEO: ರೀಲ್ಸ್​ಗಾಗಿ ವಿದ್ಯಾರ್ಥಿ ಹುಚ್ಚಾಟ.. ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ವಿಡಿಯೋ ಮಾಡಲು ಹೋಗಿ ಸಾವು!

ಪ್ರತಿರೋಧ ತರಬೇತಿ ( Resistance Training )

ಪ್ರತಿರೋಧ ತರಬೇತಿ ಅಂದ್ರೆ ರೆಸ್ಟಿಸ್ಟನ್ಸ್ ಟ್ರೇನಿಂಗ್ ಕೂಡ ದೇಹಕ್ಕೆ ತುಂಬಾ ಒಳ್ಳೆಯದು. ದಢೂತಿ ದೇಹವನ್ನು ಹೊಂದಿದವರಿಗೆ, ವಿಪರೀತ ಫ್ಯಾಟ್ ಹೊಂದಿರುವ ದೇಹದವರು ಈ ರೀತಿಯ ವ್ಯಾಯಾಮಗಳನ್ನು ಮಾಡಬೇಕು. ಇದು ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆಗೊಳಿಸುತ್ತದೆ. ದಂಡ ಸಾಮುಗಳನ್ನು ಹೊಡೆಯುವುದು, ಜಿಮ್​ನಲ್ಲಿ ಡಂಬೆಲ್ಸ್ ಬಾರ್​ಬೆಲ್ಸ್​ಗಳನ್ನು ಎತ್ತುವ ಮೂಲಕ ಪ್ರತಿರೋಧ ತರಬೇತಿಯನ್ನು ದೇಹಕ್ಕೆ ನೀಡಬಹುದು.

ಫ್ಲೆಕ್ಸಿಬ್ಲಿಟಿ ವರ್ಕೌಟ್ಸ್

ಇನ್ನೂ ಮೂರನೆಯದಾಗಿ ಫ್ಲೆಕ್ಸಿಬ್ಲಿಟಿ ವರ್ಕೌಟ್ಸ್​ ಕೂಡ ನಿಮ್ಮ ಹೃದಯದ ಆರೋಗ್ಯವನ್ನು ಜೋಪಾನ ಮಾಡುತ್ತವೆ. ಇದರಿಂದ ಎರಡು ಲಾಭಗಳಿವೆ. ಫ್ಲೆಕ್ಸಿಬ್ಲಿಟಿ ವರ್ಕೌಟ್​​ಗಳಿಂದ ಹೃದಯದ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳಬಹುದು ಹಾಗೆಯೇ ಜಾಯಿಂಟ್ ಪೇನ್, ಸ್ನಾಯು ಸೆಳೆದಂತಹ ಸಮಸ್ಯೆಗಳಿಂದ ದೂರ ಊಳಿಯಬಹುದು. ಪ್ರಾಣಾಯಾಮ, ಸೂರ್ಯನಮಸ್ಕಾರದಂತಹ ಯೋಗಗಳನ್ನು ಮಾಡುವುದರಿಂದಾಗಿ ನಮ್ಮ ದೇಹದ ಅದರಲ್ಲೂ ಹೃದಯದ ಆರೋಗ್ಯವನ್ನು ಜೋಪಾನವಾಗಿಟ್ಟುಕೊಳ್ಳಬಹುದು. ಅದರಲ್ಲೂ ಹೆಚ್ಚು ಹೆಚ್ಚು ನಡೆದಷ್ಟು ನಿಮಗಾಗಿ ನಿಮ್ಮ ಹೃದಯ ಹೆಚ್ಚು ಹೆಚ್ಚು ಮಿಡಿಯುತ್ತದೆ. ಹೀಗಾಗಿ ಹೃದಯದ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಲು, ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯಲು ಈ ಮೂರು ಬಗೆಯ ವ್ಯಾಯಾಮಗಳನ್ನು ಮಾಡಿದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಸ್ಥಿರವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ಟ್ ಪ್ರಾಬ್ಲಮ್ ಇದ್ಯಾ? ಕಡ್ಡಾಯವಾಗಿ ಈ ವ್ಯಾಯಾಮ ಮಾಡಿ! ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/07/chetty-1.jpg

Load More