newsfirstkannada.com

ಒಂದೇ ಕುಟುಂಬದ ಮೂವರ ನಿಗೂಢ ಸಾವು; ಏನಿದು ಡೆತ್ ಮಿಸ್ಟರಿ?

Share :

Published May 28, 2024 at 7:46pm

  ಮೂವರ ಸಾವು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಅನುಮಾನ

  ರಾತ್ರಿ ಊಟ ಮಾಡಿ ಮಲಗಿದ ಮೂವರು ಏಕಾಏಕಿ ಮೃತಪಟ್ಟಿದ್ದೇಕೆ?

  ಅಡುಗೆ ಮನೆಯಲ್ಲಿ ಮಗಳು, ಹಾಲ್​ನಲ್ಲಿ ಅಜ್ಜಿ, ಮೊಮ್ಮಗ ಸಾವು

ಕೊಪ್ಪಳ: ತಾಯಿ, ಮಗಳು, ಮೊಮ್ಮಗ ಮೂವರು ಒಂದೇ ಮನೆಯಲ್ಲಿದ್ದರು. ಆದರೆ ಮೂರು ಜನ ಮಂಗಳವಾರ ಬೆಳಗ್ಗೆ ಹೆಣವಾಗಿ ಸಿಕ್ಕಿದ್ದಾರೆ. ಮೂವರ ನಿಗೂಢ ಸಾವಿಗೆ ಕಾರಣ ಏನು? ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಂದೇ ಮನೆಯಲ್ಲಿ ಒಬ್ಬರು ಇಬ್ಬರಲ್ಲ ಮೂವರು ಸಾವನ್ನಪ್ಪಿದ್ದಾರೆ. ಆದ್ರೆ ಸತ್ತಿದ್ಯಾಕೆ ಅನ್ನೋದೇ ನಿಗೂಢವಾಗಿ ಉಳಿದಿದೆ. ಮೂವರ ನಿಗೂಢ ಸಾವು ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಕೊಪ್ಪಳದ ಹೊಸಲಿಂಗಾಪುರ ಗ್ರಾಮವಿದು. ಇದೇ ಗ್ರಾಮದ ರಾಜೇಶ್ವರಿ, ವಸಂತಾ ಹಾಗೂ ಮೊಮ್ಮಗ ಸಾಯಿಧರ್ಮ ತೇಜ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂರು ಜನ ರಾತ್ರಿ ಊಟ ಮಾಡಿ ಮಲಗಿದ್ರು, ಬೆಳಗೆದ್ದು ನೋಡುವಷ್ಟರಲ್ಲಿ ಮೂರು ಜನ ಹೆಣವಾಗಿ ಹೋಗಿದ್ದಾರೆ. ಆದ್ರೆ ಮೂವರ ಸಾವಿಗೆ ನಿಖರ ಕಾರಣ ಏನು ಅನ್ನೋದು ಮಾತ್ರ ಗೊತ್ತಾಗಿಲ್ಲ. ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋ ಅನುಮಾನವನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ‘ಚಂದ್ರಮುಖಿ ಪ್ರಾಣ ಸಖಿ’ ಸಿನಿಮಾ ನಿರ್ಮಾಪಕ ಸ್ವಾಗತ್​ ಬಾಬು ವಿಧಿವಶ

ವಸಂತಾ ಮಗನೇ ಮೃತ ಸಾಯಿ ಧರ್ಮ ತೇಜ. ವಸಂತಾಳ ತಾಯಿ ರಾಜೇಶ್ವರಿ. ಅಸಲಿಗೆ ಈ ವಸಂತಾಗೆ ಎರಡು ಮದುವೆಯಾಗಿತ್ತು. ಆದ್ರೆ ಈ ಮದುವೆಗೂ ಮೊದಲು ವಸಂತಾ ಹುಲಿಗಿ ಗ್ರಾಮದ ನಿವಾಸಿ ಉಮೇಶ ಎಂಬಾತನ ಜೊತೆ ಪ್ರೀತಿ ಪ್ರೇಮ ಅಂತ ಓಡಾಡಿದ್ಳು. ಆದ್ರೆ ವಸಂತಾ ಮತ್ತು ಉಮೇಶ ಪ್ರೀತಿಯನ್ನ ಮನೆಯವರು ಒಪ್ಪಿಲ್ಲ. ಮಗಳಿಗೆ ಬುದ್ಧಿ ಹೇಳಿ ಆಂಧ್ರದ ನಂದ್ಯಾಲ ನಿವಾಸಿ ಹರಿಬಾಬು ಅನ್ನೋರ ಜೊತೆ ಮದುವೆ ಮಾಡಿದ್ರು. ದುರಂತ ಏನಂದ್ರೆ ಕಟ್ಕೊಂಡ ಗಂಡನ ಜೊತೆ ವಸಂತಾ ನೆಟ್ಟಗೆ ಸಂಸಾರ ಮಾಡದೇ ತಾಯಿ ಮನೆಗೆ ಓಡೋಡಿ ಬಂದಿದ್ಳು. ವಸಂತಾ ಪ್ರೀತಿಯನ್ನ ಮನೆಯವರು ಒಪ್ಪದೇ ಆಂಧ್ರದ ವ್ಯಕ್ತಿಯೊಂದಿಗೆ ಮದುವೆ ಮಾಡಿ ಕೊಟ್ಟಿದ್ರು. ಅದಕ್ಕೆ ಸಾಕ್ಷಿಯೆಂಬತೆ ಮುದ್ದಾದ ಗಂಡು ಮಗ ಕೂಡ ಹುಟ್ಟಿದ್ದ. ಆದ್ರೆ ಮದುವೆಯಾದ ಕೆಲ ವರ್ಷಗಳ ಬಳಿಕ ವಸಂತಾಗೆ ಏನಾಗಿತ್ತೋ ಏನೋ ಗೊತ್ತಿಲ್ಲ ಗಂಡನನ್ನ ಬಿಟ್ಟು ಬಂದು ತವರು ಮನೆ ಸೇರಿದ್ಳು. ಹೀಗಾಗಿ ಕಳೆದ ಎರಡು ವರ್ಷದಿಂದ ತಾಯಿ ಮನೆಯಲ್ಲೇ ವಾಸವಿದ್ಳು. ಆದ್ರೀಗ ತಾಯಿ ಜೊತೆ ವಸಂತಾ ಹಾಗೂ ಆಕೆ ಮಗ ಕೂಡ ನಿಗೂಢವಾಗಿ ಸಾವನ್ನಪ್ಪಿರೋದು ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.

ತಾಯಿ ಮನೆ ಸೇರಿದ ವಸಂತಾಗೆ ಮತ್ತೆ ಎರಡನೇ ಮದುವೆ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಆರೀಫ್ ಎಂಬಾತನ ಜೊತೆ ವಿವಾಹ ಮಾಡಲಾಗಿತ್ತು. ಆದ್ರೆ ಮೇ 18ರಂದು ವಸಂತಾ ಎರಡನೇ ಗಂಡ ಆರೀಫ್ ದೆಹಲಿಗೆ ತೆರಳಿದ್ದಾನೆ. ಈಗ ನೋಡಿದ್ರೆ ಮೂರು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಇದು ಆಕಸ್ಮಿಕ ಸಾವಲ್ಲ ಕೊಲೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅಡುಗೆ ಮನೆಯಲ್ಲಿ ವಸಂತಾ ಸಾವನ್ನಪ್ಪಿದ್ರೆ, ಹಾಲ್​ನಲ್ಲಿ ವಸಂತಾ ತಾಯಿ ಮತ್ತು ಆಕೆ ಮಗ ಬಿದ್ದಿದ್ದಾರೆ. ಮಗನ ಬಾಯಲ್ಲಿ ರಕ್ತ ಬೇರೆ ಬಂದಿದೆ. ತಾಯಿ ಕುತ್ತಿಗೆ ವೇಲ್ ಬಿಗಿಯಲಾಗಿದೆ.

ಇದನ್ನೂ ಓದಿ: IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!

ಹೀಗಾಗಿ ಇದು ಸಂಶಯಾಸ್ಪದ ಸಾವು. ಏನಾಗಿದೆ ಅನ್ನೋದು ನಮಗೂ ಗೊತ್ತಿಲ್ಲ ಮೂವರ ಸಾವಿನ ಬಗ್ಗೆ ತನಿಖೆ ಆಗ್ಬೇಕು ಅಂತ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇನ್ನೊಂದೆಡೆ ವಸಂತಾ ಮತ್ತು ತಾಯಿ ರಾಜೇಶ್ವರಿ ಬ್ಯಾಂಕ್​ನಿಂದಲೂ ಸಾಲ ಪಡೆದಿದ್ರಂತೆ. ಕುಟುಂಬ ಸಮಸ್ಯೆಗಳಿಂದ ಚಿನ್ನ ಅಡವಿಟ್ಟು ಸಾಲ ಮಾಡಿದ್ರಂತೆ. ಸಾಲು ತೀರಿಸುವ ಸಲುವಾಗಿ ನೋಟಿಸ್ ಕೂಡ ಬಂದಿದಂತೆ. ಹೀಗಾಗಿ ಈ ಆಯಾಮದಲ್ಲೂ ಕೂಡ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಮೂವರ ನಿಗೂಢ ಗ್ರಾಮದಲ್ಲಿ ಆತಂಕದ ವಾತವರಣ ನಿರ್ಮಾಣವಾಗುವಂತೆ ಮಾಡಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್ ಎಸ್ ಎಲ್ ತಂಡ ಕೂಡ ಮಾಹಿತಿ ಕಲೆ ಹಾಕಿದ್ದಾರೆ. ವರದಿ ಬಂದ್ಮೇಲೆ ಮೂವರು ಸಾವಿನ ಅಸಲಿ ಸತ್ಯ ಏನು ಅನ್ನೋದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಕುಟುಂಬದ ಮೂವರ ನಿಗೂಢ ಸಾವು; ಏನಿದು ಡೆತ್ ಮಿಸ್ಟರಿ?

https://newsfirstlive.com/wp-content/uploads/2024/05/death69.jpg

Load More