newsfirstkannada.com

IPL ಫೈನಲ್​​ನಲ್ಲಿ WPL ಘಟನೆಗಳು ಸೇಮ್ ಟು ಸೇಮ್​.. ನೀವು ನಂಬಲಾಗದ ಐದು ಅಚ್ಚರಿಗಳು..!

Share :

Published May 28, 2024 at 1:51pm

Update May 29, 2024 at 6:22am

    WPLನಲ್ಲಿ ಆಗಿದ್ದೇ ಇಲ್ಲಿಯೂ ಆಗಿದೆ, ಏನದು..?

    ಮೇ 26 ರಂದು ಐಪಿಎಲ್​ ಫೈನಲ್ ಪಂದ್ಯ ನಡೆದಿತ್ತು

    ನಿಮಗೆ ನಂಬೋಕೆ ಅಸಾಧ್ಯ ಅಂತಹ ಸಂಗತಿ ಮತ್ತೆ ಆಗಿದೆ

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​ ಕೊನೆಗೊಂಡಿದೆ. ಮೇ 26 ರಂದು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್​ 8 ವಿಕೆಟ್​ಗಳಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಸೋಲಿಸಿತು. ಈ ಮೂಲಕ ಕೆಕೆಆರ್​ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಇದಕ್ಕೂ ಮೊದಲು ಕೆಕೆಆರ್​ 2012, 2014ರಲ್ಲಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಸನ್​ ರೈಸರ್ಸ್​ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ.

ಇದನ್ನೂ ಓದಿ:ಅತ್ತೆ ಮನೆಗೆ ಬಂದು ಪತ್ನಿ ಮೇಲೆ ಗುಂಡು ಹಾರಿಸಿದ; ತಪ್ಪಿಸಿಕೊಂಡು ಓಡಿ ಹೋದ ಹೆಂಡತಿ.. ಆಮೇಲೆ ಆಗಿದ್ದೇ ಬೇರೆ..!

ಈ ವರ್ಷ ನಡೆದ ಐಪಿಎಲ್ ಹಾಗೂ ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ಕೆಲವು ಕಾಕತಾಳೀಯ ಎಂಬಂತೆ ಕೆಲವು ಘಟನೆಗಳು ನಡೆದಿದೆ. ಮೊನ್ನೆ ನಡೆದ ಫೈನಲ್ ಪಂದ್ಯವು ಮಹಿಳಾ ಪ್ರೀಮಿಯರ್​​ನಲ್ಲಿ ನಡೆದ ಕೆಲವು ಸಂಗತಿಗಳಿಗೆ ಸಾಮ್ಯತೆ ಇದ್ದವು.

ಏನವು..?

  • ಐಪಿಎಲ್ 2024​​ ಫೈನಲ್​ನಲ್ಲಿ ಒಂದು ತಂಡದ ನಾಯಕ ಭಾರತೀಯ (ಶ್ರೇಯಸ್ ಅಯ್ಯರ್), ಇನ್ನೊಂದು ತಂಡದ ನಾಯಕ ಆಸ್ಟ್ರೇಲಿಯನ್ (ಪ್ಯಾಟ್ ಕಮ್ಮಿನ್ಸ್​). WPL 2024 ಫೈನಲ್​​ನಲ್ಲಿಯೂ ಇದೇ ಸಂಭವಿಸಿದೆ. ಅಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್​ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಸ್ಮೃತಿ ಮಂದಾನ ಆರ್​ಸಿಬಿ ನಾಯಕತ್ವ ವಹಿಸಿದ್ದರು.
  • WPL 2024 ಫೈನಲ್​ನಲ್ಲಿ ಆಸ್ಟ್ರೇಲಿಯಾದ ನಾಯಕಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊನ್ನೆ ನಡೆದ ಪಂದ್ಯದಲ್ಲೂ ಕಮ್ಮಿನ್ಸ್​ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು.
  • WPL 2024 ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ 18.3 ಓವರ್​ಗಳಲ್ಲಿ 113 ರನ್​​ಗಳಿಗೆ ಆಲೌಟ್ ಆಗಿತ್ತು. ಐಪಿಎಲ್​​ನಲ್ಲಿ ಹೈದರಾಬಾದ್​​ 18.3 ಓವರ್​ಗಳಲ್ಲಿ 113ರನ್​ಗಳಿಗೆ ಸೀಮಿತವಾಯಿತು. ಅಂದರೆ ಎರಡೂ ಫೈನಲ್​ಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡವು ಸಮಾನ ಸಂಖ್ಯೆಯ ರನ್​ಗಳಿಸಿದ್ದವು. ಸಮಾನ ಸಂಖ್ಯೆಯ ಎಸೆತಗಳನ್ನು ಆಡಿದ್ದವು.
  • WPL 2024 ಫೈನಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು 8 ವಿಕೆಟ್​ಗಳಿಂದ ಗೆದ್ದಿತ್ತು. ಐಪಿಎಲ್​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್​ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.
  • ಭಾರತೀಯ ನಾಯಕಿ (ಸ್ಮೃತಿ ಮಂದಾನ) WPL 2024ರ ಟ್ರೋಫಿಯನ್ನು ಎತ್ತಿದರು. ಐಪಿಎಲ್​​2024ರಲ್ಲಿ ಭಾರತೀಯ ನಾಯಕ (ಶ್ರೇಯಸ್ ಅಯ್ಯರ್) ಟ್ರೋಫಿ ಎತ್ತಿ ಹಿಡಿದರು.

ಇದನ್ನೂ ಓದಿ:ಕುಂಕುಮ ಕುತೂಹಲ..! ವಿಡಿಯೋ ಬಿಡುಗಡೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಗ್ಗೆ ಹೆಚ್ಚಿದ ಈ ಅನುಮಾನ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL ಫೈನಲ್​​ನಲ್ಲಿ WPL ಘಟನೆಗಳು ಸೇಮ್ ಟು ಸೇಮ್​.. ನೀವು ನಂಬಲಾಗದ ಐದು ಅಚ್ಚರಿಗಳು..!

https://newsfirstlive.com/wp-content/uploads/2024/05/SHREYANKA-PATIL-1.jpg

Load More