newsfirstkannada.com

ತುಮಕೂರಲ್ಲಿ ರಾತ್ರೋರಾತ್ರಿ ಭಯಾನಕ ಘಟನೆ.. ಸುಟ್ಟ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ‌

Share :

Published March 22, 2024 at 4:19pm

Update March 22, 2024 at 4:20pm

    ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು

    ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಗೆ ಕಾರು ತಳ್ಳಿರುವ ಶಂಕೆ

    KA 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಕಾರು

ತುಮಕೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿರುವ ಭಯಾನಕ ಘಟನೆ ತಾಲೂಕಿನ ಕುಚ್ಚಂಗಿ ಕೆರೆ ಬಳಿ ನಡೆದಿದೆ. ತಡರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿರೋ ಶಂಕೆ ವ್ಯಕ್ತವಾಗಿದೆ. KA 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಎಸ್ ಪ್ರೆಸ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಇದನ್ನು ಓದಿ: ಕೊಯಮತ್ತೂರು ಕುರುಕ್ಷೇತ್ರ.. ಅಣ್ಣಾಮಲೈಯನ್ನ ಬಿಜೆಪಿ ಕಣಕ್ಕಿಳಿಸಿದ್ದು ಯಾಕೆ? ಕಾರಣ ರಣರೋಚಕ!

ಕಾರಿನಲ್ಲಿ ಮೃತಪಟ್ಟ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಗೆ ಕಾರು ತಳ್ಳಿರಬಹುದು ಎಂದು ಶಂಕಿಸಲಾಗಿದೆ. ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತುಮಕೂರು ಎಸ್​ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲೇ ಪೊಲೀಸರು ಬೀಡು ಬಿಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಮಕೂರಲ್ಲಿ ರಾತ್ರೋರಾತ್ರಿ ಭಯಾನಕ ಘಟನೆ.. ಸುಟ್ಟ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ‌

https://newsfirstlive.com/wp-content/uploads/2024/03/death-2024-03-22T153215.171.jpg

Load More