newsfirstkannada.com

ಅಸಲಿ ಮ್ಯಾಟ್ರು ಬಿಚ್ಚಿಟ್ಟ ಚಂದನ್, ನಿವೇದಿತಾ.. ಮೂರನೇ ವ್ಯಕ್ತಿಯಿಂದ ಅಲ್ಲ; ಡಿವೋರ್ಸ್‌ಗೆ 3 ಕಾರಣ; ಏನದು?

Share :

Published June 10, 2024 at 10:15pm

Update June 10, 2024 at 10:17pm

  ಕೊನೆಗೂ ವಿಚ್ಛೇದನಕ್ಕೆ ಅಸಲಿ ಮ್ಯಾಟ್ರು ಬಿಚ್ಚಿಟ್ಟ ಮಾಜಿ ದಂಪತಿ

  ಚಂದನ್ ಶೆಟ್ಟಿ ಬಳಿ ನಿವೇದಿತಾ ಜೀವನಾಂಶಕ್ಕೆ ಹಣ ಕೇಳಿದ್ರಾ?

  3ನೇ ವ್ಯಕ್ತಿ ಪ್ರವೇಶದಿಂದ ಹೀಗಾಯ್ತು ಅನ್ನೋ ಮಾತಿಗೆ ಹೇಳಿದ್ದೇನು?

ಚಂದನ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್​ ಬಳಿಕ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಚಂದನ್,​ ನಿವೇದಿತಾ ವಿಚ್ಛೇದನಕ್ಕೆ ಅದು ಕಾರಣ, ಇದು ಕಾರಣ ಎಂಬೆಲ್ಲ ಚರ್ಚೆಗಳು ನಡೀತಿದ್ದವು. ಇವತ್ತು ಧಿಡೀರ್​ ಸುದ್ದಿಗೋಷ್ಟಿ ನಡೆಸಿದ ಈ ಬಿಗ್​ಬಾಸ್​ ಜೋಡಿ, ವಿಚ್ಛೇದನದ ಹಿಂದಿನ ಅಸಲಿ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಮೂರನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

ವಿಭಿನ್ನ ಜೀವನ ಶೈಲಿಯೇ ವಿಚ್ಛೇದನಕ್ಕೆ ಕಾರಣ
ಅಸಲಿ ಮ್ಯಾಟ್ರು ಬಿಚ್ಚಿಟ್ಟ ‘ಬಿಗ್ ಬಾಸ್’ ದಂಪತಿ
ಬಿಗ್​ಬಾಸ್​ ಮನೆಯಲ್ಲಿ ಬೊಂಬೆ ಬೊಂಬೆ ಎಂದು ಸಾಂಗ್​ ಹೇಳ್ತಾ ನಿವೇದಿತಾ ಗೌಡಳ ಮನಸ್ಸು ಗೆದ್ದಿದ್ದ ಱಪರ್​ ಚಂದನ್​ ಶೆಟ್ಟಿ, ಬಳಿಕ ದಸರಾ ಸಂಭ್ರಮದಲ್ಲಿ ಪ್ರಮೋಸ್​ ಮಾಡಿ.. ನಂತರ ಇಬ್ಬರೂ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಈ ಕ್ಯೂಟ್​ ಕಪಲ್​ ವಿಚ್ಚೇದನ ಪಡೆದುಕೊಳ್ತಾರೆ ಎಂದು ಯಾರೂ ಊಹಿಸಿರಲಿಲ್ಲ.. ಆದ್ರೆ, ಏಕಾಏಕಿ ಅವರು ಡಿವೋರ್ಸ್ ಘೋಷಿಸಿದಾಗ ಎಲ್ಲರಿಗೂ ಶಾಕ್​ ಆಗಿತ್ತು. ಯಾಕೆ ವಿಚ್ಛೇದನ ಪಡೆದ್ವಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಾರಣ ಕೊಟ್ಟೂ, ಈ ಬಗ್ಗೆ ಜನರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ವು. ದೂರಾದ ಬಳಿವೂ ಇಬ್ಬರೂ ಇವತ್ತು ಜಂಟಿ ಸುದ್ದಿ ಗೋಷ್ಟಿ ನಡೆಸಿ ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ.

ಎಲ್ಲಾ ವದಂತಿಗಳಿಗೂ ತೆರೆ ಎಳೆದ ‘ಚಂದನ’ದ ‘ಬೊಂಬೆ’
ವಿಚ್ಛೇದನದ ಸುದ್ದಿ ಹೊರ ಬೀಳುತ್ತಿದ್ದಂತೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣ ಏನೆಂದು ಸಾರ್ವಜನಿಕರ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು. ಹಾಗೂ ಹಲವು ವಂದತಿಗಳೂ ಕೇಳಿ ಬಂದಿದ್ದವು. ವಿಚ್ಛೇದನದ ಬಳಿಕವೂ ಜಂಟಿಯಾಗಿ ಸುದ್ದಿಗೋಷ್ಟಿಯಲ್ಲಿ ಅಸಲಿ ಕಾರಣವನ್ನು ರಾಜ್ಯದ ಜನತೆಯ ಮುಂದೆ ಬಹಿರಂಗ ಪಡೆಸಿದ್ದಾರೆ. ಇಬ್ಬರದ್ದೂ ವಿಭಿನ್ನ ಜೀವನ ಶೈಲಿ. ಹೊಂದಾಣಿಕೆ ಆಗದ ಕಾರಣ ಕಾನೂನು ಪ್ರಕಾರ ಇಬ್ಬರೂ ವಿಚ್ಚೇಧನ ಪಡೆದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

ಜೀವನಾಂಶದ ವದಂತಿಗೆ ಬ್ರೇಕ್​ ಹಾಕಿದ ಚಂದನ್​ ಶೆಟ್ಟಿ!
ಚಂದನ್​ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಬಳಿಕ ಜೀವನಾಂಶ ಕೇಳಿದ್ದಾರೆ. 3ನೇ ವ್ಯಕ್ತಿ ಪ್ರವೇಶದಿಂದ ಹೀಗಾಯ್ತು. ಚಂದನ್​ ಡಿಪ್ರೇಷನ್​ಗೆ ಹೋಗಿದ್ದಾರೆ ಎಂಬೆಲ್ಲ ಸುದ್ದಿಗಳು ಹರಿದಾಡಿದ್ದವು. ಇದೆಲ್ಲದಕ್ಕೂ ಚಂದನ್​ ಶೆಟ್ಟಿ, ಸ್ಪಷ್ಟನೆ ನೀಡುವ ಮೂಲಕ ಬ್ರೇಕ್​ ಹಾಕಿದ್ದಾರೆ.

ಚಂದನ್​ ಶೆಟ್ಟಿ ಸ್ನೇಹಿತ ಎಂದು ಹೇಳಿಕೊಂಡು ಯುವಕನೊಬ್ಬ, ನಿವೇದಿತಾ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದ. ಈ ಆರೋಪವನ್ನು ಬಿಗ್​ಬಾಸ್​ ಜೋಡಿ ತಳ್ಳಿ ಹಾಕಿದೆ.

ಸುಳ್ಳು ಸುದ್ದಿ ಹಬ್ಬಿಸುವವರಿಗೆ ಖಡಕ್​ ಎಚ್ಚರಿಕೆ!
ಚಂದನದ ಬೊಂಬೆಯ ವಿಚ್ಚೇಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ಕಾರಣ ಇಬ್ಬರೂ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಇನ್ಮುಂದೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕೋದಾಗಿ ನಿವೇದಿತಾ, ಚಂದನ್​ ಶೆಟ್ಟಿ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಚಂದನ್,​ ನಿವೇದಿತಾ ನೂರ್ಕಾಲ ಜೊತೆ ಜೊತೆಯಲ್ಲಿ ಕೂಡಿ ಬಾಳ್ತಾರೆ ಎಂದು ರಾಜ್ಯದ ಜನತೆ ಭಾವಿಸಿದ್ದರು. ಆದ್ರೆ ಆಗಿರೋದೇ ಬೇರೆ. ಇದೀಗ ಇವರ ವಿಚ್ಛೇದನ ವಿಚಾರವಾಗಿ ಸೃಷ್ಟಿಯಾಗಿದ್ದ ಎಲ್ಲ ಗೊಂದಲಗಳಿಗೂ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಲಿ ಮ್ಯಾಟ್ರು ಬಿಚ್ಚಿಟ್ಟ ಚಂದನ್, ನಿವೇದಿತಾ.. ಮೂರನೇ ವ್ಯಕ್ತಿಯಿಂದ ಅಲ್ಲ; ಡಿವೋರ್ಸ್‌ಗೆ 3 ಕಾರಣ; ಏನದು?

https://newsfirstlive.com/wp-content/uploads/2024/06/chandan-shetty-1.jpg

Load More