newsfirstkannada.com

ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

Share :

Published June 10, 2024 at 8:27pm

  ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ನಟ ಯುವ ರಾಜ್​ಕುಮಾರ್

  ಅಣ್ಣಾವ್ರ ಕುಟುಂಬದಲ್ಲಿ ಇದು ಮೊಟ್ಟ ಮೊದಲ ಡಿವೋರ್ಸ್ ಕೇಸ್

  ಶ್ರೀದೇವಿಯಿಂದ ದೂರಾಗುವ ನಿರ್ಧಾರ ಮಾಡಿರೋದು ದೊಡ್ಡ ಶಾಕ್!

ದೊಡ್ಮನೆ ಅಂದ್ರೆ ಆದರ್ಶಗಳಿಗೆ ಮತ್ತೊಂದು ಹೆಸರು. ಆದ್ರೀಗ ಇಂಥಾ ದೊಡ್ಮನೆ ಯುವ ರಾಜ್​ಕುಮಾರ್ ಡಿವೋರ್ಸ್ ವಿಚಾರ ಕಂಪನ ಸೃಷ್ಟಿ ಮಾಡಿದೆ. ದೊಡ್ಮನೆಯಲ್ಲಿ ಮೊಟ್ಟ ಮೊದಲ ಡಿವೋರ್ಸ್‌ ಕೇಸ್‌ ಅಭಿಮಾನಿಗಳಿಗೂ ಆತಂಕ ತಂದೊಡ್ಡಿದೆ. ಅಷ್ಟಕ್ಕೂ ಯುವ ರಾಜಕುಮಾರ್‌ಗೆ ಪತ್ನಿಯಿಂದ ಮಾನಸಿಕ ಹಿಂಸೆಯಾಗಿತ್ತಾ? ಶ್ರೀದೇವಿ ಮತ್ತು ಯುವ ನಡುವೆ ಬಿರುಕು ಮೂಡಿದ್ಯಾಕೆ?.

ಸ್ಯಾಂಡಲ್​ವುಡ್ ದೊಡ್ಮನೆ ಅಂದ್ರೆ ಅಭಿಮಾನಿಗಳಿಗೆ ಇನ್ನಿಲ್ಲದ ಅಭಿಮಾನ. ದೊಡ್ಮನೆ ಅಂದ್ರೆ ಕನ್ನಡಿಗರು ಒಂದರ್ಥದಲ್ಲಿ ದೇವಸ್ಥಾನದ ರೀತಿ ನೋಡ್ತಾರೆ. ಯಾಕಂದ್ರೆ ವಿವಾದಗಳು ಇಲ್ಲದೆ ಯಾವುದೇ ವಿಚಾರದಲ್ಲಾದ್ರೂ ಅಣ್ಣಾವ್ರ ಕುಟುಂಬ ಕೊಂಚ ದೂರವೇ ಉಳಿದು ಕೊಂಡಿದೆ. ಆದ್ರೀಗ ಅಂಥಾ ದೊಡ್ಮನೆಯಿಂದ ಶಾಕಿಂಗ್ ವಿಚಾರವೊಂದು ಹೊರ ಬಿದಿದ್ದೆ. ಕನ್ನಡಿಗರು ಪೂಜಿಸುವ ಆರಾಧಿಸುವ ಕರ್ನಾಟಕ ರತ್ನ ಡಾ. ರಾಜ್​ಕುಮಾರ್ ಮೊಮ್ಮಗನ ಬಾಳಲ್ಲಿ ಬಿರುಗಾಳಿ ಎದ್ದಿದ್ದೆ ಅನ್ನೋ ಸುದ್ದಿ ಸದ್ಯ ಸಂಚಲನವನ್ನೆ ಸೃಷ್ಟಿ ಮಾಡಿದೆ.

ಇದನ್ನೂ ಓದಿ: MS ಧೋನಿಯನ್ನ ಹೊಗಳಿದ ರಿಷಬ್​ ಪಂತ್.. ಯಂಗ್ ಪ್ಲೇಯರ್ ಬಗ್ಗೆ ನಾಯಕ ರೋಹಿತ್ ಬೇಜಾರ್ ಆದ್ರಾ?

ಇದು ನಂಬಲಸಾದ್ಯ ಸತ್ಯವಾದ್ರೂ ನಂಬ್ಲೇಬೇಕು. ಯಾಕಂದ್ರೆ ಅಣ್ಣಾವ್ರ ಕುಟುಂಬ ಅಂದ್ರೆ ಆದರ್ಶಗಳಿಗೆ ನಿದರ್ಶನವಾದ ಕುಟುಂಬ. ಡಾ. ರಾಜ್​ಕುಮಾರ್, ಪಾರ್ವತಮ್ಮ, ಪುನೀತ್​ ಮತ್ತು ಅಶ್ವಿನಿ, ಶಿವಣ್ಣ-ಗೀತಾ ಹೀಗೆ ಈ ಜೋಡಿಗಳು ಹಾಲು ಜೇನಿನಂತೆ ಬದುಕಿದ ಮತ್ತು ಬದುಕುತ್ತಿರುವ ಬೆಸ್ಟ್ ಕಪಲ್ಸ್.. ಯಾಕಂದ್ರೆ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೇ ಇರೋ ಅಣ್ಣಾವ್ರ ಕುಟುಂಬಕ್ಕೆ ಯುವ ರಾಜ್​ಕುಮಾರ್ ಡಿವೋರ್ಸ್ ವಿಚಾರ ದೊಡ್ಡ ಆಘಾತ ನೀಡಿದೆ.

ಇದನ್ನೂ ಓದಿ: ಡಿವೋರ್ಸ್​ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಚಂದನ್ ಶೆಟ್ಟಿ- ನಿವೇದಿತಾ?

ಬದುಕಿದ್ರೆ ಅಣ್ಣಾವ್ರ ಮಕ್ಕಳಂತೆ ಬದುಕಬೇಕು ಅನ್ನೋ ಮಟ್ಟಿಗೆ ಜನ ಮಾತಾಡ್ತಾರೆ.. ಆದ್ರೀಗ ಇಂಥಾ ಕುಟುಂಬದಲ್ಲಿ ಮೊಟ್ಟ ಮೊದಲ ಬಾರಿಗೆ ಡಿವೋರ್ಸ್​ ಅನ್ನೋ ವಿಚಾರ ದೊಡ್ಮನೆ ಅಭಿಮಾನಿಗಳ ಬಳಗಕ್ಕೆ ದೊಡ್ಡ ಸಿಡಿಲು ಬಡೆಯುವಂತೆ ಮಾಡಿದೆ. ರಾಘವೇಂದ್ರ ರಾಜ್​ಕುಮಾರ್ ಮಗ ಯುವ ರಾಜ್​ಕುಮಾರ್ ಪತ್ನಿ ಶ್ರೀದೇವಿಯಿಂದ ದೂರವಾಗ್ತಿರುವ ಸುದ್ದಿ ಸ್ಯಾಂಡಲ್​ವುಡ್​ ಮಂದಿಗೂ ದಿಗ್ಭ್ರಮೆ ಮೂಡಿಸಿದೆ. ದೊಡ್ಮನೆ ಕುಟುಂಬದಲ್ಲಿ ಡಿವೋರ್ಸ್ ಅನ್ನೋ ವಿಚಾರ ಫ್ಯಾನ್ಸ್​ಗೂ ಕೂಡ ಅರಗಿಸಿಕೊಳ್ಳಲು ಆಗ್ತಿಲ್ಲ

ಸ್ಯಾಂಡಲ್​ವುಡ್ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್

ಡಾ. ರಾಜ್​ಕುಮಾರ್ ಮೊಮ್ಮಗ.. ರಾಘವೇಂದ್ರ ರಾಜ್​ಕುಮಾರ ಕಿರಿಯ ಮಗ ಯುವ ರಾಜ್​ಕುಮಾರ್ ಈಗ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆಘಾತಕಾರಿ ವಿಚಾರ ಏನಂದ್ರೆ ಅಣ್ಣಾವ್ರ ಕುಟುಂಬದಲ್ಲಿ ಇದು ಮೊಟ್ಟ ಮೊದಲ ಡಿವೋರ್ಸ್ ಕೇಸ್. ಮೂರು ತಲೆಮಾರುಗಳಿಂದ ಅಣ್ಣಾವ್ರ ಕುಟುಂಬದಲ್ಲಿ ಎಂದಿಗೂ ಇಂಥಾದೊಂದು ಕೆಟ್ಟ ಸುದ್ದಿ ಬಂದಿರಲಿಲ್ಲ. ಹಾಲು ಜೇನಿನಂತೆ ಸಂಸಾರ ಸಾಗಿಸ್ತಿದ್ದ ಅಣ್ಣಾವ್ರ ಕುಟುಂಬದಲ್ಲಿ ಈಗ ಯುವ ರಾಜ್​ಕುಮಾರ್ ಪತ್ನಿ ಶ್ರೀದೇವಿಯಿಂದ ದೂರಾಗುವ ನಿರ್ಧಾರ ಮಾಡಿರೋದು ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

ಮೊನ್ನೆ ಮೊನ್ನೆಯಷ್ಟೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಡಿವೋರ್ಸ್ ವಿಚಾರ ಹಲ್ ಚಲ್​ ಸೃಷ್ಟಿ ಮಾಡಿತ್ತು. ಈಗ ಸ್ಯಾಂಡಲ್​ವುಡ್ ದೊಡ್ಮನೆ ಕುಡಿ ಯುವ ರಾಜ್​ಕುಮಾರ್​ ಕೂಡ ಪತ್ನಿಯಿಂದ ಡಿವೋರ್ಸ್​ ಗಾಗಿ ಅರ್ಜಿ ಸಲ್ಲಿಸಿರುವ ವಿಚಾರ ದೊಡ್ಮನೆ ಅಭಿಮಾನಿಗಳ ಬಳಗಕ್ಕೆ ದೊಡ್ಡ ಆಘಾತವನ್ನೆ ನೀಡಿದೆ.

ಇದನ್ನೂ ಓದಿ: ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್​​ ಕುರಿತು ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ

2019 ರಲ್ಲಿ ಮದುವೆ 5 ವರ್ಷಕ್ಕೆ ಡಿವೋರ್ಸ್

2019 ಮೇ ತಿಂಗಳಲ್ಲಿ ಯುವ ರಾಜ್​ಕುಮಾರ್ ಮತ್ತು ಶ್ರೀದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.. ಸ್ವರ್ಗವೇ ಧರೆಗಿಳಿದಂತೆ ಯುವ ಮದುವೆ ಅದ್ಧೂರಿಯಾಗಿ ನೇರವೇರಿತ್ತು. ದೊಡ್ಮನೆ ಕುಟುಂಬ ಅಂದ್ರೆ ಕೇಳ್ಬೇಕಾ.. ಸ್ಯಾಂಡಲ್​ವುಡ್ ದಿಗ್ಗಜ್ಜರೆಲ್ಲ ಈ ಮದುವೆಯಾಗಿ ಸಾಕ್ಷಿಯಾಗಿದ್ರು. ಆದ್ರೆ ಮದುವೆಯಾದ ಜಸ್ಟ್ 5 ವರ್ಷಕ್ಕೆ ಯುವ ಪತ್ನಿ ಶ್ರೀದೇವಿಯಿಂದ ದೂರವಾಗೋ ನಿರ್ಧಾರ ಮಾಡಿ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ 6ನೇ ತಾರೀಕು ಅರ್ಜಿ ಸಲ್ಲಿಸಿದ್ದ ಯುವ ರಾಜ್​ಕುಮಾರ್

ಕಳೆದ 6ನೇ ತಾರೀಕು ಚಂದನ್​ ಶೆಟ್ಟಿ ಮತ್ತು ನಿವೇದಿತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನಾನೊಂದು ತೀರ ನೀನೊಂದು ತೀರ ಅಂತ ಬೇರೆ ಬೇರೆಯಾಗಿದ್ರೂ. ಅಚ್ಚರಿಯೂ ಅಥವಾ ಆಘಾತವೂ ಅದೇ ದಿನ ಅಂದ್ರೆ ಜೂನ್ 6ನೇ ತಾರೀಕು ದೊಡ್ಮನೆ ಮೊಮ್ಮಗ ಯುವರಾಜ್​ಕುಮಾರ್ ಕೂಡ ಪತ್ನಿ ಶ್ರೀದೇವಿಯಿಂದ ಬೇರೆಯಾಗೋದಕ್ಕೆ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿದ್ದರು ಅಂತ ತಿಳಿದು ಬಂದಿದೆ. ದುರಂತ ಏನಂದ್ರೆ ಈಗತಾನೇ ಯುವರಾಜ್​ಕುಮಾರ್ ಇಂಡಸ್ಟ್ರಿಯಲ್ಲಿ ಗಟ್ಟಿ ಹೆಜ್ಜೆ ಇಡೋದಕ್ಕೆ ಮುಂದಾಗಿದ್ರು. ಇಂಥಾ ಹೊತ್ತಲ್ಲಿ ಪತ್ನಿಯಿಂದ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿರೋದು ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.

ಎಂಸಿ ಌಕ್ಟ್ ಸೆಕ್ಷನ್ 13(1) (ia) ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿ

ಪತ್ನಿಯಿಂದ ದೂರ ಆಗೋ ನಿರ್ಧಾರ ಮಾಡಿರುವ ಯುವ ರಾಜ್​ಕುಮಾರ್ ಡಿವೋರ್ಸ್ ಅರ್ಜಿಯಲ್ಲಿ ಕೆಲ ಆತಂಕಕಾರಿ ಅಂಶಗಳನ್ನ ಉಲ್ಲೇಖಿಸಿದ್ದಾರೆ. ಎಂ ಸಿ ಆ್ಯಕ್ಟ್ 13(1) IA ಅಡಿಯಲ್ಲಿ ವಿಚ್ಛೇಧನ ಸಲ್ಲಿಸಿದ್ದಾರೆ. ಈ ಸೆಕ್ಷನ್ ಪ್ರಕಾರ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಕಿರುಕುಳ ಕೊಟ್ಟಂತ ಸಂದರ್ಭದಲ್ಲಿ ಈ ಸೆಕ್ಷನ್ ಹಾಕಲಾಗುತ್ತೆ. ಈಗ ಯುವ ಕೂಡ ತಮ್ಮ ಪತ್ನಿ ಶ್ರೀದೇವಿ ವಿರುದ್ಧ ಇದೇ ಆರೋಪ ಮಾಡಿದ್ದು, ಪತ್ನಿಯಿಂದ ಮಾನಸಿಕ ಕಿರುಕುಳ, ನನ್ನ ಜೊತೆಯಲ್ಲಿ ವಾಸವಿಲ್ಲ ಅನ್ನೋ ಗಂಭೀರ ಅಂಶಗಳನ್ನ ಉಲ್ಲೇಖಿಸಿ ಡಿವೋರ್ಸ್ ನೀಡಬೇಕು ಅಂತ ಅರ್ಜಿ ಸಲ್ಲಿಸಿದ್ದಾರೆ. ಕಳೆದ 6ನೇ ತಾರೀಕು ಈ ಅರ್ಜಿ ಸಲ್ಲಿಕೆಯಾಗಿದ್ದು, ಈ ಅರ್ಜಿಯನ್ನ ಕೋರ್ಟ್ ಪರಿಗಣಿಸಿ ಜುಲೈ 4ನೇ ತಾರೀಕು ವಿಚಾರಣೆ ಕೂಡ ನಿಗದಿ ಮಾಡಿದೆ.

ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ದೂರ..ದೂರ

ಮೂಲಗಳ ಪ್ರಕಾರ ಕಳೆದು ಆರೇಳು ತಿಂಗಳಿಂದ ಶ್ರೀದೇವಿ ಮತ್ತು ಯುವ ದೂರ ದೂರ ಇದ್ದಾರೆ ಎನ್ನಲಾಗಿದೆ. ಯಾಕಂದ್ರೆ ಕೆಲ ತಿಂಗಳುಗಳಿಂದ ಶ್ರೀದೇವಿ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ದೊಡ್ಮನೆಯ ಯಾವುದೇ ಕಾರ್ಯಕ್ರಮವಿದ್ರೂ ಶ್ರೀದೇವಿ ಪತಿ ಜೊತೆ ಇರ್ತಿದ್ರು. ಆದ್ರೆ, ಇತ್ತಿಚ್ಚೀನ ದಿನಗಳಲ್ಲಿ ಶ್ರೀದೇವಿ ಎಲ್ಲ ವೇದಿಕೆಯಲ್ಲೂ ನಾಪತ್ತೆಯಾಗಿದ್ದರು. ಯುವ ಸಿನಿಮಾದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದು ಬಿಟ್ರೆ ಸಿನಿಮಾದ ಶೂಟಿಂಗ್ ಅಥವಾ ರಿಲೀಸ್ ಪ್ರಮೋಷನ್​ನಲ್ಲಿ ಶ್ರೀದೇವಿ ಕಾಣಿಸಿಕೊಂಡಿರಲಿಲ್ಲ.ಹೀಗಾಗಿ ಆರೇಳು ತಿಂಗಳಿಂದಲೇ ಇಬ್ಬರೂ ದೂರ ಇದ್ರೂ ಅನ್ನೋದು ಬಲ್ಲ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ.

ಪತ್ನಿ ಜೊತೆಗಿನ ಎಲ್ಲ ಫೋಟೋ ಡಿಲೀಟ್ ಮಾಡಿದ ಯುವ

ಕಾಕತಾಳಿಯವೆಂಬಂತೆ ಯುವ ಪತ್ನಿ ಜೊತೆಗಿರುವ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಇನ್​ಸ್ಟಾದಲ್ಲಿ ಯುವ ಮತ್ತು ಶ್ರೀದೇವಿ ಜೊತೆಗಿರುವ ಒಂದೇ ಒಂದು ಫೋಟೋ ಕೂಡ ಇಲ್ಲ. ವಿಚ್ಛೇದನ ಕಾರಣಕ್ಕೆ ಯುವ ಪತ್ನಿ ಫೋಟೋ ಡಿಲೀಟ್ ಮಾಡಿದ್ರಾ? ಅನ್ನೋದು ಕೂಡ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳೋ ವಿಚಾರಕ್ಕೆ ಡಿವೋರ್ಸ್​ ಆಯ್ತಾ? ಈ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ಯುವ ವಿಚ್ಛೇಧನ.. ಶಿವರಾಜ್​ಕುಮಾರ್ ಹೇಳಿದ್ದೇನು?

ಯುವ ವಿಚ್ಛೇಧನದ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್​ಕುಮಾರ್ ಈ ವಿಚಾರದ ಬಗ್ಗೆ ನಮಗೆ ಮಾಹಿತಿಯಿಲ್ಲ. ಹೀಗಾಗಿ ಗೊತ್ತಿಲ್ದೇ ಮಾತಾಡಬಾರದು.. ನನಗೆ ಮಾಹಿತಿ ಬಂದ್ಮೇಲೆ ಅದರ ಬಗ್ಗೆ ಮಾತನಾಡ್ತೀನಿ ಅಂತ ಹೇಳಿದ್ರು.

ಇದನ್ನೂ ಓದಿ: ಮೂರನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀದೇವಿ ಅವರ ತಂದೆ ಯುವ ಅವರ ಮಾವ ಬೈರಪ್ಪ ನನ್ನ ಮಗಳ ಹಾಗು ಯುವ ನಡುವಿನ ವೈಮನಸ್ಸು ನಮಗೆ ಮೊದಲೇ ಗೊತ್ತಿತ್ತು. ನಾನು ಶಿವರಾಜ ಕುಮಾರ್ ಬಳಿ ಮಾತನಾಡಬೇಕು ಅಂದುಕೊಂಡಿದ್ದೆ ಆದರೆ ಅದು ಸಾಧ್ಯವಾಗಲೇ ಇಲ್ಲ ಅಂತ ಹೇಳಿದ್ದಾರೆ.

ಸದ್ಯ ಯುವ ಸಲ್ಲಿಸಿರುವ ಡಿವೋರ್ಸ್ ಅರ್ಜಿಯನ್ನ ನ್ಯಾಯಾಲಯ ಸ್ವೀಕರಿಸಿದ್ದು, ಜುಲೈ 4 ರಂದು ವಿಚಾರಣೆಗೆ ಕರೆದಿದೆ. ಒಬ್ಬರನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಯುವ ಮತ್ತು ಶ್ರೀದೇವಿ ಬಾಳಲ್ಲಿ ಬಿರುಕು ಏಳಲು ಕಾರಣವಾಗಿದ್ದು ಏನು? ಚೆಂದದ ದಾಂಪತ್ಯಕ್ಕೆ ಗರ ಬಡೆದಿದ್ದು ಯಾಕೆ? ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/06/Yuva-Rajkumar-Divorce-12.jpg

Load More