/newsfirstlive-kannada/media/post_attachments/wp-content/uploads/2024/06/vidhana-parishat.jpg)
ಹೊಸ ಸಂಸತ್ ಭವನ
ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರನ್ನು ಸಿಐಎಸ್​ಎಫ್​ ಯೋಧರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತರನ್ನು ಖಾಸಿಂ, ಮೋನಿಸ್​, ಸೋಯೆಬ್​ ಎಂದು ಗುರುತಿಸಲಾಗಿದೆ.
ಸೋಯೆಬ್​ ಗುರುತಿನ ಚೀಟಿಯನ್ನು ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ್ದಾನೆ. ಈತ ಉತ್ತರದ ಪ್ರದೇಶದ ಹಾಪುರ್​ ನಿವಾಸಿ ಎಂದು ಗುರುತಿನ ಚೀಟಿಯಲ್ಲಿ ನಮೂದಿಸಿ ಸಂಸತ್​ ಪ್ರವೇಶಿಸಲು ಮುಂದಾಗಿದ್ದಾನೆ. ಸದ್ಯ ಮೂವರನ್ನು ಅರೆಸ್ಟ್​ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ ಅಡಿಯಲ್ಲಿ ಬಂಧಿಸಲಾಗಿದೆ.
ಬಂಧಿತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. 419, 465,468, 120ಬಿ ಸೆಕ್ಷನ್​ ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿದ್ದಾರೆ. ಮೂವರ ನಕಲಿ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ಕೀಳಲು ಮರವೇರಿದ ಮಗ.. ಕಾಲು ಜಾರಿ ಬಿದ್ದು ಸಾವು
ಕಳೆದ ವರ್ಷ ಡಿಸೆಂಬರ್​ನಲ್ಲಿ ಮೈಸೂರು ಮಾಜಿ ಸಂಸದರಾದ ಪ್ರತಾಪ್​ ಸಿಂಹ ಅವರಿಂದ ಅನುಮತಿ ಪಡೆದ ಆರು ವಿದ್ಯಾರ್ಥಿಗಳು ಸಂಸತ್ ಪ್ರವೇಶಿಸಿದ್ದರು. ಸಂಸತ್​ನಲ್ಲಿ ಹೊಗೆ ಡಬ್ಬಿ ಹಚ್ಚಿದ್ದರು. ಈ ಘಟನೆಯಲ್ಲಿ ಮೈಸೂರು ಮೂಲದ ವ್ಯಕ್ತಿಯೂ ಇದ್ದನು. ಇದೀಗ ಅಂತಹದೇ ಘಟನೆ ಎಂಬಂತೆ ನಕಲಿ ಗುರುತಿನ ಚೀಟಿ ಹಿಡಿದುಕೊಂಡು ಸಂಸತ್​ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us