/newsfirstlive-kannada/media/post_attachments/wp-content/uploads/2024/03/MYS_3_DIED.jpg)
ಮೈಸೂರು: ಬಿಸಿಲಿನ ತಾಪ ತಡೆಯಲಾಗದೇ ಈಜಲು ಕಪಿಲಾ ನದಿ ನೀರಿಗೆ ಇಳಿದ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದ ಬಳಿ ನಡೆದಿದೆ.
ಬಿಹಾರ ಮೂಲದ ಮಿಲನ್ (25), ಮೋಹನ್ (19), ತರುಣ್ (19) ಮೃತ ಕಾರ್ಮಿಕರು. ಮೂಲತಹ ಬಿಹಾರ್ ರಾಜ್ಯದವರಾದ ಇವರು ಮೈಸೂರಿ ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಿಸಿಲಿನ ಸೆಕೆ ತಾಳಲಾರದೆ ಈಜಲು ಎಂದು ಕಪಿಲ ನದಿ ನೀರಿಗೆ ಇಳಿದಿದ್ದಾರೆ. ಆದರೆ ಈ ವೇಳೆ ನದಿ ನೀರಿನ ಸುಳಿಗೆ ಸಿಕ್ಕ ಮೂವರು ಯುವರಕು ಹೊರ ಬರಲಾಗಿಲ್ಲ. ಇದರಿಂದ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ.
ಸದ್ಯ ಈ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನೀರಿನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಮಿಲನ್​ ಮೃತದೇಹ ಪತ್ತೆಯಾಗಿದ್ದು ಹೊರ ತೆಗೆಯಲಾಗಿದೆ. ಆದರೆ ಇನ್ನಿಬ್ಬರ ಮೃತದೇಹಗಳಿಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ