Advertisment

ಒಂದೇ ಕಾರಿನೊಳಗೆ ಬರೋಬ್ಬರಿ 30 ಕುರಿ, ಮೇಕೆ ತುಂಬಿದ್ದ ಕಿಲಾಡಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

author-image
Bheemappa
Updated On
ಒಂದೇ ಕಾರಿನೊಳಗೆ ಬರೋಬ್ಬರಿ 30 ಕುರಿ, ಮೇಕೆ ತುಂಬಿದ್ದ ಕಿಲಾಡಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
Advertisment
  • ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪೊಲೀಸರ ಕಾರ್ಯಾಚರಣೆ
  • ಒಂದಲ್ಲ, ಎರಡಲ್ಲ ಬರೋಬ್ಬರಿ ಮೂವತ್ತು ಕುರಿ, ಮೇಕೆಗಳನ್ನ ತುಂಬಿದ್ರು
  • ಇನ್ನು ಈ ಕುರಿ, ಮೇಕೆಗಳು ಯಾರವು ಎಂಬುದು ಮಾಹಿತಿ ಲಭ್ಯವಾಗಿಲ್ಲ

ನವದೆಹಲಿ: 30 ಕುರಿ ಮತ್ತು ಮೇಕೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಕುರಿ, ಮೇಕೆಗಳನ್ನ ಕಳ್ಳತನ ಮಾಡಿ ಬೇರೆ ಸ್ಥಳಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Advertisment

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನೊಳಗೆ 30 ಮೇಕೆಗಳು, ಕುರಿಗಳನ್ನು ತುಂಬಿಸಿ ಕಿರಾತಕರು ಬಚ್ಚಿಟ್ಟಿದ್ದರು. ಈ ಬಗ್ಗೆ ಪೊಲೀಸರಿಗೆ ಬೇರೆ ಮೂಲದಿಂದ ಮಾಹಿತಿ ಲಭ್ಯವಾಗಿತ್ತು. ಗ್ರೇ ಕಲರ್​ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನೊಳಗೆ ಪ್ರಾಣಿಗಳನ್ನು ತುಂಬಲಾಗಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ನಂತರ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಎಲ್ಲ ಮೇಕೆ ಮತ್ತು ಕುರಿಗಳನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ಗರ್ಲ್​ಫ್ರೆಂಡ್​ಗೆ ತಂದಿದ್ದ ಬರ್ಗರ್​ ಕಚ್ಚಿದ್ದಕ್ಕೆ ಸ್ನೇಹಿತನನ್ನೇ ಕೊಂದ ಕುಚುಕು ಗೆಳೆಯ

Advertisment

ಇದನ್ನೂ ಓದಿ: ಮತದಾರರಿಗೆ ಸಿಎಂ, ಡಿಸಿಎಂ ಫೋಟೋ ಇರೋ ಸ್ಮಾರ್ಟ್​ ಕಾರ್ಡ್​ ಹಂಚಿಕೆ ಆರೋಪ.. ಎಲ್ಲೆಲ್ಲಿ?

ಚಿಕ್ಕ ಕಾರಿನಲ್ಲಿ ಇಷ್ಟೊಂದು ಪ್ರಾಣಿಗಳನ್ನು ತುಂಬಿದ್ದೇಗೆ ಎಂಬುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ಕಳ್ಳತನ ಮಾಡಿ ಈ ರೀತಿ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪ್ರಾಣಿ ಹಿಂಸೆಗೆ ಸಮಾನವಾದ ಘಟನೆಯಾಗಿದ್ದು ಅಮಾನವೀಯ ಕೃತ್ಯ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಪೊಲೀಸರು ಎಲ್ಲ ಮೇಕೆಗಳು ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆದರೆ ಈ ಕುರಿ, ಮೇಕೆಗಳು ಯಾರವು ಎಂಬುದು ಇನ್ನು ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment