newsfirstkannada.com

ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ

Share :

Published June 10, 2024 at 10:55am

Update June 10, 2024 at 10:57am

  ಹೆಂಡತಿಗೆ ಡಿವೋರ್ಸ್​ ನೀಡಲು ಮುಂದಾದ ಗಂಡ

  ಮನನೊಂದು ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹೆಂಡತಿ

  3 ವರ್ಷದ ಮಗನನ್ನು ಬಿಟ್ಟು 40 ಅಡಿ ಎತ್ತರದ ಫ್ಲೈಓವರ್​ನಿಂದ ಜಿಗಿದ ಮಹಿಳೆ

ಪತಿ ವಿಚ್ಛೇದನ ನೀಡಲು ಮುಂದಾಗಿರುವುದಕ್ಕೆ ಬೇಸರಗೊಂಡ ಹೆಂಡತಿ ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಚೆನ್ನೈನ ವೆಲಚೇರಿಯಲ್ಲಿ ದುರ್ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದೆ. ತಾಂಬರಂ ಸಮೀಪದ ಸೆಂಬಕ್ಕಂನಲ್ಲಿ ವಾಸಿಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಶೋಭಾಗೆ ಕಾರ್ತಿಕ್​ (33) ಎಂಬವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ 3 ವರ್ಷದ ಮಗನಿದ್ದಾನೆ.

ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?

ದಂಪತಿ ನಡುವೆ ಭಿನ್ನಾಬಿಪ್ರಾಯವಿದ್ದ ಕಾರಣ ಕಾರ್ತಿಕ್​ ಡಿವೋರ್ಸ್​ ನೀಡಲು ಮುಂದಾಗಿದ್ದನು. ಶೋಭಾ ಆತನ ಜೊತೆಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದಾಗ ಅವನು ನಿರಾಕರಿಸಿದನು. ಕೊನೆಗೆ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಸೋತು ಕಣ್ಣೀರು ಹಾಕುತ್ತಾ ಹೊರಟ ಪಾಕ್​ ಆಟಗಾರ.. ನಸೀಮ್​ ಶಾ ಹೋರಾಟ ವ್ಯರ್ಥ

ಶೋಭಾ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಬೇಸರಗೊಂಡಿದ್ದ ಆಕೆ ಸ್ಕೂಟರ್​ನಲ್ಲಿ ವೆಲಚೇರಿ ಫ್ಲೈಓವರ್ ಬಳಿ ಬಂದಿದ್ದಾಳೆ. ಫ್ಲೈಓವರ್​ನ ತಡೆಗೋಡೆ ಏರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ

https://newsfirstlive.com/wp-content/uploads/2024/06/Flyover.jpg

Load More