newsfirstkannada.com

ಬ್ಯಾಂಕ್​ಗಳಿಗೆ ಬರೋಬ್ಬರಿ ₹34,000 ಕೋಟಿ ವಂಚನೆ: ಧೀರಜ್‌ ವಾಧವನ್ ಸೇರಿ ಮೂವರು ಅರೆಸ್ಟ್​

Share :

Published May 14, 2024 at 11:28pm

Update May 14, 2024 at 11:30pm

    ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿದ್ದಾರೆ ಅಂತ ಉಲ್ಲೇಖ

    ಮಾಜಿ ಡಿಎಚ್‌ಎಫ್‌ಎಲ್ ನಿರ್ದೇಶಕ ಧೀರಜ್ ವಾಧವನ್​ ಬಂಧನ

    2022ರಂದು ವಿಶೇಷ ನ್ಯಾಯಾಲಯದಿಂದ ಶಾಸನಬದ್ಧ ಜಾಮೀನು

ನವದೆಹಲಿ: ಒಂದಲ್ಲಾ ಎರಡಲ್ಲಾ ಬರೋಬ್ಬರಿ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ 34,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ DHFL (ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ನಿರ್ದೇಶಕ ಧೀರಜ್ ವಾಧವನ್​ರನ್ನು ಸಿಬಿಐ ತಂಡ ಬಂಧಿಸಿದೆ. ಆರೋಪಿ ಸ್ಥಾನದಲ್ಲಿರೋ ಮಾಜಿ ಡಿಎಚ್‌ಎಫ್‌ಎಲ್ ನಿರ್ದೇಶಕ ಧೀರಜ್ ವಾಧವನ್​ರನ್ನು ಮೇ 13 ರಂದು ಸಂಜೆ ಮುಂಬೈನಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ನಿನ್ನೆ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ

ಇದೇ ಕೇಸ್​ನಲ್ಲಿ ಡಿಎಚ್ಎಫ್ಎಲ್​​ನ ಮಾಜಿ ನಿರ್ದೇಶಕ ಮತ್ತು ಅವರ ಸಹೋದರ ಕಪಿಲ್​ರನ್ನು ಈ ಹಿಂದೆ ಜುಲೈ 19, 2022ರಂದು ಬಂಧಿಸಲಾಗಿತ್ತು. ಅಕ್ಟೋಬರ್ 15, 2022 ರಂದು ಕಪಿಲ್ ಮತ್ತು ಧೀರಜ್ ಸೇರಿದಂತೆ 75 ಸಂಸ್ಥೆಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ತನಿಖೆ ಅಪೂರ್ಣವಾಗಿದೆ ಮತ್ತು ಸಲ್ಲಿಸಲಾದ ಚಾರ್ಜ್​ಶೀಟ್​ನಲ್ಲಿ ತೊಡಕುಗಳಿವೆ ಎಂಬ ಆಧಾರದ ಮೇಲೆ ಡಿಸೆಂಬರ್ 3, 2022ರಂದು ವಿಶೇಷ ನ್ಯಾಯಾಲಯದಿಂದ ಶಾಸನಬದ್ಧ ಜಾಮೀನು ನೀಡಿತ್ತು. ಈ ಆದೇಶವನ್ನು ದೆಹಲಿ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ.

2010 ಮತ್ತು 2018 ರ ನಡುವೆ ಡಿಎಚ್ಎಫ್ಎಲ್​ಗೆ 42,871 ಕೋಟಿ ರೂ.ಗಳ ಸಾಲ ನೀಡಿದ್ದ 17 ಸದಸ್ಯರ ಸಾಲದಾತ ಒಕ್ಕೂಟದ ಮುಂಚೂಣಿ ಸಂಸ್ಥೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಮೇರೆಗೆ ಸಿಬಿಐ ವಾಧ್ವಾನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ಕಪಿಲ್ ಮತ್ತು ಧೀರಜ್ ವಾಧ್ವಾನ್ ಇತರರೊಂದಿಗೆ ಕ್ರಿಮಿನಲ್ ಪಿತೂರಿ ಮಾಡಿ ಸತ್ಯವನ್ನು ಮರೆ ಮಾಚಲಾಗಿದೆ ಎಂದು ಹೇಳಲಾಗಿದೆ.

ಒಟ್ಟು 17 ಒಕ್ಕೂಟಕ್ಕೆ 34,615 ಕೋಟಿ ರೂ.ಗಳನ್ನು ವಂಚಿಸಲಾಗಿದೆ. ಅಲ್ಲದೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಸಿದೆ. 17 ಸದಸ್ಯರ ಬ್ಯಾಂಕ್ ಒಕ್ಕೂಟಕ್ಕೆ 34,000 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಧೀರಜ್ ವಾಧ್ವಾನ್ ಮತ್ತು ಅವರ ಸಹೋದರ ಕಪಿಲ್ ವಾಧ್ವಾನ್ ಮತ್ತು ಅಜಯ್ ನವಂದರ್  ಆರೋಪಿಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಂಕ್​ಗಳಿಗೆ ಬರೋಬ್ಬರಿ ₹34,000 ಕೋಟಿ ವಂಚನೆ: ಧೀರಜ್‌ ವಾಧವನ್ ಸೇರಿ ಮೂವರು ಅರೆಸ್ಟ್​

https://newsfirstlive.com/wp-content/uploads/2024/05/DHFL-scam.jpg

Load More