newsfirstkannada.com

ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ

Share :

Published May 14, 2024 at 2:54pm

Update May 14, 2024 at 2:59pm

    ನಗರದ ಪ್ರಮುಖ ಬೀದಿಯಲ್ಲಿ ಸೈನಿಕನ ಪಾರ್ಥಿವ ಶರೀರ ಮೆರವಣಿಗೆ

    ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯ ವೀರಯೋಧ

    ಸರ್ಕಾರಿ ಗೌರವದೊಂದಿಗೆ ಬಳ್ಳಾರಿ ನಗರದಲ್ಲಿ ಯೋಧನ ಅಂತ್ಯ ಸಂಸ್ಕಾರ

ಬಳ್ಳಾರಿ: ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯ ಬಿಎಸ್​ಎಫ್ ಯೋಧನೋರ್ವ ಮೃತರಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಬಳ್ಳಾರಿಯ ಕೆ.ರಾಮಕೃಷ್ಣ ಮೃತರಾದ ಸೈನಿಕ. ಕೋಲ್ಕತ್ತಾದಿಂದ ಬಳ್ಳಾರಿ ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರದ ನಿವಾಸಕ್ಕೆ ಯೋಧನ ಪಾರ್ಥಿವ ಶರೀರವನ್ನು ಬಿಎಸ್​ಎಫ್​ ಯೋಧರು ತೆಗೆದುಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ ಬಿಎಸ್​ಎಫ್ ವಾಹನದ ಮೂಲಕ ಮೃತದೇಹವನ್ನು ತೆಗೆದುಕೊಂಡು ಬಂದಿದ್ದಾರೆ. ಸದ್ಯ ಬಳ್ಳಾರಿಯ ಎಂಜಿಯಿಂದ ಎಪಿಎಂಸಿವರೆಗೆ ಸೈನಿಕನ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿ ಗಾಡ್ ಆಫ್ ಆನರ್​ ಜತೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರು vs ಚೆನ್ನೈ ಕದನ ಅಲ್ಲವೇ ಅಲ್ಲ.. ಇದು ವಿರಾಟ್ ಕೊಹ್ಲಿ- ಧೋನಿ ನಡುವಿನ IPL ಬಿಗ್ ಬ್ಯಾಟಲ್​!

ಬಿಎಸ್​ಎಫ್ ಯೋಧ ಕೆ.ರಾಮಕೃಷ್ಣ ಅವರು ಕೋಲ್ಕತ್ತಾದ 145 ಬೆಟಾಲಿಯನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನೆಂಬುದು ಇದುವರೆಗೂ ತಿಳಿದು ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ

https://newsfirstlive.com/wp-content/uploads/2024/05/BLY_DIED.jpg

Load More