newsfirstkannada.com

380ರಲ್ಲಿ BJP ಗೆದ್ದಿರೋದು ಎಷ್ಟು? ಅಣ್ಣಾಮಲೈ ಬಿಚ್ಚಿಟ್ರು ಸ್ಫೋಟಕ ಚುನಾವಣಾ ಭವಿಷ್ಯ; ಹೇಳಿದ್ದೇನು?

Share :

Published May 15, 2024 at 3:37pm

    ಕರ್ನಾಟಕ ಸೇರಿ 380 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಕ್ತಾಯ

    ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ 163 ಕ್ಷೇತ್ರಗಳ ಮತದಾನ ಬಾಕಿ

    ಬಿಜೆಪಿ ನೇತೃತ್ವದ NDA, ಪ್ರತಿಪಕ್ಷ I.N.D.I.A ಎಷ್ಟು ಸ್ಥಾನಗಳಲ್ಲಿ ಗೆಲುವು?

ನವದೆಹಲಿ: ದೇಶಾದ್ಯಂತ 4 ಹಂತದ ಲೋಕಸಭಾ ಚುನಾವಣೆಗೆ ಈಗಾಗಲೇ ಮತದಾನ ಮುಕ್ತಾಯವಾಗಿದೆ. ಕರ್ನಾಟಕ ಸೇರಿದಂತೆ 380 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಈ ನಾಲ್ಕು ಹಂತದ ಮತದಾನ ಮುಗಿಯುತ್ತಿದ್ದಂತೆ ಯಾರು ಎಷ್ಟು ಕ್ಷೇತ್ರ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಇದುವರೆಗೂ ನಡೆದ ಮತದಾನದ ಪೈಕಿ 270 ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಗೆದ್ದಿದೆ. ಇನ್ನು ಬಾಕಿ ಉಳಿದ ಮೂರು ಹಂತದ ಚುನಾವಣೆಯಲ್ಲಿ NDA 400 ಕ್ಷೇತ್ರಗಳ ಗಡಿ ದಾಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ದೇಶದಾದ್ಯಂತ ನಾಲ್ಕು ಹಂತದಲ್ಲಿ ಮತದಾನ ಮುಗಿದಿದೆ. ಇನ್ನೂ ಬಾಕಿ ಉಳಿದಿರುವ 3 ಹಂತಗಳಲ್ಲಿ 163 ಕ್ಷೇತ್ರಗಳ ಮತದಾನ ನಡೆಯಬೇಕು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಬಿಜೆಪಿ ಈಗಾಗಲೇ ಸರಳ ಬಹುಮತದ ನಂಬರ್ ದಾಟಿದೆ. ಈಗ ಅತಿ ಹೆಚ್ಚು ಕ್ಷೇತ್ರಗಳಿರುವ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿಯಲ್ಲಿ ಮತದಾನ ಬಾಕಿ ಇದೆ. ನಾವು ವಾಸ್ತವವಾಗಿ ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿಗೆ 370 ಸೀಟು, ಎನ್‌ಡಿಎಗೆ 400 ಸೀಟು ಖಂಡಿತ ತಲುಪುತ್ತೇವೆ. ನೂರಕ್ಕೆ ನೂರರಷ್ಟು ನಮ್ಮ ಗುರಿ ತಲುಪುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: 10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು? ಅಫಿಡವಿಟ್‌ನಲ್ಲಿ ಹೇಳಿದ್ದೇನು? 

ಬಿಜೆಪಿ ದಿಗ್ಗಜ ನಾಯಕರ ಈ ಭರವಸೆಗೆ ಇಂಡಿಯಾ ಮೈತ್ರಿಕೂಟದ ನಾಯಕರು ಸೆಡ್ಡು ಹೊಡೆದಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಬಿಜೆಪಿ ಈ ಬಾರಿ 140 ಕ್ಷೇತ್ರಗಳಲ್ಲೂ ಗೆಲ್ಲಲ್ಲ ಎಂದಿದ್ದಾರೆ. 370 ಲೋಕಸಭಾ ಕ್ಷೇತ್ರದಲ್ಲಿ 295 ರಿಂದ 305 ಕ್ಷೇತ್ರಗಳಲ್ಲಿ ಇಂಡಿಯಾ ಗೆಲ್ಲುತ್ತೆ ಎಂದ ಟಿಎಂಸಿ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಎನ್‌ಡಿಎ-ಇಂಡಿಯಾ ಮೈತ್ರಿ ನಾಯಕರ ನಡುವೆ ಹೆಚ್ಟಿನ ಸೀಟು ಗೆಲ್ಲುವ ಬಗ್ಗೆ ಟಾಕ್ ವಾರ್ ಜೋರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

380ರಲ್ಲಿ BJP ಗೆದ್ದಿರೋದು ಎಷ್ಟು? ಅಣ್ಣಾಮಲೈ ಬಿಚ್ಚಿಟ್ರು ಸ್ಫೋಟಕ ಚುನಾವಣಾ ಭವಿಷ್ಯ; ಹೇಳಿದ್ದೇನು?

https://newsfirstlive.com/wp-content/uploads/2023/06/Annamalai.jpg

Load More