newsfirstkannada.com

10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು? ಅಫಿಡವಿಟ್‌ನಲ್ಲಿ ಹೇಳಿದ್ದೇನು?

Share :

Published May 14, 2024 at 8:33pm

Update May 14, 2024 at 8:52pm

    ಪ್ರಧಾನಿ ಮೋದಿ ಕೈಯಲ್ಲಿ ಸದ್ಯ 52 ಸಾವಿರದ 920 ರೂಪಾಯಿ ನಗದು

    ಮೋದಿ ಅವರು 45 ಗ್ರಾಂ ತೂಕದ 4 ಚಿನ್ನದ ಉಂಗುರ ಹೊಂದಿದ್ದಾರೆ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರಧಾನಿಗೆ ಎರಡು ಖಾತೆಗಳು

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಲೋಕಸಭಾ ಚುನಾವಣೆಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 11.40ರ ಪುಷ್ಯ ನಕ್ಷತ್ರ, ಅಭಿಜಿತ್ ಮುಹೂರ್ತದಲ್ಲಿ ವಾರಾಣಸಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.

ವಾರಾಣಸಿಯಲ್ಲಿ ಇಂದು ನಾಮಪತ್ರ ಸಲ್ಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರೋ ಅಫಿಡಫಿಡ್‌ನಲ್ಲಿ ಪ್ರಧಾನಿ ಮೋದಿ ಅವರ ಚರಾಸ್ತಿ ಮೌಲ್ಯ 3.02 ಕೋಟಿ ರೂಪಾಯಿ ಎನ್ನಲಾಗಿದೆ. ಪ್ರಧಾನಮಂತ್ರಿ ಮೋದಿ ಕೈಯಲ್ಲಿ ಸದ್ಯ 52 ಸಾವಿರದ 920 ರೂಪಾಯಿ ನಗದು ಇದೆ.

ಸ್ವಂತ ಮನೆ, ಕಾರು ಇಲ್ಲ!
ನರೇಂದ್ರ ಮೋದಿ ಅವರು 3 ಬಾರಿ ಸಿಎಂ, 2 ಸಲ ಪ್ರಧಾನಿ ಆಗಿದ್ದರೂ ಸ್ವಂತ ಜಮೀನು, ಮನೆ ಅಥವಾ ಕಾರು ಇಲ್ಲ. ಮೋದಿ ಅವರ ಬಳಿ 2 ಲಕ್ಷ 67 ಸಾವಿರದ 750 ರೂಪಾಯಿ ಮೌಲ್ಯದ 45 ಗ್ರಾಂ ತೂಕದ 4 ಚಿನ್ನದ ಉಂಗುರ ಹೊಂದಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ನಮೋ ಹೊಂದಿದ್ದಾರೆ. ಎಸ್‌ಬಿಐನ ಗಾಂಧಿನಗರ ಶಾಖೆಯಲ್ಲಿ 73 ಸಾವಿರದ 304 ರೂಗಳನ್ನು ಠೇವಣಿ ಮಾಡಿದ್ದಾರೆ. ಎಸ್‌ಬಿಐನ ವಾರಾಣಸಿ ಶಾಖೆಯ ಅಕೌಂಟ್​​ನಲ್ಲಿ ಕೇವಲ 7,000 ರೂಪಾಯಿ ಠೇವಣಿ ಹೊಂದಿದ್ದಾರೆ.

ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿಗೆ ಶುಭ ಮುಹೂರ್ತ.. ವಾರಾಣಸಿಯಲ್ಲಿ ಮೋದಿ ಇಂದು ಮಾಡಿದ್ದೇನು? ಟಾಪ್ 10 ಫೋಟೋ ಇಲ್ಲಿವೆ 

ನರೇಂದ್ರ ಮೋದಿ ಅವರು ತಮ್ಮ ಹೆಸರಲ್ಲಿ 2.85 ಕೋಟಿ ಎಫ್​​ಡಿ ಮಾಡಿಸಿಕೊಂಡಿದ್ದಾರೆ. 2018-19ರ ಆರ್ಥಿಕ ವರ್ಷದಲ್ಲಿ ಪ್ರಧಾನಿ ಮೋದಿ ಅವರು 11 ಲಕ್ಷ ರೂಪಾಯಿ ಹಾಗು 2022-23ರಲ್ಲಿ 23.5 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಮೋದಿ ವಿದ್ಯಾರ್ಹತೆ ಏನು?
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ವಿದ್ಯಾರ್ಹತೆ MA ಎಂದು ಘೋಷಣೆ ಮಾಡಿದ್ದಾರೆ. 1978ರಲ್ಲಿ ಮೋದಿ ಅವರು ದೆಹಲಿ ವಿವಿಯಲ್ಲಿ ಬಿಎ ಹಾಗೂ 1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ MA ಪದವಿ ಗಳಿಸಿರೋದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್‌ಗಳು ಇಲ್ಲ. ವಾರಾಣಸಿಯಲ್ಲಿ ಜೂನ್ 1ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಜೂನ್ 4ರಂದು ಮತದಾರನ ಭವಿಷ್ಯ ಹೊರಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು? ಅಫಿಡವಿಟ್‌ನಲ್ಲಿ ಹೇಳಿದ್ದೇನು?

https://newsfirstlive.com/wp-content/uploads/2024/05/Modi-Varanasi-4.jpg

Load More