newsfirstkannada.com

ಹ್ಯಾಟ್ರಿಕ್ ಗೆಲುವಿಗೆ ಶುಭ ಮುಹೂರ್ತ.. ವಾರಾಣಸಿಯಲ್ಲಿ ಮೋದಿ ಇಂದು ಮಾಡಿದ್ದೇನು? ಟಾಪ್ 10 ಫೋಟೋ ಇಲ್ಲಿವೆ

Share :

Published May 14, 2024 at 1:06pm

Update May 14, 2024 at 1:08pm

  ಪುಷ್ಯ ನಕ್ಷತ್ರ, ಅಭಿಜಿತ್ ಮುಹೂರ್ತದಲ್ಲಿ ಮೋದಿ ನಾಮಪತ್ರ ಸಲ್ಲಿಕೆ

  5 ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲಿಸಲು ಬಿಜೆಪಿ ಪ್ಲ್ಯಾನ್

  ರಾಹುಲ್ ಗಾಂಧಿ ಸ್ಪರ್ಧಿಸಿರುವ ರಾಯ್‌ಬರೇಲಿ ಬಗ್ಗೆ ಮೋದಿ ಹೇಳಿದ್ದೇನು?

ವಾರಾಣಸಿ: ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿ ಹುದ್ದೆಗೇರುವ ಆಶಯದಲ್ಲಿರುವ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ವಾರಾಣಸಿಯಿಂದಲೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಬೆಳಗ್ಗೆ 11.40ರ ಪುಷ್ಯ ನಕ್ಷತ್ರ, ಅಭಿಜಿತ್ ಮುಹೂರ್ತದಲ್ಲಿ ವಾರಾಣಸಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ಮಾಡಿದರು.

ಈ ಶುಭ ಮುಹೂರ್ತದಲ್ಲೇ ನಾಮಪತ್ರ ಸಲ್ಲಿಸಿದರೆ ಆನಂದ ಯೋಗ ಪ್ರಾಪ್ತಿ ಆಗುತ್ತೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ: ‘ಪಾಕಿಸ್ತಾನಕ್ಕೆ ಬಳೆ ತೊಡಿಸೋಣ ಬಿಡಣ್ಣ’- ಫಾರೂಕ್‌ ಅಬ್ದುಲ್ಲಾಗೆ ಪ್ರಧಾನಿ ಮೋದಿ ಟಾಂಗ್​! 

ಈ ಬಾರಿ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಪಂಡಿತ್‌ ಗಣೇಶ್ವರ ಶಾಸ್ತ್ರಿ ಸೂಚಕರಾಗಿ ಸಹಿ ಹಾಕಿದ್ದಾರೆ. ಗಣೇಶ್ವರ ಶಾಸ್ತ್ರಿ ಅವರ ಜೊತೆಗೆ ಬೈಜನಾಥ್ ಪಟೇಲ್, ಲಾಲ್ ಚಂದ್ ಕುಶ್ವಾಹ, ಸಂಜಯ್ ಸೋನಕರ್ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದ್ದಾರೆ.

2014, 2019ರ ಬಳಿಕ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

2024ರಲ್ಲಿ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅವರನ್ನು 5 ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲಿಸಲು ಬಿಜೆಪಿ ಮೆಗಾ ಪ್ಲ್ಯಾನ್ ಮಾಡಿದೆ.

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವು ದಶಅಶ್ವಾಮೇಧ ಘಾಟ್‌ನಲ್ಲಿ ಗಂಗಾಪೂಜೆ ಮಾಡಿದರು.

ಸ್ಥಳಿಯ ಆರು ಅರ್ಚಕರ ಸಮ್ಮುಖದಲ್ಲಿ ಗಂಗಾ ಮಾತೆಗೆ ಮೋದಿ ಪೂಜೆ ಸಲ್ಲಿಸಿದ್ದಾರೆ.

ಮೋದಿ ಪೂಜೆಯ ಹಿನ್ನಲೆಯಲ್ಲಿ ವಿಶೇಷ ತೇಲುವ ನೆಲಹಾಸಿಗೆ ನಿರ್ಮಾಣ ಮಾಡಲಾಗಿತ್ತು. ದಶಾಶ್ವಮೇಧ ಘಾಟ್‌ನಲ್ಲಿ ಭಾರಿ ಭದ್ರತೆಯಲ್ಲಿ ಗಂಗಾಪೂಜೆ ನೆರವೇರಿಸಿದ ಮೋದಿ ಅವರು ಜನರತ್ತ ಕೈ ಬೀಸಿದರು.

ಇದನ್ನೂ ಓದಿ: ಚುನಾವಣೆ ಬಗ್ಗೆ ಭವಿಷ್ಯ ನುಡಿದ ಪ್ರಧಾನಿ ಮೋದಿ.. ಅಷ್ಟಕ್ಕೂ ಏನಂದ್ರು ಅವರು..? 

ಬೆಳಗ್ಗೆ 10.15ಕ್ಕೆ ಕಾಶಿಯ ಕೊತ್ವಾಲ ಕಾಲಭೈರವನ ದರ್ಶನ ಪಡೆದ ನರೇಂದ್ರ ಮೋದಿ ಅವರು ಬಳಿಕ ಚುನಾವಣಾಧಿಕಾರಿ ಕಚೇರಿಗೆ ತೆರಳಿದರು. ಪ್ರಧಾನಿ ಮೋದಿ ಅವರಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದರು.

ವಾರಾಣಸಿ ನಾಮಪತ್ರ ಸಲ್ಲಿಸುವ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರವು ಗೆಲ್ಲೋದಿಲ್ಲ. ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಕ್ಲೀನ್‌ಸ್ವೀಪ್ ಅಂದ್ರೆ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದಿದ್ದಾರೆ.

ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿರುವ ಮೋದಿ ಅವರು ವಯನಾಡಿನಲ್ಲಿ ಚುನಾವಣೆಯಾದ ನಂತರ ರಾಹುಲ್ ಗಾಂಧಿ ಮಾತಿನ ಶೈಲಿ ಬದಲಾಗಿದೆ. ವಯನಾಡಿನಲ್ಲಿಯೂ ರಾಹುಲ್ ಗಾಂಧಿ ಸೋಲುವ ಭಯದಲ್ಲಿದ್ದಾರೆ.

ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತ ನಂತರ ಒಂದೇ ಒಂದು ಬಾರಿ ರಾಹುಲ್ ಗಾಂಧಿ ಅಮೇಥಿಗೆ ಹೋಗಿಲ್ಲ. ಅಬ್ ಕಿ ಬಾರ್ 400 ಪಾರ್ ಘೋಷಣೆ ನಾವು ಕೊಟ್ಟಿದ್ದಲ್ಲ. ಜನರೆ ಈ ಬಾರಿ 400 ಕ್ಷೇತ್ರ ನೀಡಲು ನಿರ್ಧರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹ್ಯಾಟ್ರಿಕ್ ಗೆಲುವಿಗೆ ಶುಭ ಮುಹೂರ್ತ.. ವಾರಾಣಸಿಯಲ್ಲಿ ಮೋದಿ ಇಂದು ಮಾಡಿದ್ದೇನು? ಟಾಪ್ 10 ಫೋಟೋ ಇಲ್ಲಿವೆ

https://newsfirstlive.com/wp-content/uploads/2024/05/Modi-Varanasi-13.jpg

Load More